ಸರ್ಕಾರಿ ಬಾಂಡ್ ಮಾರುಕಟ್ಟೆಗೆ ರೀಟೇಲ್ ಹೂಡಿಕೆದಾರರಿಗೆ ಸುಲಭ ಪ್ರವೇಶ ಒದಗಿಸುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ, ನವೆಂಬರ್ 12ರಂದು RBI ರಿಟೇಲ್ ಡೈರೆಕ್ಟ್ ಯೋಜನೆಯನ್ನು ಅನಾವರಣಗೊಳಿಸಿದೆ. RBI ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ ರೀಟೇಲ್ ಹೂಡಿಕೆದಾರರು ಸರ್ಕಾರಿ ಸೆಕ್ಯುರಿಟೀಸ್ ಮಾರುಕಟ್ಟೆಯನ್ನು- ಪ್ರಾಥಮಿಕ ಮತ್ತು ಸೆಕೆಂಡರಿ ಆನ್‌ಲೈನ್ ಸುಲಭವಾಗಿ ಪ್ರವೇಶಿಸಬಹುದು. ಕೇಂದ್ರ ಬ್ಯಾಂಕ್ ಈ ಹಿಂದೆ ಉಲ್ಲೇಖಿಸಿದಂತೆ, ಆರ್‌ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಹೂಡಿಕೆದಾರರು ತಮ್ಮ ಗಿಲ್ಟ್ ಸೆಕ್ಯೂರಿಟೀಸ್ ಖಾತೆಗಳನ್ನು ಆನ್‌ಲೈನ್‌ನಲ್ಲಿ ಆರ್‌ಬಿಐನಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತೆರೆಯಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. (G-sec).
ಸರ್ಕಾರಿ ಸೆಕ್ಯೂರಿಟೀಸ್ಗಳು ಯಾವುವು?
ಸರ್ಕಾರಿ ಸೆಕ್ಯೂರಿಟೀಸ್ ಅಂದರೆ ಕೇಂದ್ರ ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಸಾಲದ ಇನ್ಸ್ಟ್ರುಮೆಂಟ್ಗಳಾಗಿವೆ (ಬಾಂಡ್‌ಗಳು ಮತ್ತು ಟ್ರೆಷರಿ ಬಿಲ್‌ಗಳು). ರಾಜ್ಯ ಸರ್ಕಾರವು ಸಹ ಅಂತಹ ಇನ್ಸ್ಟ್ರುಮೆಂಟ್ಗಳನ್ನು ನೀಡಬಹುದು, ಇದನ್ನು ರಾಜ್ಯ ಅಭಿವೃದ್ಧಿ ಸಾಲಗಳು ಎಂದು ಸಹ ಕರೆಯಲಾಗುತ್ತದೆ. ಎರಡು ರೀತಿಯ ಸರ್ಕಾರಿ ಸೆಕ್ಯೂರಿಟಿಗಳಿವೆ. 1) 91, 182 ಮತ್ತು 364 ದಿನಗಳ ವಿವಿಧ ಅವಧಿಗಳೊಂದಿಗೆ ಟ್ರೆಷರಿ ಬಿಲ್‌ಗಳು, 2) 5ರಿಂದ 40 ವರ್ಷಗಳಲ್ಲಿ ಮೆಚ್ಯೂರ್ ಆಗುವಂಥ ದೀರ್ಘಾವಧಿಯ ಸರ್ಕಾರಿ ಸೆಕ್ಯೂರಿಟೀಸ್ಗಳು.
ಟ್ರೆಷರಿ ಬಿಲ್‌ಗಳು ಶೂನ್ಯ ಕೂಪನ್‌ಗಳ (ಬಡ್ಡಿ) ದರದಲ್ಲಿ ಲಭ್ಯವಿರುತ್ತವೆ ಮತ್ತು ಅವುಗಳನ್ನು ಸರ್ಕಾರಿ ಸೆಕ್ಯೂರಿಟೀಸ್ನ ಪ್ರಕಟಿತ ನಾಮಿನಲ್ ಮೌಲ್ಯಕ್ಕೆ ರಿಯಾಯಿತಿಯಲ್ಲಿ ನೀಡಲಾಗುತ್ತದೆ. ಅವುಗಳ ಪಕ್ವವಾದ (ಮೆಚ್ಯೂರ್) ಆದ ನಂತರ, ಅವುಗಳನ್ನು ಅವುಗಳ ನಾಮಿನಲ್ ಮೌಲ್ಯದಲ್ಲಿ ಪುನಃ ಪಡೆದುಕೊಳ್ಳಬಹುದು. ಮತ್ತೊಂದೆಡೆ, ಸರ್ಕಾರಿ ಸೆಕ್ಯೂರಿಟೀಸ್ಗಳಲ್ಲಿ ದೀರ್ಘಾವಧಿಯ ಹೂಡಿಕೆಗಳೂ ಇವೆ. ಅಲ್ಲಿ ನಿರ್ದಿಷ್ಟ ಅವಧಿಗೆ ಮತ್ತು ಬಡ್ಡಿಯನ್ನು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಪಾವತಿಸಲಾಗುತ್ತದೆ. ಈಗಿನಿಂದ, ಪ್ರಾಥಮಿಕ ಮತ್ತು ಸೆಕೆಂಡರಿ ಮಾರುಕಟ್ಟೆಯಿಂದ ನೇರವಾಗಿ ಈ ಯಾವುದೇ ಬಾಂಡ್‌ಗಳನ್ನು ಸುಲಭವಾಗಿ ಖರೀದಿಸಬಹುದು.
ಕ್ರೆಡಿಟ್ ಅಪಾಯಗಳು ಯಾವುವು?
ಸಾಲದ ಮಾರುಕಟ್ಟೆಯಲ್ಲಿನ ಎಲ್ಲ ಇನ್ಸ್ಟ್ರುಮೆಂಟ್ಗಳಲ್ಲಿ ಸರ್ಕಾರಿ ಸೆಕ್ಯೂರಿಟೀಸ್ಗಳು ಅತ್ಯಂತ ಸುಲಭವಾಗಿ ನಗದಾಗಿ ಪರಿವರ್ತಿಸಬಹುದು. ಮತ್ತು ಕೇಂದ್ರ ಸರ್ಕಾರವು ಸಾಲಗಾರ ಆಗಿರುವುದರಿಂದ ಅವು ಯಾವುದೇ ಕ್ರೆಡಿಟ್ ಅಪಾಯವನ್ನು ಹೊಂದಿರುವುದಿಲ್ಲ. ಸರ್ಕಾರವು ಸಾಮಾನ್ಯವಾಗಿ ಸಾಲ ವಾಪಸು ಮಾಡದೇ ಇರಲು ಆಗದ ಕಾರಣ, ಗಿಲ್ಟ್ ಫಂಡ್‌ಗಳು ಕ್ರೆಡಿಟ್ ಅಪಾಯವನ್ನು ಹೊಂದಿರುವುದಿಲ್ಲ. ಆದ್ದರಿಂದ ಸರ್ಕಾರಿ ಸೆಕ್ಯೂರಿಟೀಸ್ಗಳು ಸಂಪೂರ್ಣವಾಗಿ ಅಪಾಯ-ಮುಕ್ತ ಇನ್ಸ್ಟ್ರುಮೆಂಟ್ಗಳಾಗಿವೆ.
ಸರ್ಕಾರಿ- ಸೆಕ್ಯೂರಿಟೀಸ್ ಫಂಡ್‌ಗಳು ಬಡ್ಡಿದರದ ಅಪಾಯವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ, G-sec ಫಂಡ್‌ಗಳು ದೀರ್ಘಾವಧಿಯಲ್ಲಿ ಪಕ್ವಗೊಳ್ಳುವ ಭದ್ರತೆಗಳಲ್ಲಿ ಹೂಡಿಕೆ ಮಾಡುತ್ತವೆ. ಇವುಗಳ ಬೆಲೆಯು ಬಡ್ಡಿದರಗಳಿಗೆ ವಿರುದ್ಧವಾಗಿ ಸಂಬಂಧ ಹೊಂದಿದೆ. ಬಡ್ಡಿದರಗಳು ಹೆಚ್ಚಾದರೆ ಬಾಂಡ್ ಬೆಲೆಗಳು ಕಡಿಮೆಯಾಗುತ್ತವೆ ಮತ್ತು ಅದೇ ರೀತಿ ಬಡ್ಡಿ ದರಗಳು ಕಡಿಮೆಯಾದರೆ ಬಾಂಡ್ ಬೆಲೆಗಳು ಹೆಚ್ಚುತ್ತದೆ. ಈ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಈ ಬಡ್ಡಿದರದ ಅಪಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಆದರೂ ಈ ಅಪಾಯವನ್ನು ತಗ್ಗಿಸಲು ಮೆಚ್ಯೂರಿಟಿಯ ತನಕ ಸರ್ಕಾರಿ ಸೆಕ್ಯೂರಿಟೀಸ್ಗಳನ್ನು ಇಟ್ಟುಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.
ತೆರಿಗೆ ಲೆಕ್ಕಾಚಾರ ಹೇಗೆ?
ಸರ್ಕಾರಿ ಸೆಕ್ಯೂರಿಟೀಸ್ಗಳ ಮೇಲೆ ಪಾವತಿಸುವ ಬಡ್ಡಿಯು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಹೂಡಿಕೆದಾರರು ಒಂದು ವರ್ಷದ ನಂತರ ಅದನ್ನು ಮಾರಾಟ ಮಾಡಿದರೆ ಅದು ಶೇ 10 ದರದಲ್ಲಿ ದೀರ್ಘಾವಧಿಯ k್ಯಾಪಿಟಲ್ ಗೇಯ್ನ್ಸ್ ಪಾವತಿಸಬೇಕಾಗುತ್ತದೆ. ಕನಿಷ್ಠ ತೆರಿಗೆ ಸ್ಲ್ಯಾಬ್ ದರಗಳನ್ನು ನೀವು ಒಂದು ವರ್ಷದವರೆಗೆ ಹೋಲ್ಡ್ ಮಾಡುವ ಮೊದಲು ಮಾರಾಟ ಮಾಡಿದರೆ ಅನ್ವಯಿಸುತ್ತದೆ.
ಹೂಡಿಕೆ ಮಾಡುವುದು ಹೇಗೆ?
ಆರ್‌ಬಿಐ ರಿಟೇಲ್ ಡೈರೆಕ್ಟ್ ಸ್ಕೀಮ್ ಅಡಿಯಲ್ಲಿ, ಕೇಂದ್ರ ಸರ್ಕಾರದ ಸೆಕ್ಯೂರಿಟೀಸ್ಗಳು, ಟ್ರೆಷರಿ ಬಿಲ್‌ಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಸವರನ್ ಗೋಲ್ಡ್ ಬಾಂಡ್‌ಗಳ ಯೋಜನೆಯಲ್ಲಿ ಹೂಡಿಕೆ ಮಾಡಲು ಮೀಸಲಾದ ಪೋರ್ಟಲ್ ಇರುತ್ತದೆ. ಹೂಡಿಕೆದಾರರು ಪ್ರಾಥಮಿಕ ಹರಾಜಿನಲ್ಲಿ ಬಿಡ್ಡಿಂಗ್‌ಗೆ ಅವಕಾಶವನ್ನು ಹೊಂದಿರುತ್ತಾರೆ ಮತ್ತು ನೆಗೋಷಿಯೇಟೆಡ್ ಡೀಲಿಂಗ್ ಸಿಸ್ಟಮ್-ಆರ್ಡರ್ ಮ್ಯಾಚಿಂಗ್ ಸೆಗ್‌ಮೆಂಟ್ ಅಥವಾ NDS-OM ಎಂಬ ಸರ್ಕಾರಿ ಸೆಕ್ಯೂರಿಟೀಸ್ಗಾಗಿ ಕೇಂದ್ರ ಬ್ಯಾಂಕ್‌ನ ವಹಿವಾಟು ಪ್ಲಾಟ್ಫಾರ್ಮ್ ಹೊಂದಿರುತ್ತಾರೆ.
ನೀವು ಹೂಡಿಕೆ ಮಾಡಬೇಕೆ?
ನಿಗದಿತ ಅವಧಿಗೆ ಬಡ್ಡಿಯನ್ನು ಪಡೆಯಲು, ದೀರ್ಘಾವಧಿಯವರೆಗೆ ಸುರಕ್ಷಿತ ಇನ್ಸ್ಟ್ರುಮೆಂಟ್ನಲ್ಲಿ ಹಣವನ್ನು ಇಡಲು ಬಯಸುವ ವ್ಯಕ್ತಿಗೆ ಸರ್ಕಾರಿ ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಅಪಾಯವು ಬಹುತೇಕ ಶೂನ್ಯವಾಗಿರುವುದರಿಂದ ಆದಾಯವೂ ಕಡಿಮೆ ಇರುತ್ತದೆ. ಕಡಿಮೆ ರಿಸ್ಕ್ ಗಿಲ್ಟ್ ಫಂಡ್‌ಗಳು ಸಾಮಾನ್ಯವಾಗಿ ಫಿಕ್ಸೆಡ್ ಡಿಪಾಸಿಟ್‌ಗಳು ಮತ್ತು ಸಣ್ಣ ಉಳಿತಾಯ ಯೋಜನೆಗಳಂತಹ ಇತರ ಸ್ಥಿರ-ಆದಾಯ ಸಾಧನಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿದರಗಳನ್ನು ನೀಡುತ್ತವೆ. ಮಾನದಂಡ ಎಂದು ಪರಿಗಣಿಸಲಾದ 10-ವರ್ಷದ ಸರ್ಕಾರಿ ಸೆಕ್ಯೂರಿಟೀಸ್ಗಳು ಸದ್ಯಕ್ಕೆ ಶೇ 6.27ರಷ್ಟು ರಿಟರ್ನ್ ನೀಡುತ್ತಿವೆ. ಹೂಡಿಕೆದಾರರು ಮೆಚ್ಯೂರಿಟಿ ತನಕ ಅದನ್ನು ಇಟ್ಟುಕೊಳ್ಳಲು ಯೋಜಿಸುತ್ತಿದ್ದರೆ ಮಾತ್ರ ಇವುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ರೀಟೇಲ್ ಹೂಡಿಕೆದಾರರು ತಮ್ಮ ಸ್ಥಿರ ಆದಾಯದ ಹೂಡಿಕೆಯಲ್ಲಿ ಹೆಚ್ಚಿನ ಫಲಿತವನ್ನು ಹುಡುಕುತ್ತಿದ್ದಾರೆ. ಈ ಹಿಂದೆ ಹೆಚ್ಚಾಗಿ ಸರ್ಕಾರಿ ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡಿಲ್ಲ.
“ಆರ್‌ಬಿಐ ನೀಡುವ ರೀಟೇಲ್ ನೇರ ಯೋಜನೆಯು ರೀಟೇಲ್ ಹೂಡಿಕೆದಾರರಿಗೆ ಸರ್ಕಾರಿ ಸೆಕ್ಯೂರಿಟೀಸ್, ಸವರನ್ ಬಾಂಡ್‌ಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶವಾಗಿದೆ. ರೀಟೇಲ್ ಹೂಡಿಕೆದಾರರು ಸರ್ಕಾರಿ ಸೆಕ್ಯೂರಿಟೀಸ್ಗಳಲ್ಲಿ ಹೂಡಿಕೆ ಮಾಡಲು ಸರಳ ಮತ್ತು ನೇರ ಚಾನಲ್‌ನ ಆಯ್ಕೆಯನ್ನು ಹೊಂದಿರುವುದು ಭಾರತದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಈಕ್ವಿಟಿ ಅಥವಾ ಆಸ್ತಿಯಲ್ಲಿನ ಹೂಡಿಕೆಗೆ ಹೋಲಿಸಿದರೆ ಸರ್ಕಾರಿ ಸೆಕ್ಯೂರಿಟೀಸ್ ಕಡಿಮೆ ಅಪಾಯ ಮತ್ತು ಹೂಡಿಕೆಯ ಮೇಲೆ ಕಡಿಮೆ ಲಾಭವನ್ನು ನೀಡುತ್ತದೆ,” ಎಂದು ಶೇರ್‌ಇಂಡಿಯಾ ರೀಸರ್ಚ್ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಡಾ. ರವಿ ಸಿಂಗ್ ಹೇಳಿದ್ದಾರೆ.
“ಫೆಬ್ರವರಿ 2021ರಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಈ ಯೋಜನೆಯನ್ನು ಪ್ರಮುಖ ರಚನಾತ್ಮಕ ಸುಧಾರಣೆ ಎಂದು ಕರೆದಿದ್ದಾರೆ. ಈ ಯೋಜನೆಯು ರೀಟೇಲ್ ಹೂಡಿಕೆದಾರರಿಗೆ ತಮ್ಮ ಸರ್ಕಾರಿ ಸೆಕ್ಯೂರಿಟೀಸ್ಗಳ ಖಾತೆಯನ್ನು ಉಚಿತವಾಗಿ ತೆರೆಯಲು ಮತ್ತು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರಿ ಸೆಕ್ಯೂರಿಟೀಸ್ಗಳು ಮೂಲತಃ ಸರ್ಕಾರದಿಂದ ಸಾಲ ನೀಡಿಕೆಗಳಾಗಿವೆ. ಅದು ಮೆಚ್ಯೂರಿಟಿ ಸಮಯದಲ್ಲಿ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಖಾತ್ರಿಯ ಆದಾಯವನ್ನು ನೀಡುತ್ತದೆ,” ಎಂದು ತವಾಗಾ ಸಲಹಾ ಸೇವೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತಿನ್ ಮಾಥುರ್ ಹೇಳಿದ್ದಾರೆ.
ಇದನ್ನೂ ಓದಿ: RBI Direct Scheme: ಪ್ರಧಾನಿ ನರೇಂದ್ರ ಮೋದಿಯಿಂದ ನ.12ಕ್ಕೆ ರೀಟೇಲ್ ಹೂಡಿಕೆದಾರರಿಗೆ ಆರ್‌ಬಿಐ ಡೈರೆಕ್ಟ್ ಯೋಜನೆ ಆರಂಭ