AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rs 2000 Notes: ಎರಡು ಸಾವಿರ ಮುಖಬೆಲೆಯ ನೋಟು; ಇನ್ನೂ ಮರಳಿಬಂದಿಲ್ಲ 9,330 ಕೋಟಿ ರೂ ಮೊತ್ತದ ನೋಟುಗಳು

RBI Statement: ಆರ್​ಬಿಐ ಮೇ 19, 2023ರಂದು 2,000 ರೂ ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ ಘೋಷಿಸಿತ್ತು. ಡಿಸೆಂಬರ್ 29ರವರೆಗೆ ಶೇ. 97.38ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಆರ್​ಬಿಐ ಜನವರಿ 1ರಂದು ಮಾಹಿತಿ ನೀಡಿದೆ. ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ರೂ ಮೊತ್ತದ ನೋಟುಗಳ ಪೈಕಿ ಈಗ ಉಳಿದಿರುವುದು 9,330 ಕೋಟಿ ರೂ ಮೌಲ್ಯದ ನೋಟು ಮಾತ್ರ ಎನ್ನಲಾಗಿದೆ.

Rs 2000 Notes: ಎರಡು ಸಾವಿರ ಮುಖಬೆಲೆಯ ನೋಟು; ಇನ್ನೂ ಮರಳಿಬಂದಿಲ್ಲ 9,330 ಕೋಟಿ ರೂ ಮೊತ್ತದ ನೋಟುಗಳು
2,000 ರೂ ನೋಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2024 | 10:38 AM

Share

ನವದೆಹಲಿ, ಜನವರಿ 2: ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ ಮುಖಬೆಲೆಯ ನೋಟುಗಳನ್ನು (Rs 2,000 Notes) ಚಲಾವಣೆಯಿಂದ ಹಿಂಪಡೆದು ಏಳು ತಿಂಗಳ ಮೇಲಾಯಿತು. ಈವರೆಗೆ 97.38 ಪ್ರತಿಶತದಷ್ಟು ನೋಟುಗಳು ಮರಳಿ ಬಂದಿವೆ ಎಂದು ಆರ್​ಬಿಐ (RBI) ನಿನ್ನೆ (ಜ. 1) ಮಾಹಿತಿ ನೀಡಿದೆ. 2023ರ ಮೇ 19ರಂದು ಆರ್​ಬಿಐ 2,000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಘೋಷಣೆ ಹೊರಡಿಸಿದ ಸಂದರ್ಭದಲ್ಲಿ 3.56 ಲಕ್ಷ ಕೋಟಿ ರೂ ಮೊತ್ತದ ನೋಟುಗಳು ಚಲಾವಣೆಯಲ್ಲಿದ್ದವು. ಎಲ್ಲಾ ನೋಟುಗಳನ್ನು ಬ್ಯಾಂಕುಗಳಿಗೆ ಮರಳಿಸಬೇಕೆಂದು ಆರ್​ಬಿಐ ಸೂಚಿಸಿತ್ತು. ಈ ಪೈಕಿ 9,330 ಕೋಟಿ ರೂ ಮೊತ್ತದ ನೋಟುಗಳು ಇನ್ನೂ ಬರಬೇಕಿದೆ. ಅಂದರೆ, ಸುಮಾರು 4 ಕೋಟಿ 66 ಲಕ್ಷ ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿಲ್ಲ. ಇದು ಡಿಸೆಂಬರ್ 29ರವರೆಗಿನ ಮಾಹಿತಿ.

‘ಎರಡು ಸಾವಿರ ರೂ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿದಾಗ ಚಲಾವಣೆಯಲ್ಲಿದ್ದ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂ ಆಗಿತ್ತು. 2023ರ ಡಿಸೆಂಬರ್ 29ರಂದು ಚಲಾವಣೆಯಲ್ಲಿರುವ ನೋಟುಗಳ ಮೊತ್ತ 9,330 ಕೋಟಿ ರೂಗೆ ಇಳಿದಿದೆ. ಇದರೊಂದಿಗೆ ಶೇ. 97.38ರಷ್ಟು ನೋಟುಗಳು ಮರಳಿ ಬಂದಿವೆ,’ ಎಂದು ಆರ್​ಬಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?

ಈಗ 2,000 ರೂ ನೋಟು ಇದ್ದರೆ ಏನು ಮಾಡಬೇಕು?

ಆರ್​ಬಿಐ 2,000 ರೂ ನೋಟುಗಳನ್ನು ಅಮಾನ್ಯ ಮಾಡಿಲ್ಲ ಅಥವಾ ನಿಷೇಧಿಸಿಲ್ಲ. ಚಲಾವಣೆಯಿಂದ ಮಾತ್ರ ಹಿಂಪಡೆಯಲಾಗಿದೆ. ಈ ನೋಟುಗಳಿಂದ ವಹಿವಾಟು ನಡೆಸುವಂತಿಲ್ಲ ಅಷ್ಟೇ. ಆರಂಭದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ ನೋಟುಗಳನ್ನು ಮರಳಿಸಲು ಸಾರ್ವಜನಿಕರಿಗೆ ಅವಕಾಶ ಕೊಡಲಾಗಿತ್ತು. ಈಗ ಆರ್​ಬಿಐನ ಕೆಲ ಆಯ್ದ ಕಚೇರಿಗಳಲ್ಲಿ ಮಾತ್ರ ನೋಟು ಮರಳಿಸಬಹುದು. ಬೆಂಗಳೂರಿನ ಕಬ್ಬನ್ ಪಾರ್ಕ್ ಸಮೀಪದ ನೃಪತುಂಗ ರಸ್ತೆಯಲ್ಲಿರುವ ಆರ್​ಬಿಐ ಕಚೇರಿಯೂ ಸೇರಿದಂತೆ ದೇಶಾದ್ಯಂತ 19 ಇಷ್ಯೂ ಆಫಿಸ್​ಗಳಲ್ಲಿ 2,000 ರೂ ನೋಟು ವಿನಿಮಯಕ್ಕೆ ಅವಕಾಶ ಕೊಡಲಾಗಿದೆ.

ಇದನ್ನೂ ಓದಿ: Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

ಅಂಚೆ ಮೂಲಕವೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ದೂರದ ಜಿಲ್ಲೆಗಳಲ್ಲಿರುವವರು ನೂರಾರು ಕಿಮೀ ಪ್ರಯಾಣಿಸಿ ಆರ್​ಬಿಐ ಕಚೇರಿಗೆ ಬರುವ ಬದಲು ತಾವಿರುವ ಊರಿನಿಂದಲೇ ಅಂಚೆ ಮೂಲಕ ನೋಟುಗಳನ್ನು ಕಳುಹಿಸಿ ತಮ್ಮ ಖಾತೆಗೆ ಹಣ ಜಮೆ ಮಾಡಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ