ನವದೆಹಲಿ, ಜನವರಿ 2: ಕಳೆದ ಹಣಕಾಸು ವರ್ಷದ (2022-23 FY) ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ITR) ಸಲ್ಲಿಕೆ ಮಾಡಿದವರ ಸಂಖ್ಯೆ ಡಿಸೆಂಬರ್ 31ರವರೆಗೂ 8.18 ಕೋಟಿ. ಹಿಂದಿನ ವರ್ಷದ ಐಟಿಆರ್ ಫೈಲಿಂಗ್ ಅನ್ನು ಇದೇ ಅವಧಿಯಲ್ಲಿ 7.51 ಕೋಟಿ ಜನರು ಮಾಡಿದ್ದರು. ಈ ವರ್ಷ ಶೇ. 9ಕ್ಕೂ ಹೆಚ್ಚು ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
2022-23ರ ಹಣಕಾಸು ವರ್ಷಕ್ಕೆ ರಿಟರ್ನ್ ಫೈಲ್ ಮಾಡಲು ಈಗಲೂ ಅವಕಾಶ ಇದೆ. ಆದರೆ, ಹೆಚ್ಚು ಮೊತ್ತದ ದಂಡ ಪಾವತಿಸಬೇಕು. ಈ ಬಾರಿ ಐಟಿಆರ್ ಸಲ್ಲಿಸುವ ಪ್ರಕ್ರಿಯೆ ಹೆಚ್ಚು ಸರಳಗೊಳಿಸಲಾಗಿದೆ. ಎಐಎಸ್ ಸೌಲಭ್ಯವನ್ನು ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗಿದೆ. ಈ ಕಾರಣಕ್ಕೆ ಐಟಿಆರ್ ಸಲ್ಲಿಕೆ ಹೆಚ್ಚು ಸರಾಗವಾಗಿ ಆಗಲು ಸಾಧ್ಯವಾಗಿದೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 8.18 ಕೋಟಿ ಐಟಿಆರ್ಗಳ ಜೊತೆ 1.60 ಕೋಟಿ ಆಡಿಟ್ ರಿಪೋರ್ಟ್ ಮತ್ತಿತರ ಫಾರ್ಮ್ಗಳನ್ನು ಫೈಲ್ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ (2022ರ ಡಿ. 31ರವರೆಗೂ) 1.43 ಕೋಟಿ ಆಡಿಟ್ ವರದಿಗಳು ಮತ್ತು ಫಾರ್ಮ್ಗಳು ಸಲ್ಲಿಕೆ ಆಗಿದ್ದವು.
Record number of Income Tax Returns (ITRs) filed till 31st December, 2023!
Few highlights:
👉 8.18 crore ITRs filed for AY 2023-24 upto 31.12.2023 which is 9% higher y-o-y.
👉1.60 crore audit reports and other forms filed.
👉AIS facility was used extensively, resulting in… pic.twitter.com/julWcfycLF— Income Tax India (@IncomeTaxIndia) January 1, 2024
ಹೆಚ್ಚಿನ ಜನರು ಎಐಎಸ್ ಅಥವಾ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಮತ್ತು ಟ್ಯಾಕ್ಸ್ಪೇಯರ್ ಇನ್ಫಾರ್ಮೇಶನ್ ಸಮ್ಮರಿಯನ್ನು (ಟಿಐಎಸ್) ಬಳಕೆ ಮಾಡಿದ್ದಾರೆ. ಎಐಎಸ್ ಮತ್ತು ಟಿಐಎಸ್ನಲ್ಲಿ ನಮ್ಮ ಎಲ್ಲಾ ಹಣಕಾಸು ಸಂಬಂಧಿತ ವಹಿವಾಟುಗಳು ದಾಖಲಾಗಿರುತ್ತವೆ. ಸಂಬಳ, ಬಡ್ಡಿ, ಡಿವಿಡೆಂಡ್ ಇತ್ಯಾದಿ ಆದಾಯಗಳ ಮಾಹಿತಿ ಇರುತ್ತದೆ. ಪಾವತಿಸಲಾಗಿರುವ ತೆರಿಗೆ ಇತ್ಯಾದಿ ವಿವರವೂ ಇರುತ್ತದೆ.
ಎಐಎಸ್ ಮತ್ತು ಟಿಐಎಸ್ ಬಳಸಿದಾಗ ಐಟಿ ರಿಟರ್ನ್ ಫೈಲ್ ಮಾಡಬೇಕಾದ ಫಾರ್ಮ್ನಲ್ಲಿ ಈ ಕೆಲ ಮಾಹಿತಿ ಮೊದಲೇ ಭರ್ತಿಯಾಗಿರುತ್ತದೆ. ಹೀಗಾಗಿ, ರಿಟರ್ನ್ ಫೈಲ್ ಮಾಡುವುದು ಸರಾಗವಾಗುತ್ತದೆ.
ಇದನ್ನೂ ಓದಿ: LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ
ಕೆಲ ವರ್ಷಗಳ ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಈಗ ಐಟಿಆರ್ ಸಲ್ಲಿಕೆಯ ಪ್ರಕ್ರಿಯೆ ಬಹಳ ಸರಳವಾಗಿದೆ. ಈಗ ಆಡಿಟರ್ ಅಥವಾ ಅಕೌಂಟೆಂಟ್ ಬಳಿ ಹೋಗಿ ಐಟಿಆರ್ ಸಲ್ಲಿಕೆ ಮಾಡಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ತೆರಿಗೆ ಪಾವತಿದಾರನೇ ಹೆಚ್ಚಿನ ಗೋಜಲುಗಳಿಲ್ಲದೆ ಖುದ್ದಾಗಿ ರಿಟರ್ನ್ ಫೈಲ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ