ಬ್ಯಾಂಕ್
Image Credit source: Getty Images
ನವದೆಹಲಿ, ಅಕ್ಟೋಬರ್ 28: ನವೆಂಬರ್ ತಿಂಗಳಲ್ಲಿ ದೀಪಾವಳಿ, ಬಲಿಪಾಢ್ಯಮಿ, ಧನಲಕ್ಷ್ಮೀ ಪೂಜೆ, ಕನಕದಾಸ ಜಯಂತಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಇವೆ. ಶನಿವಾರ ಮತ್ತು ಭಾನುವಾರದ ರಜೆಗಳನ್ನೂ ಸೇರಿಸಿ 15 ದಿನಗಳವರೆಗೆ ರಜೆ ಇದೆ. ಇದರಲ್ಲಿ ಪ್ರಾದೇಶಿಕ ವಿಶೇಷ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 8 ದಿನಗಳಷ್ಟು ರಜೆ ಇದೆ.
2026ರ ನವೆಂಬರ್ನಲ್ಲಿ ದೇಶಾದ್ಯಂತ ಇರುವ ಬ್ಯಾಂಕ್ ರಜೆಗಳು
- ನವೆಂಬರ್ 1: ಭಾನುವಾರದ ರಜೆ
- ನವೆಂಬರ್ 8: ಭಾನುವಾರದ ರಜೆ
- ನವೆಂಬರ್ 9, ಸೋಮವಾರ: ದೀಪಾವಳಿ, ಲಕ್ಷ್ಮೀ ಪೂಜೆ, ಗೋವರ್ಧನ್ ಪೂಜೆ (ಹಲವು ರಾಜ್ಯಗಳಲ್ಲಿ ರಜೆ)
- ನವೆಂಬರ್ 10, ಮಂಗಳವಾರ: ದೀಪಾವಳಿ, ಬಲಿಪಾಡ್ಯಮಿ, ವಿಕ್ರಮ ಸಂವತ್ಸರ ಹೊಸ ವರ್ಷ (ಕರ್ನಾಟಕ ಸೇರಿ ಹಲವೆಡೆ ರಜೆ)
- ನವೆಂಬರ್ 11, ಬುಧವಾರ: ಭಾಯ್ ದೂಜ್, ನಿಂಗೋಲ್ ಚಕ್ಕೋಬಾ, ಚಿತ್ರಗುಪ್ತ್ ಜಯಂತಿ (ಬಂಗಾಳ, ಉತ್ತರಪ್ರದೇಶ, ಹಿಮಾಚಲ, ಸಿಕ್ಕಿಂ ಮೊದಲಾದೆಡೆ ರಜೆ)
- ನವೆಂಬರ್ 13, ಶುಕ್ರವಾರ: ವಂಗಲ ಉತ್ಸವ (ಮೇಘಾಲಯದಲ್ಲಿ ರಜೆ)
- ನವೆಂಬರ್ 14: ಎರಡನೇ ಶನಿವಾರದ ರಜೆ
- ನವೆಂಬರ್ 15: ಭಾನುವಾರದ ರಜೆ
- ನವೆಂಬರ್ 16, ಸೋಮವಾರ: ಛಾತ್ ಪೂಜೆ (ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ರಜೆ)
- ನವೆಂಬರ್ 20, ಶುಕ್ರವಾರ: ಇಗಸ್ ಬಾಗವಲ್ (ಉತ್ತರಾಖಂಡ್ನಲ್ಲಿ ರಜೆ)
- ನವೆಂಬರ್ 22: ಭಾನುವಾರದ ರಜೆ
- ನವೆಂಬರ್ 23, ಸೋಮವಾರ: ಸೆಂಗ್ ಕುಟ್ ಸ್ನೆಮ್ (ಮೇಘಾಲಯ ರಾಜ್ಯದಲ್ಲಿ ರಜೆ)
- ನವೆಂಬರ್ 24, ಮಂಗಳವಾರ: ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ (ದೆಹಲಿ, ಮಹಾರಾಷ್ಟ್ರ, ಬಂಗಾಳ, ಚಂಡೀಗಡ, ರಾಜಸ್ಥಾನ, ಯುಪಿ, ತೆಲಂಗಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ)
- ನವೆಂಬರ್ 27, ಶುಕ್ರವಾರ: ಕನಕದಾಸ ಜಯಂತಿ
- ನವೆಂಬರ್ 29: ಭಾನುವಾರದ ರಜೆ
ಇದನ್ನೂ ಓದಿ: Gold Rates 28 October: ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಏರಿಕೆ; ಇಲ್ಲಿದೆ ದರಪಟ್ಟಿ
ಕರ್ನಾಟಕದಲ್ಲಿ ನವೆಂಬರ್ನಲ್ಲಿ ಬ್ಯಾಂಕ್ ರಜಾದಿನಗಳು
- ನವೆಂಬರ್ 1: ಭಾನುವಾರದ ರಜೆ
- ನವೆಂಬರ್ 8: ಭಾನುವಾರದ ರಜೆ
- ನವೆಂಬರ್ 10, ಮಂಗಳವಾರ: ದೀಪಾವಳಿ, ಬಲಿಪಾಡ್ಯಮಿ
- ನವೆಂಬರ್ 14: ಎರಡನೇ ಶನಿವಾರದ ರಜೆ
- ನವೆಂಬರ್ 15: ಭಾನುವಾರದ ರಜೆ
- ನವೆಂಬರ್ 22: ಭಾನುವಾರದ ರಜೆ
- ನವೆಂಬರ್ 27, ಶುಕ್ರವಾರ: ಕನಕದಾಸ ಜಯಂತಿ
- ನವೆಂಬರ್ 29: ಭಾನುವಾರದ ರಜೆ
ಬ್ಯಾಂಕ್ ರಜಾದಿನಗಳಂದು ಬ್ಯಾಂಕ್ ಕಚೇರಿ ಬಾಗಿಲು ಬಂದ್ ಆಗಿರುತ್ತದಾದರೂ, ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಆನ್ಲೈನ್ನಲ್ಲಿ ಲಭ್ಯ ಇರುತ್ತವೆ. ಕ್ಯಾಷ್ಗಾಗಿ ಎಟಿಎಂಗಳು ತೆರೆದಿರುತ್ತವೆ. ಯುಪಿಐ, ಆನ್ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಇತ್ಯಾದಿ 24 ಗಂಟೆ ಲಭ್ಯ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ