ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?

Post Office RD Account: ನ್ಯಾಷನಲ್ ಸೇವಿಂಗ್ಸ್ ರೆಕರಿಂಗ್ ಡೆಪಾಸಿಟ್ ಅಕೌಂಟ್ ತೆರೆದು ಮಾಸಿಕವಾಗಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ಈ ಸ್ಕೀಮ್​ನಲ್ಲಿ ತಿಂಗಳಿಗೆ 100 ರೂ ಮೇಲ್ಪಟ್ಟು ಹೂಡಿಕೆ ಮಾಡಬಹುದು. ಮಾಸಿಕ 5,000 ರೂ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ 57,000 ರೂಗೂ ಅಧಿಕ ಬಡ್ಡಿ ಸಂಪಾದನೆ ಮಾಡಬಹುದು.

ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್?
ಪೋಸ್ಟ್ ಆಫೀಸ್
Image Credit source: Shutterstock

Updated on: May 13, 2026 | 6:19 PM

ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಕೆಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಸ್ಕೀಮ್ (Post Office National Savings Recurring Deposit Account) ಒಂದು. ಇದು ಬ್ಯಾಂಕುಗಳಲ್ಲಿರುವ ಆರ್​ಡಿ ಪ್ಲಾನ್​ಗಳಂತೆ. ಮಾಸಿಕವಾಗಿ ನಿರ್ದಿಷ್ಟ ಹಣವನ್ನು ಡೆಪಾಸಿಟ್ ಆಗಿ ಇಡಲು ಅವಕಾಶ ಕೊಡುವ ಯೋಜನೆ ಇದು. ಬ್ಯಾಂಕ್​ಗಳ ರೆಕರಿಂಗ್ ಡೆಪಾಸಿಟ್​ಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ಆರ್​ಡಿಯಲ್ಲಿ ಗಳಿಸಬಹುದು.

ಪೋಸ್ಟ್ ಆಫೀಸ್ ಆರ್​ಡಿ ಯೋಜನೆಯ ವಿವರ

  • ಅರ್ಹತೆ: ಹತ್ತು ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ವ್ಯಕ್ತಿ ಈ ಸ್ಕೀಮ್ ಪಡೆಯಬಹುದು. ಅಪ್ರಾಪ್ತರಾಗಿದ್ದರೆ ಅವರ ಪರವಾಗಿ ಪಾಲಕರು ಅಕೌಂಟ್ ತೆರೆಯಬಹುದು. 18 ವರ್ಷ ವಯಸ್ಸು ಪೂರ್ಣಗೊಂಡ ಬಳಿಕ ಮತ್ತೊಮ್ಮೆ ಕೆವೈಸಿ ಮಾಡಿಸಬೇಕಾಗುತ್ತದೆ.

ಇದನ್ನೂ ಓದಿ: ಏಪ್ರಿಲ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್​ಗಿಂತ ತುಸು ಹೆಚ್ಚಳ

  • ಹೂಡಿಕೆ: ಕನಿಷ್ಠ ಮಾಸಿಕ ಹೂಡಿಕೆ 100 ರೂ ಮಾತ್ರ. ಗರಿಷ್ಠ ಎಷ್ಟು ಬೇಕಾದರೂ ಆಗಬಹುದು.
  • ಸ್ಕೀಮ್ ಅವಧಿ: ಐದು ವರ್ಷದವರೆಗೆ ಸ್ಕೀಮ್ ಇರುತ್ತದೆ. ಮೂರು ವರ್ಷ ಹೂಡಿಕೆ ಬಳಿಕ ಅಗತ್ಯಬಿದ್ದರೆ ಪ್ರೀಮೆಚ್ಯೂರ್ ಆಗಿ ಸ್ಕೀಮ್​ನಿಂದ ನಿರ್ಗಮಿಸಬಹುದು. ಐದು ವರ್ಷದ ಬಳಿಕ ಮತ್ತೂ ಐದು ವರ್ಷ ಹೂಡಿಕೆ ಮುಂದುವರಿಸಲೂ ಅವಕಾಶ ಇರುತ್ತದೆ.
  • ಬಡ್ಡಿ ದರ: ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್​ಗೆ ವಾರ್ಷಿಕ ಶೇ. 6.7 ಬಡ್ಡಿ ಸಿಗುತ್ತದೆ.

ತಿಂಗಳಿಗೆ 5,000 ರೂ ಹೂಡಿಕೆ ಮಾಡಿದರೆ ಎಷ್ಟು ಲಾಭ?

ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಪ್ಲಾನ್​ನಲ್ಲಿ ನೀವು 100 ರೂ ಮೇಲ್ಪಟ್ಟು ಎಷ್ಟು ಬೇಕಾದರೂ ಮಾಸಿಕವಾಗಿ ಹೂಡಿಕೆ ಮಾಡಬಹುದು. ಒಂದು ವೇಳೆ, ತಿಂಗಳಿಗೆ 5,000 ರೂನಂತೆ ಹೂಡಿಕೆ ಮಾಡಿದರೆ 5 ವರ್ಷದಲ್ಲಿ ಎಷ್ಟು ಸಿಗುತ್ತದೆ.

ಇದನ್ನೂ ಓದಿ: ಈವರೆಗೆ ಇದ್ದದ್ದು ಕಷ್ಟ ಅಲ್ಲ, ಮುಂದೆ ಕಾದೈತಾ ದೊಡ್ಡ ಸಂಕಷ್ಟ? ಉದಯ್ ಕೋಟಕ್ ಕೊಟ್ಟಿದ್ದಾರೆ ದೊಡ್ಡ ಎಚ್ಚರಿಕೆ

ಲೆಕ್ಕಾಚಾರದ ಪ್ರಕಾರ 5 ವರ್ಷದಲ್ಲಿ, ಅಂದರೆ 60 ತಿಂಗಳಲ್ಲಿ ನೀವು ಮಾಡುವ ಹೂಡಿಕೆ 3 ಲಕ್ಷ ರೂ ಆಗಿರುತ್ತದೆ. ಇದಕ್ಕೆ ಐದು ವರ್ಷದಲ್ಲಿ ಸಂಗ್ರಹವಾಗುವ ಬಡ್ಡಿ 57,299 ರೂ ಆಗಿರುತ್ತದೆ. ಅಂತಿಮವಾಗಿ ನಿಮಗೆ ಕೈಸೇರುವ ಮೊತ್ತ 3.57 ಲಕ್ಷ ರೂ ಆಗಿರುತ್ತದೆ.

ಯಾರಿಗೆ ಉಪಯುಕ್ತ ಈ ಪೋಸ್ಟ್ ಆಫೀಸ್ ಆರ್​ಡಿ ಪ್ಲಾನ್?

ಕಿರು ಅವಧಿಗೆ ಹಣ ಕೂಡಿಡಲು ಈ ಸ್ಕೀಮ್ ಬಹಳ ಉಪಯುಕ್ತ. ರಿಸ್ಕ್ ಇಲ್ಲದ ಹೂಡಿಕೆಯಾದ್ದರಿಂದ ಎಮರ್ಜೆನ್ಸಿ ಫಂಡ್, ಮಕ್ಕಳ ಫೀಸು ಇತ್ಯಾದಿಗೆ ಹಣ ಸೇರಿಸಲು ಅನುಕೂಲವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us