Rakesh Jhunjhunwala: ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ಪೋರ್ಟ್​ಫೋಲಿಯೋ ಮೇಲೆ ಈಗ ಎಲ್ಲರ ಕಣ್ಣು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 17, 2022 | 10:50 AM

Share Market: ರಾಕೇಶ್​ ಜುಂಜನ್​ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್​ವಾಲಾರ ಪೋರ್ಟ್​ಫೋಲಿಯೊದಲ್ಲಿ ಸಿಂಹಪಾಲು ಟೈಟಾನ್​ ಕಂಪನಿಯದ್ದಾಗಿದೆ.

Rakesh Jhunjhunwala: ‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಜುನ್​ವಾಲಾ ಪೋರ್ಟ್​ಫೋಲಿಯೋ ಮೇಲೆ ಈಗ ಎಲ್ಲರ ಕಣ್ಣು
ಭಾರತೀಯ ಷೇರುಪೇಟೆಯ ಯಶಸ್ಸಿನ ಕಥೆ ರಾಕೇಶ್ ಜುಂಜುನ್​ವಾಲಾ
Follow us on

ಮುಂಬೈ: ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ಇತ್ತೀಚೆಗಷ್ಟೇ ಹೃದಯ ಸ್ತಂಭನದಿಂದ ನಿಧನರಾದರು. ‘ಮನಿ ಮ್ಯಾಗ್ನೆಟ್’ ಎಂದೇ ಷೇರುಪೇಟೆ ಹೂಡಿಕೆದಾರರ ವಲಯದಲ್ಲಿ ಹೆಸರುವಾಸಿಯಾಗಿದ್ದ 62 ವರ್ಷದ ರಾಕೇಶ್​ ಜುಂಜುನ್​ವಾಲಾರ ಸಾವಿನ ನಂತರ ಅವರು ಹೊಂದಿದ್ದ ₹ 32,000 ಕೋಟಿ ಮೊತ್ತದ (4 ಶತಕೋಟಿ ಡಾಲರ್) ಪೋರ್ಟ್​ಫೋಲಿಯಲ್ಲಿರುವ ಷೇರುಗಳ ಬಗ್ಗೆ ಜನರಲ್ಲಿ ಕುತೂಹಲ ವ್ಯಕ್ತವಾಗಿದೆ. ಈ ಷೇರುಗಳ ವಹಿವಾಟನ್ನು ಹಲವು ಎಎಂಸಿಗಳು (Asset Management Company – AMC) ಮತ್ತು ಚಿಲ್ಲರೆ ಹೂಡಿಕೆದಾರರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.

ಸ್ವಂತ ಪರಿಶ್ರಮದಿಂದ ಹೂಡಿಕೆ ಆರಂಭಿಸಿದ್ದ ರಾಕೇಶ್​ ಜುಂಜುಲ್​ವಾಲಾ ಭಾರತದ ಪ್ರಗತಿಯ ಮೇಲೆ ವಿಶ್ವಾಸವಿಟ್ಟಿದ್ದರು. ಹಲವು ಉದ್ಯಮಗಳು ಮತ್ತು ಸ್ಟಾರ್ಟ್​ಅಪ್​ಗಳಲ್ಲಿ ಗಣನೀಯ ಪ್ರಮಾಣದ ಹಣ ತೊಡಗಿಸಿದ್ದರು. ಹಲವು ಭಾರತೀಯ ಕಂಪನಿಗಳ ಆಡಳಿತ ಮಂಡಳಿಗಳಲ್ಲಿ ಸ್ಥಾನ ಪಡೆದಿದ್ದರು.

ಏಷ್ಯಾದ 3ನೇ ಅತಿದೊಡ್ಡ ಷೇರುಪೇಟೆಯಾಗಿರುವ ಭಾರತದ ಹೂಡಿಕೆ ಜಗತ್ತಿನಲ್ಲಿ ಜುಂಜುನ್​ವಾಲಾರ ಮಾತಿಗೆ ತನ್ನದೇ ಆದ ಪ್ರಾಮುಖ್ಯತೆಯಿತ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿರುವ ಚಿಲ್ಲರೆ ಹೂಡಿಕೆದಾರರು ಜುಂಜುನ್​ವಾಲಾರ ಮಾತನ್ನು ಗೌರವಿಸಿ, ಅನುಸರಿಸುತ್ತಿದ್ದರು. ಮಾರುಕಟ್ಟೆಯ ‘ದೊಡ್ಡ ಗೂಳಿ’ (Big Bull) ಎನಿಸಿಕೊಂಡಿದ್ದ ಜುಂಜುನ್​ವಾಲಾ ಅವರ ಹೂಡಿಕೆ ಮತ್ತು ಮಾರಾಟವನ್ನು ಒಂದು ಪಂಥದ ರೀತಿಯಲ್ಲಿ ಅನುಸರಿಸುವ ವರ್ಗವೇ ಹುಟ್ಟಿಕೊಂಡಿತ್ತು. ಅವರ ಪ್ರತಿ ನಡೆಯನ್ನೂ ಹೂಡಿಕೆದಾರರು ಕಣ್ಣಲ್ಲಿಕಣ್ಣಿಟ್ಟು ಗಮನಿಸುತ್ತಿದ್ದರು.

ರಾಕೇಶ್​ ಜುಂಜನ್​ವಾಲಾ ಮತ್ತು ಅವರ ಪತ್ನಿ ರೇಖಾ ಜುಂಜುನ್​ವಾಲಾರ ಪೋರ್ಟ್​ಫೋಲಿಯೊದಲ್ಲಿ ಸಿಂಹಪಾಲು ಟೈಟಾನ್​ ಕಂಪನಿಯದ್ದಾಗಿದೆ. ದಂಪತಿಯ ಒಟ್ಟಾರೆ ಹೂಡಿಕೆಯ ಶೇ 3ರಷ್ಟು ಪಾಲು ಟೈಟಾನ್​ನಲ್ಲಿದೆ ಎಂದು ಹಣಕಾಸು ವಿದ್ಯಮಾನಗಳನ್ನು ವರದಿ ಮಾಡುವ ಬ್ಲೂಮ್​ಬರ್ಗ್​ ಹೇಳಿದೆ.

ಸ್ಟಾರ್ ಹೆಲ್ತ್​​ ಅಂಡ್ ಅಲೈಡ್ ಇನ್ಷುರೆನ್ಸ್ ಕಂಪನಿ, ಮೆಟ್ರೊ ಬ್ರಾಂಡ್ಸ್​​ ಲಿಮಿಟೆಡ್ (ಚಪ್ಪಲಿ ತಯಾರಿಸುವ ಕಂಪನಿ) ಮತ್ತು ಟಾಟಾ ಮೋಟಾರ್ಸ್​ನಲ್ಲಿ ಈ ದಂಪತಿ ಗಮನಾರ್ಹ ಪ್ರಮಾಣದಲ್ಲಿ ಹಣ ತೊಡಗಿಸಿದ್ದಾರೆ. ಸ್ಟಾರ್​ ಹೆಲ್ತ್, ಆಪ್​ಟೆಕ್ (ಐಟಿ) ಮತ್ತು ನಜಾರಾ ಟೆಕ್ನಾಲಜಿಸ್ (ವಿಡಿಯೊಗೇಮ್) ಕಂಪನಿಗಳ ಒಟ್ಟು ಬಂಡವಾಳದಲ್ಲಿ ಶೇ 10ಕ್ಕೂ ಹೆಚ್ಚಿನ ಪಾಲು ಜುಂಜುನ್​ವಾಲಾ ಅವರದ್ದಾಗಿದೆ.

Published On - 7:46 am, Wed, 17 August 22