ನವದೆಹಲಿ, ಆಗಸ್ಟ್ 30: ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾಗಿ ರಕ್ಷಾ ಬಂಧನ ಹಬ್ಬವನ್ನು (Raksha Bandhan Festival) ದೇಶಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 30 ಮತ್ತು 31ರಂದು ರಕ್ಷಾ ಬಂಧನ್ ಇದೆ. ಇವತ್ತು ಕೆಲ ನಗರಗಳಲ್ಲಿ ಆಚರಿಸಿದರೆ, ನಾಳೆ ಬೇರೆ ಕೆಲ ನಗರಗಳಲ್ಲಿ ರಕ್ಷಾ ಬಂಧನ್ ಹಬ್ಬ ಇದೆ. ಆರ್ಬಿಐ ಕ್ಯಾಲೆಂಡರ್ನ ಆಗಸ್ಟ್ ತಿಂಗಳ ರಜಾ ದಿನಗಳ ಪಟ್ಟಿಯಲ್ಲಿ (Bank holidays list) 30 ಮತ್ತು 31ನೇ ತಾರೀಖು ರಕ್ಷಾ ಬಂಧನ ಇದೆ. ಕೆಲ ನಗರಗಳಲ್ಲಿ ಬ್ಯಾಂಕುಗಳಿಗೆ ಆಗಸ್ಟ್ 30ರಂದು ರಜೆ ಇದ್ದರೆ, ಇನ್ನೂ ಕೆಲ ಬ್ಯಾಂಕುಗಳಲ್ಲಿ ಆಗಸ್ಟ್ 31ರಂದು ರಜೆ ಇದೆ.
ಆಗಸ್ಟ್ 30: ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ) ಮತ್ತು ಜೈಪುರ್ (ರಾಜಸ್ಥಾನ).
ಆಗಸ್ಟ್ 31: ತಿರುವನಂತಪುರಂ, ಕೊಚ್ಚಿ (ಕೇರಳ), ಗ್ಯಾಂಗ್ಟಕ್ (ಸಿಕ್ಕಿಂ), ಲಕ್ನೋ, ಕಾನಪುರ್ (ಉತ್ತರ ಪ್ರದೇಶ), ಡೆಹ್ರಾಡೂನ್ (ಉತ್ತರಾಖಂಡ್) ನಗರಗಳಲ್ಲಿ ರಜೆ ಇದೆ.
ಇದನ್ನೂ ಓದಿ: ಎರಡು ವರ್ಷದಿಂದ ವಹಿವಾಟು ಕಾಣದೆ ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆಗಳೆಷ್ಟು? ಜನ್ ಧನ್ ಖಾತೆಗಳೆಷ್ಟು? ಇಲ್ಲಿದೆ ಡೀಟೇಲ್ಸ್
ಬೆಂಗಳೂರು ಸೇರಿದಂತೆ ಕರ್ನಾಟಕ ಯಾವ ಕಡೆಯೂ ರಕ್ಷಾ ಬಂಧನ್ ಹಬ್ಬದ ಪ್ರಯುಕ್ತ ರಜೆಗಳಿಲ್ಲ. ಆಗಸ್ಟ್ 30 ಆಗಲೀ, 31ರಲ್ಲಾಗಲೀ ರಾಜ್ಯದ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಆರ್ಬಿಐ ಕ್ಯಾಲೆಂಡರ್ ಪ್ರಕಾರ ಭಾರತದಾದ್ಯಂತ ಸೆಪ್ಟಂಬರ್ ತಿಂಗಳಲ್ಲಿ 16 ದಿನ ರಜೆ ಇದೆ. ಭಾನುವಾರ ಮತ್ತು ಶನಿವಾರದ ರಜೆಗಳೂ ಇದರಲ್ಲಿ ಸೇರಿವೆ. ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಮೊದಲಾದ ಹಬ್ಬಗಳ ರಜೆಯೂ ಇದರಲ್ಲಿ ಒಳಗೊಂಡಿದೆ. ಈ ಪೈಕಿ ಕರ್ನಾಟಕದಲ್ಲಿ 8 ದಿನ ರಜೆ ಇದೆ. ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಬಿಟ್ಟರೆ ಉಳಿದವರು ಭಾನುವಾರ ಮತ್ತು ಶನಿವಾರದ ರಜೆಗಳಾಗಿವೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಬ್ಯಾಂಕುಗಳಿಗೆ 16 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ ಇದೆ, ಇದಲ್ಲಿದೆ ಪಟ್ಟಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ