Wipro: ಕೇವಲ 10 ನಿಮಿಷಗಳಲ್ಲಿ ವಿಪ್ರೋದ 20 ಮಂದಿ ಉನ್ನತ ಸಿಬ್ಬಂದಿ ವಜಾ: ರಿಷದ್ ಪ್ರೇಮ್ ಜಿ

ಅಪ್ರಾಮಾಣಿಕ ನಡವಳಿಕೆ ತೋರಿದ 20 ಮಂದಿ ಉನ್ನತ ಸಿಬ್ಬಂದಿಯನ್ನು ಕಂಪನಿಯಿಂದ ವಜಾ ಮಾಡುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡಿದ್ದೆವು ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಬಹಿರಂಗಪಡಿಸಿದ್ದಾರೆ. ಮೂನ್​ಲೈಟಿಂಗ್ ಅನ್ನು ನೈತಿಕವಾಗಿ ಸರಿ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ವಿಷಯಗಳನ್ನು ನಿರ್ಲಕ್ಷಿಸುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಪ್ರೋತ್ಸಾಹಿಸುವುದಿಲ್ಲ ಎಂದು ಐಬಿಎಂ ಕೂಡ ಇತ್ತೀಚೆಗೆ ಹೇಳಿತ್ತು.

Wipro: ಕೇವಲ 10 ನಿಮಿಷಗಳಲ್ಲಿ ವಿಪ್ರೋದ 20 ಮಂದಿ ಉನ್ನತ ಸಿಬ್ಬಂದಿ ವಜಾ: ರಿಷದ್ ಪ್ರೇಮ್ ಜಿ
ಪ್ರಾತಿನಿಧಿಕ ಚಿತ್ರ
Edited By:

Updated on: Apr 05, 2026 | 10:34 AM

ಬೆಂಗಳೂರು: ಅಪ್ರಾಮಾಣಿಕ ನಡವಳಿಕೆ ತೋರಿದ 20 ಮಂದಿ ಉನ್ನತ ಸಿಬ್ಬಂದಿಯನ್ನು ಕಂಪನಿಯಿಂದ ವಜಾ ಮಾಡುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡಿದ್ದೆವು ಎಂದು ವಿಪ್ರೋ (Wipro) ಅಧ್ಯಕ್ಷ ರಿಷದ್ ಪ್ರೇಮ್ ಜಿ (Rishad Premji) ಗುರುವಾರ ಬಹಿರಂಗಪಡಿಸಿದ್ದಾರೆ. ಮೂನ್​ಲೈಟಿಂಗ್ (moonlighting) ಆರೋಪದಲ್ಲಿ ನೂರಾರು ಉದ್ಯೋಗಿಗಳನ್ನು ಕಂಪನಿ ಇತ್ತೀಚೆಗೆ ವಜಾ ಮಾಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ಮಹತ್ತರ ಕ್ರಮ ಕೈಗೊಂಡಿರುವ ಬಗ್ಗೆ ಪ್ರೇಮ್ ಜಿ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ‘ನಾಸ್​ಕಾಂ ಪ್ರಾಡಕ್ಟ್ ಕಾನ್​ಕ್ಲೇವ್’​ನಲ್ಲಿ ಮಾತನಾಡಿದ ಅವರು, ‘ಕಂಪನಿಯ ಹಿತದೃಷ್ಟಿಯಿಂದ ಅವರನ್ನು ಹೊರ ಕಳುಹಿಸುವುದು ಅನಿವಾರ್ಯವಾಗಿತ್ತು. ಕಷ್ಟದ ಸಂದರ್ಭಗಳಲ್ಲಿ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ನಾವು 10 ನಿಮಿಗಳಲ್ಲಿ ಆ ತೀರ್ಮಾನ ಕೈಗೊಂಡೆವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Moonlighting: 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ

ಇದನ್ನೂ ಓದಿ
ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ
JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ

ಆದಾಗ್ಯೂ, ಮೂನ್​ಲೈಟಿಂಗ್ ಮಾಡಿದ್ದಕ್ಕೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆಯೇ ಅಥವಾ ಬೇರೆಯೇ ಕಾರಣವಿತ್ತೇ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಈ ವಿಚಾರವಾಗಿ ಕಾನ್​ಕ್ಲೇವ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಲೂ ಅವರು ನಿರಾಕರಿಸಿದ್ದಾರೆ. ಈ ಬೆಳವಣಿಗೆ ಮೂಲಕ, ಪ್ರಾಮಾಣಿಕತೆಗೆ ತಮ್ಮ ಕಂಪನಿ ಯಾವ ರೀತಿಯ ಮಹತ್ವ ನೀಡುತ್ತದೆ ಎಂಬುದನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಮಗ್ರತೆಗೆ ಧಕ್ಕೆ ತರುವ ಮತ್ತು ದೌರ್ಜನ್ಯದ ವಿಚಾರದಲ್ಲಿ ನಾವು ಶೂನ್ಯ ಸಹನೆ ಹೊಂದಿದ್ದೇವೆ. ಈ ಎರಡನ್ನು ಉಲ್ಲಂಘಿಸುವವರಿಗೆ ನಮ್ಮ ಕಂಪನಿಯಲ್ಲಿ ಕೆಲಸವಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ, ಉನ್ನತ ಸಿಬ್ಬಂದಿಯೊಬ್ಬರನ್ನು ಉಲ್ಲೇಖಿಸಿ, ಆರೇಳು ವರ್ಷಗಳ ಹಿಂದೆಯೇ ಅವರನ್ನು ವಜಾಗೊಳಿಸಬೇಕಾಗಿತ್ತು. ಅವರು ಕಂಪನಿಯ ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದುಗೊತ್ತಾಗಿತ್ತು. ಹೀಗಾಗಿ ತಕ್ಷಣವೇ ಅವರನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡೆವು ಎಂದು ಅವರು ಹೇಳಿದ್ದಾರೆ.

ಮೂನ್​ಲೈಟಿಂಗ್ ಬಗ್ಗೆ ಆಕ್ಷೇಪಿಸಿದ್ದ ಪ್ರೇಮ್ ಜಿ:

ಮೂನ್​ಲೈಟಿಂಗ್ ಬಗ್ಗೆ ಆಕ್ಷೇಪ ಸೂಚಿಸಿದ್ದ ಅವರು, ಇದು ಕಂಪನಿಯ ಸಮಗ್ರತೆಗೆ ಧಕ್ಕೆ ತರುವಂಥ ವಿಚಾರ ಎಂದು ಹೇಳಿದ್ದರು. ‘ಆಲ್​ ಇಂಡಿಯಾ ಮ್ಯಾನೇಜ್​ಮೆಂಟ್ ಅಸೋಸಿಯೇಷನ್​’ ಸಭೆಯಲ್ಲಿ ಅವರು ಈ ಮಾತುಗಳನ್ನಾಡಿದ್ದರು.

ದೇಶದ ಹೆಚ್ಚಿನ ಐಟಿ ಕಂಪನಿಗಳು ಮೂನ್​ಲೈಟಿಂಗ್ ಒಂದು ಸಮಸ್ಯೆ ಎಂದೇ ಪ್ರತಿಪಾದಿಸಿವೆ. ಮೂನ್​ಲೈಟಿಂಗ್​ ಹಿನ್ನೆಲೆಯಲ್ಲಿ ವಿಪ್ರೋ ತನ್ನ 300 ಉದ್ಯೋಗಿಗಳನ್ನು ಸೆಪ್ಟೆಂಬರ್​ನಲ್ಲಿ ವಜಾಗೊಳಿಸಿತ್ತು. ಕೆಲವು ತಿಂಗಳುಗಳಿಂದ ಈ ಉದ್ಯೋಗಿಗಳು ತಮ್ಮ ಕಂಪನಿ ಜತೆಗೆ ಇತರೆ ಕಂಪನಿಗಳಿಗಾಗಿ ಕೆಲಸ ಮಾಡುತ್ತಿರುವ ವಿಷಯ ಬೆಳಕಿಗೆ ಬಂದ ಕಾರಣ ಕ್ರಮ ಕೈಗೊಂಡಿರುವುದಾಗಿ ವಿಪ್ರೋ ಹೇಳಿತ್ತು.

ಮೂನ್​ಲೈಟಿಂಗ್ ಅನ್ನು ನೈತಿಕವಾಗಿ ಸರಿ ಎಂದು ಪರಿಗಣಿಸಲಾಗುವುದಿಲ್ಲ. ಅಂತಹ ವಿಷಯಗಳನ್ನು ನಿರ್ಲಕ್ಷಿಸುವುದಿಲ್ಲ ಮತ್ತು ಯಾವುದೇ ಸಂದರ್ಭದಲ್ಲೂ ಪ್ರೋತ್ಸಾಹಿಸುವುದಿಲ್ಲ ಎಂದು ಐಬಿಎಂ ಕೂಡ ಇತ್ತೀಚೆಗೆ ಹೇಳಿತ್ತು. ಒಂದು ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ದಿನದ ಕೆಲಸದ ಅವಧಿ ಮುಗಿದ ನಂತರ ಮತ್ತೊಂದು ಕಂಪನಿಗಾಗಿ ಕೆಲಸ ಮಾಡುವುದನ್ನು ಮೂನ್​ಲೈಟಿಂಗ್ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Thu, 20 October 22

Follow Us