LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ

central government employees' LTC re-imbursement: ಕೇಂದ್ರ ಸರ್ಕಾರ ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (ಎಲ್​ಟಿಸಿ) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಿದೆ. ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಎಲ್​ಟಿಸಿ ಅರ್ಜಿಗಳನ್ನು ಅನುಮೋದನೆ ಮಾಡಬಹುದು. ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ.

LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ
ಸರ್ಕಾರಿ ಉದ್ಯೋಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2024 | 12:30 PM

ನವದೆಹಲಿ, ಜನವರಿ 2: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖಷಿಯಾಗುವ ಸುದ್ದಿ ಇದು. ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (LTC- Leave travel concession)) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ಡಿಸೆಂಬರ್ 21ರಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಸೂಚನೆಯೊಂದರ ಪ್ರಕಾರ ಎಲ್​ಟಿಸಿ ಹಣ ಪಡೆಯಲು ಸಲ್ಲಿಸುವ ಕ್ಲೈಮ್​ಗಳಿಗೆ ಇಲಾಖಾ ಮುಖ್ಯಸ್ಥರೇ ಅನುಮೋದನೆ ಮಾಡಬಹುದಾದ ಅವಕಾಶ ಕಲ್ಪಿಸಲಾಗಿದೆ.

ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಅರು ತಿಂಗಳವರೆಗಿನ ಎಲ್​ಟಿಸಿ ಪ್ರಯಾಣ ಹಣಕ್ಕೆ ಕ್ಲೈಮ್ ಮಾಡಿ ಉದ್ಯೋಗಿಗಳು ಸಲ್ಲಿಸುವ ಅರ್ಜಿಗಳನ್ನು ಅನುಮೋದನೆ ಮಾಡಬಹುದು ಎಂದಿದೆ ಹೊಸ ಕಾನೂನು. ಹಳೆಯ ನಿಯಮದ ಪ್ರಕಾರ ಉದ್ಯೋಗಿಗಳ ಎಲ್​ಟಿಸಿ ಕ್ಲೈಮ್ ಅರ್ಜಿ ಡಿಒಪಿಟಿಯಿಂದ ಅನುಮೋದನೆ ಪಡೆಯಬೇಕಿತ್ತು.

ಒಂದು ವೇಳೆ, ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ. ಜೊತೆಗೆ, ಆ ಮೂರು ತಿಂಗಳೊಳಗೆ ಉದ್ಯೋಗಿ ತಾನು ಪಡೆದುಕೊಂಡಿದ್ದ ಮುಂಗಡ ಹಣವನ್ನು ಬಡ್ಡಿಸಮೇತ ಹಿಂದಿರುಗಿಸಿರಬೆಕು.

ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?

ಏನಿದು ಎಲ್​ಟಿಸಿ ಹಣ?

ಎಲ್​ಟಿಸಿ ಎಂಬುದು ಉದ್ಯೋಗಿಗಳಿಗೆ ನೀಡಲಾಗುವ ಲೀವ್ ಟ್ರಾವಲ್ ಕನ್ಸಿಶನ್ ಸೌಲಭ್ಯ. ಉದ್ಯೋಗಿ ರಜೆ ಪಡೆದು ಒಬ್ಬರೆಯೋ ಅಥವಾ ಕುಟುಂಬ ಸಮೇತವೋ ಪ್ರವಾಸ ಹೋದರೆ, ಅವರ ಪ್ರಯಾಣ ವೆಚ್ಚವನ್ನು ಭರಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಎಲ್​ಟಿಸಿ ಸೌಲಭ್ಯ ಇದೆ.

ರಜೆಯಿಂದ ಬಂದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಎಲ್​ಟಿಸಿ ಹಣಕ್ಕೆ ಉದ್ಯೋಗಿ ಕ್ಲೈಮ್ ಮಾಡಬೇಕು ಎಂಬ ನಿಯಮ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!