Kelvinator: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು

Reliance Retail buys Kelvinator: ಎಸಿ ಮತ್ತು ವಾಷಿಂಗ್ ಮೆಷೀನ್ ತಯಾರಿಸುವ ಕೆಲ್ವಿನೇಟರ್ ಕಂಪನಿಯನ್ನು ರಿಲಾಯನ್ಸ್ ರೀಟೇಲ್ ಖರೀದಿಸಿದೆ. ಇಶಾ ಅಂಬಾನಿ ನೇತೃತ್ವದ ರಿಲಾಯನ್ಸ್ ರೀಟೇಲ್ ಎಷ್ಟು ಮೊತ್ತಕ್ಕೆ ಕೆಲ್ವಿನೇಟರ್ ಅನ್ನು ಖರೀದಿಸಿದೆ ಎನ್ನುವುದು ಗೊತ್ತಿಲ್ಲ. ಆದರೆ, ಎಲೆಕ್ಟ್ರೋಲಕ್ಸ್ ಸುಪರ್ದಿಯಲ್ಲಿದ್ದ ಕೆಲ್ವಿನೇಟರ್ ಅನ್ನು ರಿಲಾಯನ್ಸ್ ರೀಟೇಲ್ 2019ರಿಂದಲೂ ಪ್ರಮೋಟ್ ಮಾಡುತ್ತಿದೆ.

Kelvinator: ಒಂದು ಕಾಲದ ಗ್ಲೋಬಲ್ ಸೂಪರ್ ಬ್ರ್ಯಾಂಡ್ ಕೆಲ್ವಿನೇಟರ್ ಈಗ ರಿಲಾಯನ್ಸ್ ಪಾಲು
ರಿಲಾಯನ್ಸ್ ರೀಟೇಲ್

Updated on: Jul 18, 2025 | 3:51 PM

ನವದೆಹಲಿ, ಜುಲೈ 18: ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ರೀಟೇಲ್ ಸಂಸ್ಥೆ (Reliance Retail) ಇದೀಗ ಕೆಲ್ವಿನೇಟರ್ (Kelvinator) ಎನ್ನುವ ಎಸಿ ಮತ್ತು ವಾಷಿಂಗ್ ಮೆಷೀನ್ ತಯಾರಕ ಕಂಪನಿಯನ್ನು ಖರೀದಿಸಿರುವುದಾಗಿ ಹೇಳಿದೆ. ಬಹಳ ವೇಗವಾಗಿ ಬೆಳೆಯುತ್ತಿರುವ ದೀರ್ಘ ಬಳಕೆ ಗ್ರಾಹಕ ಉತ್ಪನ್ನಗಳ ಮಾರುಕಟ್​ಟೆಯಲ್ಲಿ (consumer durable market) ಗಟ್ಟಿಯಾಗಿ ನೆಲೆಯೂರಲು ರಿಲಾಯನ್ಸ್ ರೀಟೇಲ್​​ಗೆ ಇದು ಒಂದು ಮುಖ್ಯ ಹೆಜ್ಜೆ ಎನಿಸಿದೆ. ಕೆಲ್ವಿನೇಟರ್​​ನೊಂದಿಗೆ ಈ ಕಂಪನಿಯ ಉತ್ಪನ್ನಗಳ ಶ್ರೇಣಿ ಹಿಗ್ಗಿದೆ.

ಅಮೆರಿಕದ ಮೂಲದ ಕೆಲ್ವಿನೇಟರ್ ಬ್ರ್ಯಾಂಡ್ ಪುಟಿದೇಳುತ್ತಾ?

ಕೆಲ್ವಿನೇಟರ್ ಮೂಲತಃ ಅಮೆರಿಕನ್ ಕಂಪನಿ. ವಿಶ್ವದಲ್ಲೇ ಅತ್ಯಂತ ಜನಪ್ರಿಯವಾಗಿದ್ದ ಎಸಿ ಕಂಪನಿ. ಅರವತ್ತರ ದಶಕದಲ್ಲಿ ಭಾರತದ ಮಾರುಕಟ್ಟೆಗೆ ಬಂದ ಇದು ಎಂಬತ್ತರ ದಶಕದವರೆಗೂ ಅಜರಾಮರವಾಗಿ ಮಾರುಕಟ್ಟೆಯ ಕಿಂಗ್ ಎನಿಸಿತ್ತು. ಆದರೆ, 90ರ ದಶಕದಲ್ಲಿ ಮಾಲಕತ್ವ ಬದಲಾವಣೆಯ ಗೊಂದಲದಿಂದ ಅದರ ಪತನ ಆರಂಭವಾಯಿತು.

ವರ್ಲ್​ಪೂಲ್ ಸಂಸ್ಥೆ 1996ರಲ್ಲಿ ಕೆಲ್ವಿನೇಟರ್​ನ ಜಾಗತಿಕ ಹಕ್ಕುಗಳನ್ನು ಖರೀದಿಸಿತು. ನಿಧಾನವಾಗಿ ಕೆಲ್ವಿನೇಟರ ಅವರೋಹಣ ಅರಂಭವಾಯಿತು. ಕೆಲ್ವಿನೇಟರ್​ನ ಮಾಲಕತ್ವ ವರ್ಲ್​ಪೂಲ್​ನಿಂದ ಎಲೆಕ್ಟ್ರೋಲಕ್ಸ್​ಗೆ ವರ್ಗವಾಯಿತು. 2005ರ ಬಳಿಕ ಕೆಲ್ವಿನೇಟರ್ ಬಹುತೇಕ ನೇಪಥ್ಯಕ್ಕೆ ಸರಿದಹೋಗಿತ್ತು.

ಇದನ್ನೂ ಓದಿ: ಟಿಸಿಎಸ್ ಬೆಂಚ್ ಪಾಲಿಸಿ: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಶೇ 15 ಉದ್ಯೋಗಿಗಳು?

ರಿಲಾಯನ್ಸ್ ಸ್ಪರ್ಶದ ಬಳಿಕ ಚೇತರಿಸಿಕೊಳ್ಳುತ್ತಿರುವ ಕೆಲ್ವಿನೇಟರ್

2019ರಲ್ಲಿ ರಿಲಾಯನ್ಸ್ ರೀಟೇಲ್ ಮತ್ತು ಎಲೆಕ್ಟ್ರೋಲಕ್ಸ್ ಮಧ್ಯೆ ಒಪ್ಪಂದ ಆಯಿತು. ಅಲ್ಲಿಂದ ಕೆಲ್ವಿನೇಟರ್​ಗೆ ಪುಷ್ಟಿ ಸಿಗತೊಡಗಿತು. ಇದೀಗ ಕೆಲ್ವಿನೇಟರ್ ಅನ್ನು ಸ್ವತಃ ರಿಲಾಯನ್ಸ್ ರೀಟೇಲ್ ಖರೀದಿ ಮಾಡಿದೆ. ಈ ಮೂಲಕ ಫ್ರಿಡ್ಜ್ ಮತ್ತು ಎಸಿ ಕಂಪನಿಗೆ ಮತ್ತಷ್ಟು ಪುಷ್ಟಿ ಸಿಗುವ ನಿರೀಕ್ಷೆ ಇದೆ. ಇದೇ ವೇಳೆ, ಕೆಲ್ವಿನೇಟರ್ ಅನ್ನು ಖರೀದಿಸಲು ರಿಲಾಯನ್ಸ್ ರೀಟೇಲ್ ಎಷ್ಟು ಹಣ ತೆತ್ತಿತು ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ