Buying Trend: ದೇಶದಲ್ಲಿ 6 ತಿಂಗಳಲ್ಲಿ ಹೆಚ್ಚಲಿದೆ ಸ್ಮಾರ್ಟ್ ಪೋನ್ ಹುಚ್ಚು! ಕಾರಿನ ವ್ಯಾಮೋಹ ಇರುವವರ ಸಂಖ್ಯೆ ಎಷ್ಟು?
Money9 Pulse Personal Finance Survey: ಮನಿ9 ಪರ್ಸನಲ್ ಫೈನಾನ್ಸ್ ಸಮೀಕ್ಷೆಯ ಪ್ರಕಾರ, ಶೇ. 10ರಷ್ಟು ಭಾರತೀಯ ಕುಟುಂಬಗಳು ಮುಂದಿನ 6 ತಿಂಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿವೆ. ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಚಂಡೀಗಢ ಮತ್ತು ಗುಜರಾತ್‌ನ ಕುಟುಂಬಗಳೇ ಈ ಪಟ್ಟಿಯಲ್ಲಿ ಮೊದಲಿವೆ.
ಮುಂದಿನ ಆರು ತಿಂಗಳಲ್ಲಿ ಕಾರು, ಬೈಕ್, ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಲಿದೆಯಾ? ಹೌದು ಎನ್ನುತ್ತಿದೆ Money9ನ ಪರ್ಸನಲ್ ಫೈನಾನ್ಸ್ ಸಮೀಕ್ಷೆ. ಮುಂದಿನ 6 ತಿಂಗಳಲ್ಲಿ ಎಷ್ಟು ಭಾರತೀಯ ಕುಟುಂಬಗಳು ತಮಗಾಗಿ ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸಲು ಯೋಜಿಸುತ್ತಿವೆ ಎಂಬ ಮಾಹಿತಿಯನ್ನು ಸಮೀಕ್ಷೆ (Money9 Pulse Personal Finance Survey) ತೆರೆದಿರಿಸಿದೆ. ಎಷ್ಟು ಭಾರತೀಯ ಕುಟುಂಬಗಳು ಫೀಚರ್ ಫೋನ್ ಬದಲಿಗೆ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿವೆ ಎನ್ನುವುದನ್ನು ಹೇಳಿದೆ.
ಮನಿ9 ಪರ್ಸನಲ್ ಫೈನಾನ್ಸ್ ಸಮೀಕ್ಷೆಯ ಪ್ರಕಾರ, ಶೇ. 10ರಷ್ಟು ಭಾರತೀಯ ಕುಟುಂಬಗಳು ಮುಂದಿನ 6 ತಿಂಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿವೆ. ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಚಂಡೀಗಢ ಮತ್ತು ಗುಜರಾತ್‌ನ ಕುಟುಂಬಗಳೇ ಈ ಪಟ್ಟಿಯಲ್ಲಿ ಮೊದಲಿವೆ. ಸಮೀಕ್ಷೆಯ ಪ್ರಕಾರ, ಶೇಕಡಾ 4 ರಷ್ಟು ಕುಟುಂಬಗಳು ಮುಂದಿನ 12 ತಿಂಗಳಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿವೆ, ಕರ್ನಾಟಕ, ಒಡಿಶಾ, ಗುಜರಾತ್, ಪಂಜಾಬ್ ಮತ್ತು ಚಂಡೀಗಢದ ಕುಟುಂಬಗಳು ವಿದೇಶಕ್ಕೆ ಹಾರುವ ತೀರ್ಮಾನ ಮಾಡಿವೆ.
ಮನಿ9 ಸಮೀಕ್ಷೆ ಹೇಳುವಂತೆ ಶೇ. 3 ಭಾರತೀಯ ಕುಟುಂಬಗಳು ಮುಂದಿನ 6 ತಿಂಗಳಲ್ಲಿ ಕಾರು, ಜೀಪ್ ಅಥವಾ ವ್ಯಾನ್ ಖರೀದಿಸಲು ಯೋಜಿಸುತ್ತಿವೆ. ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಮತ್ತು ದೆಹಲಿ NCR ಕುಟುಂಬಗಳ ಕಾರಿನ ವ್ಯಾಮೋಹ ಜಾಸ್ತಿಯಾಗಿದೆ. ಇನ್ನೊಂದು ಕಡೆ ಮುಂದಿನ 6 ತಿಂಗಳಲ್ಲಿ ಶೇ. 3 ರಷ್ಟು ಕುಟುಂಬಗಳು ದ್ವಿಚಕ್ರ ವಾಹನ ಖರೀದಿ ಮಾಡಲು ಬಯಸಿವೆ. ಮಹಾರಾಷ್ಟ್ರ, ಅಸ್ಸಾಂ, ಕರ್ನಾಟಕ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಕುಟುಂಬಗಳು ತಮ್ಮ ಪರಿವಾರಕ್ಕೆ ಬೈಕ್ ಸೇರಿಸಿಕೊಳ್ಳಲು ಬಯಸಿವೆ.
ಇದನ್ನೂ ಓದಿ: Tax: ದೇಶದ ಅರ್ಧದಷ್ಟು ಜನ ಟ್ಯಾಕ್ಸ್ ಕಟ್ಟಲ್ಲ! ತೆರಿಗೆ ಕಟ್ಟಲು ಬಯಸುವವರ ಸಂಖ್ಯೆ ತೀರಾ ಕಡಿಮೆ
Money9 ನ ಈ ವೈಯಕ್ತಿಕ ಹಣಕಾಸು ಸಮೀಕ್ಷೆಯನ್ನು ದೇಶದ 20 ರಾಜ್ಯಗಳ 115 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಗಸ್ಟ್ ನಿಂದ ನವೆಂಬರ್ ಅವಧಿಯಲ್ಲಿ ನಡೆಸಲಾಗಿದೆ. ಸಮೀಕ್ಷೆಯನ್ನು 10 ವಿವಿಧ ಭಾಷೆಗಳಲ್ಲಿ ನಡೆಸಲಾಯಿತು, ಇದು ದೇಶದ 1140 ಹಳ್ಳಿಗಳು ಅಥವಾ ನಗರ ವಾರ್ಡ್‌ಗಳನ್ನು ಒಳಗೊಂಡಿತ್ತು. ಈ ಸಮೀಕ್ಷೆಯು ಭಾರತೀಯರ ಗಳಿಕೆ, ವೆಚ್ಚಗಳು, ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಇಟ್ಟಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ