ನವದೆಹಲಿ, ಆಗಸ್ಟ್ 1: ರ್ಯಾನ್ಸಮ್ವೇರ್ ದಾಳಿಯಿಂದಾಗಿ ಸುಮಾರು 300 ಸಣ್ಣ ಪುಟ್ಟ ಬ್ಯಾಂಕುಗಳ ಪಾವತಿ ವ್ಯವಸ್ಥೆ ತಾತ್ಕಾಲಕವಾಗಿ ಸ್ಥಗಿತಗೊಂಡ ಘಟನೆ ನಡೆದಿದೆ. ಈ ಬ್ಯಾಂಕುಗಳ ಗ್ರಾಹಕರು ಯುಪಿಐ ಸರ್ವಿಸ್ ಬಳಸಲು ಆಗುತ್ತಿಲ್ಲ. ಎಟಿಎಂಗಳಲ್ಲಿ ಆ ಬ್ಯಾಂಕ್ನ ಕಾರ್ಡ್ ಬಳಸಿ ಕ್ಯಾಷ್ ವಿತ್ಡ್ರಾ ಮಾಡಲೂ ಆಗುತ್ತಿಲ್ಲ ಎನ್ನಲಾಗಿದೆ. ಅದೃಷ್ಟಕ್ಕೆ ಇತರ ಬ್ಯಾಂಕಿಂಗ್ ಸರ್ವಿಸ್ನಲ್ಲಿ ವ್ಯತ್ಯಯವಾಗಿಲ್ಲ. ಈ ಸಣ್ಣ ಬ್ಯಾಂಕುಗಳಿಗೆ ಬ್ಯಾಂಕಿಂಗ್ ಟೆಕ್ನಾಲಜಿ ಸಿಸ್ಟಂ ಅನ್ನು ಒದಗಿಸಿರುವ ಸಿ-ಎಡ್ಜ್ ಟೆಕ್ಲಾಲಜೀಸ್ ಎಂಬ ಸಂಸ್ಥೆಯ ಸರ್ವರ್ ಮೇಲೆ ಈ ರ್ಯಾನ್ಸಮ್ವೇರ್ ದಾಳಿ ನಡೆದಿರುವುದು ಗೊತ್ತಾಗಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಸಂಸ್ಥೆ ನಿನ್ನೆ ಬುಧವಾರ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ರ್ಯಾನ್ಸಮ್ವೇರ್ ದಾಳಿಯಿಂದ ಸಿ ಎಡ್ಜ್ ಟೆಕ್ನಾಲಜಿಸ್ನ ಕೆಲ ಸಿಸ್ಟಂಗಳ ಮೇಲೆ ಪರಿಣಾಮ ಆಗಿರಬಹುದು. ಎನ್ಪಿಸಿಐ ನಿರ್ವಹಿಸುವ ರೀಟೇಲ್ ಪೇಮೆಂಟ್ ಸಿಸ್ಟಂ ಅನ್ನು ಬಳಸಲು ಸಿ ಎಡ್ಜ್ಗೆ ಸದ್ಯಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿಸಿದೆ.
ಏನಿದು ರ್ಯಾನ್ಸಮ್ವೇರ್ ದಾಳಿ?
ರ್ಯಾನ್ಸಮ್ವೇರ್ ಅಟ್ಯಾಕ್ ಎಂಬುದು ಒಂದು ವಿಧದ ಮಾಲ್ವೇರ್ ದಾಳಿ ರೀತಿಯದ್ದು. ಇಲ್ಲಿ ದಾಳಿಕೋರ ಅಥವಾ ದಾಳಿಕೋರರು ಯಾವುದೇ ಸಿಸ್ಟಂ ಅನ್ನು ಹ್ಯಾಕ್ ಮಾಡಿ ಅಲ್ಲಿನ ದತ್ತಾಂಶ, ಸಾಧನ, ಫೈಲ್ಗಳು ಅಥವಾ ಸಿಸ್ಟಂಗಳನ್ನು ಲಾಕ್ ಮಾಡಿ ಎನ್ಕ್ರಿಪ್ಟ್ ಮಾಡಬಹುದು. ಇದರಿಂದ ಬಳಕೆದಾರರಿಗೆ ಈ ಸಿಸ್ಟಂಗಳನ್ನು ಬಳಸಲು ಆಗುವುದಿಲ್ಲ. ಹಣ ಅಥವಾ ಯಾವುದಾದರೂ ಬೇಡಿಕೆ ಈಡೇರಿಕೆಗೆ ದಾಳಿಕೋರರು ಈ ಕೆಲಸ ಮಾಡಬಹುದು.
ಇದನ್ನೂ ಓದಿ: ಇನ್ಫೋಸಿಸ್ನಿಂದ 32,403 ಕೋಟಿ ರೂ ಜಿಎಸ್ಟಿ ಬಾಕಿ ಇದೆಯಾ? ಇಲ್ಲ ಎನ್ನುತ್ತಿದೆ ಐಟಿ ಸಂಸ್ಥೆ; ಯಾತಕ್ಕಾಗಿ ಈ ತೆರಿಗೆ?
ಸಿ ಎಡ್ಜ್ ಟೆಕ್ನಾಲಜೀಸ್ ಸಂಸ್ಥೆಯು ಎಸ್ಬಿಐ ಮತ್ತು ಟಿಸಿಎಸ್ ಜಂಟಿಯಾಗಿ ಸ್ಥಾಪಿತವಾಗಿದೆ. ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಇದು ಡಿಜಿಟಲ್ ತಂತ್ರಜ್ಞಾನದ ನೆರವು ಒದಗಿಸುತ್ತದೆ. ಮೂರು ದಿನಗಳ ಹಿಂದೆಯೇ ಈ ರ್ಯಾನ್ಸಮ್ವೇರ್ ದಾಳಿ ಆಗಿದೆ ಎನ್ನಲಾಗಿದೆ.
‘ಆರ್ಟಿಜಿಎಸ್, ಯುಪಿಐ ಪೇಮೆಂಟ್ಸ್ ಸೇರಿದಂತೆ ಎಲ್ಲಾ ಆನ್ಲೈನ್ ಟ್ರಾನ್ಸಾಕ್ಷನ್ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಆನ್ಲೈನ್ ಟ್ರಾನ್ಸಾಕ್ಷನ್ನಲ್ಲಿ ಹಣ ಕಳುಹಿಸಿದವರ ಖಾತೆಯಿಂದ ಹಣ ಕಡಿತಗೊಂಡಿದೆ. ಆದರೆ, ಹಣ ಸ್ವೀಕರಿಸಬೇಕಾದರೆ ಖಾತೆಗೆ ಹಣ ಜಮೆ ಆಗಿಲ್ಲ,’ ಎಂದು ರಾಷ್ಟ್ರೀಯ ಸಹಕಾರಿ ಒಕ್ಕೂಟದ ಛೇರ್ಮನ್ ದಿಲೀಪ್ ಸಂಘಾನಿ ಹೇಳಿದ್ದಾರೆ.
ಇದನ್ನೂ ಓದಿ: ಮನಸ್ಸನ್ನು ನಿಯಂತ್ರಿಸುತ್ತೆ ಈ ರಿಮೋಟ್ ಮೈಂಡ್ ಕಂಟ್ರೋಲ್ ತಂತ್ರಜ್ಞಾನ
ಸಿ-ಎಡ್ಜ್ ಟೆಕ್ನಾಲಜೀಸ್ನ ಸಿಸ್ಟಂನಲ್ಲಿ ರ್ಯಾನ್ಸಮ್ವೇರ್ ಅನ್ನು ಪತ್ತೆ ಮಾಡಲಾಗಿದೆ. ಎನ್ಪಿಸಿಐ ಸಹಾಯದಿಂದ ದುರಸ್ತಿ ಕೆಲಸ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸಿಸ್ಟಂ ಅನ್ನು ಸಹಜ ಸ್ಥಿತಿಗೆ ತರುವ ವಿಶ್ವಾಸ ಇದೆ. ಥರ್ಡ್ ಪಾರ್ಟಿ ಆಡಿಟ್ ಮಾಡಿಸಲಾಗುತ್ತಿದೆ. ಪಿಟಿಐ ವರದಿ ಪ್ರಕಾರ, ಈ ಮಾಲ್ವೇರ್ ದಾಳಿಯಿಂದ ಯಾವುದೇ ಹಣಕಾಸು ನಷ್ಟವಾದ ಬಗ್ಗೆ ಮಾಹಿತಿ ಇಲ್ಲ. ದೇಶಾದ್ಯಂತ ಇರುವ ಒಟ್ಟಾರೆ ಪಾವತಿ ವ್ಯವಸ್ಥೆಯಲ್ಲಿ ಈಗ ಬಾಧಿತವಾಗಿರುವ ಪಾವತಿ ಸಿಸ್ಟಂ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ