Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

Great Investment: 2023ರ ಜನವರಿ 1ರಂದು 55,050 ರೂ ಇದ್ದ ಚಿನ್ನದ ಬೆಲೆ 2024ರ ಜನವರಿ 1ರಂದು 63,870 ರೂ ಆಗಿದೆ. ಒಂದು ವರ್ಷದ ಅಂತರದಲ್ಲಿ ಗೋಲ್ಡ್ ರೇಟ್ ಶೇ. 16ರಷ್ಟು ಹೆಚ್ಚಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಹಲವು ಮಾರ್ಗಗಳಿಗೆ. ಅದರಲ್ಲಿ ಸಾವರೀನ್ ಗೋಲ್ಡ್ ಬಾಂಡ್ ಆಕರ್ಷಣೀಯ ಎನಿಸಿದೆ.

Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?
ಗೋಲ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2024 | 5:32 PM

ಬೆಂಗಳೂರು, ಜನವರಿ 1: ಬಹಳ ವಿಶ್ವಾಸಾರ್ಹವಾದ ಮತ್ತು ಸಾಂಪ್ರದಾಯಿಕವಾದ ಹೂಡಿಕೆಗಳಲ್ಲಿ (traditional investments) ಭೂಮಿ ಮತ್ತು ಚಿನ್ನ ಇದೆ. ಇವೆರಡೂ ಕೂಡ ಯಾವತ್ತೂ ಹೆಚ್ಚಿನ ಲಾಭ ತಂದುಕೊಡುವಂಥವು. ಅದರಲ್ಲೂ ಚಿನ್ನದ ಬೆಲೆ (gold rates) ಒಂದು ವರ್ಷದ ಅಂತರದಲ್ಲಿ ಕುಗ್ಗಿದ ಉದಾಹರಣೆಯೇ ಇಲ್ಲ. ಇದು ವರ್ಷಕ್ಕೆ ಕನಿಷ್ಠ ಶೇ. 8ರಿಂದ 25ರಷ್ಟು ಬೆಲೆ ಹೆಚ್ಚಿಸಿಕೊಳ್ಳುತ್ತಾ ಬರುತ್ತಿರುವ ಅಪೂರ್ವ ಲೋಹ. 2023ರ ಕ್ಯಾಲಂಡರ್ ವರ್ಷದಲ್ಲಿ ಚಿನ್ನದ ಬೆಲೆ ಶೇ. 16ರಷ್ಟು ಹೆಚ್ಚಾಗಿದೆ.

2023ರ ಜನವರಿ 1ರಂದು ಅಪರಂಜಿ ಚಿನ್ನ (24 ಕ್ಯಾರಟ್) 10 ಗ್ರಾಮ್​ಗೆ 55,050 ರೂ ಇತ್ತು. ಇದೀಗ 2024ರ ಜನವರಿ 1ರಂದು ಇದರ ಬೆಲೆ 63,870 ರೂ ಆಗಿದೆ. ಅಂದರೆ 8,820 ರೂನಷ್ಟು ಬೆಲೆ ಹೆಚ್ಚಳವಾಗಿದೆ. ಪ್ರತಿಶತ ಲೆಕ್ಕದಲ್ಲಿ ಶೇ. 16ರಷ್ಟು ಮೌಲ್ಯ ಹೆಚ್ಚಾಗಿದೆ. ಇನ್ನು, ಆಭರಣ ಚಿನ್ನದ (22 ಕ್ಯಾರಟ್) ಬೆಲೆ 10 ಗ್ರಾಮ್​ಗೆ 50,450 ರೂ ಇದ್ದದ್ದು ಒಂದು ವರ್ಷದಲ್ಲಿ 58,550 ರೂ ಆಗಿದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಪವರ್​ನ ಷೇರುಬೆಲೆ ಹೆಚ್ಚುತ್ತಿರುವುದು ಯಾಕೆ? ಮುಕೇಶ್ ತಮ್ಮನ ಅದೃಷ್ಟ ಖುಲಾಯಿಸಿತಾ?

ಚಿನ್ನದ ಮೇಲೆ ಹೂಡಿಕೆ ಹೇಗೆ?

  • ಆಭರಣ ಖರೀದಿ
  • ಚಿನ್ನದ ನಾಣ್ಯ, ಗಟ್ಟಿ ಇತ್ಯಾದಿ 24 ಕ್ಯಾರಟ್ ಚಿನ್ನದ ಖರೀದಿ
  • ಗೋಲ್ಡ್ ಇಟಿಎಫ್
  • ಸಾವರೀನ್ ಗೋಲ್ಡ್ ಬಾಂಡ್
  • ಗೋಲ್ಡ್ ಮ್ಯುಚುವಲ್ ಫಂಡ್
  • ಡಿಜಿಟಲ್ ಗೋಲ್ಡ್

ನೀವು ಆಭರಣ, ಗೋಲ್ಡ್ ಕಾಯಿನ್, ಗೋಲ್ಡ್ ಬಾರ್ ಇತ್ಯಾದಿಯಾಗಿ ಚಿನ್ನವನ್ನು ಖರೀದಿಸಬಹುದು. ಇವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಬಿಟ್ಟರೆ ಸಮಸ್ಯೆ ಹೆಚ್ಚಿಲ್ಲ.

ಆದರೆ, ಭೌತಿಕವಲ್ಲದೇ ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಖರೀದಿಸುವ ಅಥವಾ ಹೂಡಿಕೆ ಮಾಡುವ ಹಲವು ಮಾರ್ಗಗಳಿವೆ. ಅದರಲ್ಲಿ ಗೋಲ್ಡ್ ಇಟಿಎಫ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಇವೆ.

ಗೋಲ್ಡ್ ಇಟಿಎಫ್​ಗೆ ಡೀಮ್ಯಾಟ್ ಅಕೌಂಟ್ ಬೇಕಾಗುತ್ತದೆ. ಚಿನ್ನದ ಗಣಿ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳನ್ನು ಪಡೆಯಬಹುದು.

ಇದನ್ನೂ ಓದಿ: UPI Rules Change: ವಹಿವಾಟು ಮಿತಿಯಿಂದ ಎಟಿಎಂವರೆಗೆ, ಜನವರಿ 1ರಿಂದ ಯುಪಿಐ ಹೊಸ ನಿಯಮಗಳು ಜಾರಿಗೆ ಬರಲಿವೆ; ತಿಳಿದಿರಿ

ಸಾವರೀನ್ ಗೋಲ್ಡ್ ಬಾಂಡ್ ಉತ್ತಮ….

ಸರ್ಕಾರ ವರ್ಷಕ್ಕೆ ಹಲವು ಬಾರಿ ಬಿಡುಗಡೆ ಮಾಡುವ ಸಾವರೀನ್ ಗೋಲ್ಡ್ ಬಾಂಡ್​ಗಳು ಚಿನ್ನದ ಮೇಲಿನ ಹೂಡಿಕೆಗೆ ಹೇಳಿ ಮಾಡಿಸಿವೆ. ಇವು ಭೌತಿಕ ಚಿನ್ನವನ್ನು ಖರೀದಿಸುವ ಬದಲು ಹಾಲಿ ಮಾರುಕಟ್ಟೆ ದರದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಂಟು ವರ್ಷದ ಬಳಿಕ ಮೆಚ್ಯೂರ್ ಆಗುತ್ತದೆ. ಅಂದಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಮ್ಮ ಬಂಡವಾಳಕ್ಕೆ ರಿಟರ್ನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ