ಕ್ರೆಡಿಟ್ ಕಾರ್ಡ್ ವಿತರಣೆಯ ಮೂರು ನಿಬಂಧನೆ ಜಾರಿಗೆ ಗಡುವನ್ನು ವಿಸ್ತರಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ಕ್ರೆಡಿಟ್ ಕಾರ್ಡ್ ವಿತರಣೆಗೆ ಸಂಬಂಧಿಸಿದಂತೆ 3 ನಿಯಮಾವಳಿಗಳ ಅನುಷ್ಠಾನಕ್ಕಾಗಿ ಗಡುವು ವಿಸ್ತರಿಸಿ ಆರ್​ಬಿಐ ಅಧಿಸೂಚನೆ ಹೊರಡಿಸಿದೆ.

ಕ್ರೆಡಿಟ್ ಕಾರ್ಡ್ ವಿತರಣೆಯ ಮೂರು ನಿಬಂಧನೆ ಜಾರಿಗೆ ಗಡುವನ್ನು ವಿಸ್ತರಿಸಿದ ಭಾರತೀಯ ರಿಸರ್ವ್ ಬ್ಯಾಂಕ್
ಸಾಂದರ್ಭಿಕ ಚಿತ್ರ
Edited By:

Updated on: Jun 21, 2022 | 8:25 PM

ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಗಳವಾರದಂದು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ವಿತರಿಸಲು ಹೊಸ ನಿಯಂತ್ರಕ ಮಾರ್ಗಸೂಚಿಗಳ ಭಾಗವಾಗಿ ಮೂರು ನಿಬಂಧನೆಗಳನ್ನು ಜಾರಿಗೆ ತರುವ ಗಡುವನ್ನು ಅಕ್ಟೋಬರ್ 1, 2022ಕ್ಕೆ ವಿಸ್ತರಿಸಿದೆ. “ಉದ್ಯಮಕ್ಕೆ ಸಂಬಂಧಪಟ್ಟವರಿಂದ ಸ್ವೀಕರಿಸಲಾದ ವಿವಿಧ ಮನವಿಗಳನ್ನು ಪರಿಗಣಿಸಿ, ಮಾಸ್ಟರ್ ನಿರ್ದೇಶನದ ನಿಬಂಧನೆಗಳ ಅನುಷ್ಠಾನಕ್ಕಾಗಿ ಸಮಯವನ್ನು 1 ಅಕ್ಟೋಬರ್ 2022 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ,” ಎಂದು ಆರ್​ಬಿಐ ತನ್ನ ವೆಬ್‌ಸೈಟ್‌ನ ಅಧಿಸೂಚನೆಯಲ್ಲಿ ತಿಳಿಸಿದೆ.

ಮೊದಲ ನಿಬಂಧನೆಯು ವಿತರಿಸಿದ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚು ಕಾಲ ಗ್ರಾಹಕರು ಸಕ್ರಿಯಗೊಳಿಸದಿದ್ದರೆ ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಕಾರ್ಡ್ ಹೋಲ್ಡರ್‌ನಿಂದ ಒಂದು-ಬಾರಿ ಪಾಸ್‌ವರ್ಡ್ (OTP- ಒನ್​ ಟೈಮ್ ಪಾಸ್​ವರ್ಡ್) ಆಧಾರಿತ ಒಪ್ಪಿಗೆಯನ್ನು ಪಡೆಯುವುದನ್ನು ಕಡ್ಡಾಯಗೊಳಿಸುವುದು. ಕಾರ್ಡ್ ಅನ್ನು ಸಕ್ರಿಯಗೊಳಿಸಲು ಯಾವುದೇ ಒಪ್ಪಿಗೆಯನ್ನು ಪಡೆಯದಿದ್ದರೆ, ಕಾರ್ಡ್-ವಿತರಕರು ಗ್ರಾಹಕರಿಂದ ದೃಢೀಕರಣವನ್ನು ಕೋರಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಕ್ರೆಡಿಟ್ ಕಾರ್ಡ್ ಖಾತೆಯನ್ನು ಕ್ಲೋಸ್ ಮಾಡಬೇಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ಎರಡನೇ ನಿಬಂಧನೆಯು ಕಾರ್ಡ್ ವಿತರಕರು ಕಾರ್ಡ್​ದಾರರಿಂದ ಸ್ಪಷ್ಟವಾದ ಒಪ್ಪಿಗೆಯನ್ನು ಪಡೆಯದೆ ಯಾವುದೇ ಸಮಯದಲ್ಲಿ ಮಂಜೂರಾದ ಮತ್ತು ಕಾರ್ಡ್​ದಾರರಿಗೆ ಸೂಚಿಸಲಾದ ಕ್ರೆಡಿಟ್ ಮಿತಿಯನ್ನು ಉಲ್ಲಂಘಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಮೂರನೇ ನಿಯಂತ್ರಣವು ಬಡ್ಡಿಯ ಸಂಯೋಜನೆಗಾಗಿ ಪಾವತಿಸದ ಶುಲ್ಕಗಳನ್ನು ವಿತರಕರು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಿದೆ. “ಮಾಸ್ಟರ್ ಡೈರೆಕ್ಷನ್‌ನ ಉಳಿದ ನಿಬಂಧನೆಗಳ ಅನುಷ್ಠಾನಕ್ಕೆ ನಿಗದಿತ ಟೈಮ್‌ಲೈನ್ ಬದಲಾಗದೆ ಉಳಿಯುತ್ತದೆ,” ಎಂದು ಆರ್‌ಬಿಐ ಮಂಗಳವಾರ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ