ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಜೂನ್ 28ನೇ ತಾರೀಕಿನ ಮಂಗಳವಾರದಂದು 78.68ಕ್ಕೆ ಕುಸಿದಿತ್ತು. ಈ ಮೂಲಕ ದಾಖಲೆಯ ಸಾರ್ವಕಾಲಿಕ ಕುಸಿತ ಕಂಡಿದೆ ರೂಪಾಯಿ ಮೌಲ್ಯ. ಅಂದ ಹಾಗೆ ಈ ತಿಂಗಳಲ್ಲಿ ಶೇಕಡಾ 1ರಷ್ಟು ರೂಪಾಯಿ ಮೌಲ್ಯ ಕುಸಿತವಾಗಿದ್ದರೆ, ಈ ವರ್ಷದಲ್ಲಿ ಶೇ 6 ರಷ್ಟು ಇಳಿಕೆ ಆಗಿದೆ. ಹೀಗೆ ಆಗುವುದರಿಂದ ವಿದೇಶದಿಂದ ವಸ್ತುಗಳ ಅಮದಿಗೆ ಭಾರತದಿಂದ ಹೆಚ್ಚಿನ ವೆಚ್ಚ ಆಗುತ್ತದೆ. ಆದರೆ ಭಾರತದ ರಫ್ತುದಾರರಿಗೆ (Exports) ಹೆಚ್ಚಿನ ಲಾಭ ಆಗುತ್ತದೆ. ದೇಶೀಯ ಷೇರುಗಳ ದುರ್ಬಲತೆ ಮಧ್ಯೆ ಅಮೆರಿಕ ಡಾಲರ್ (US Dollar) ಎದುರು ಭಾರತೀಯ ರೂಪಾಯಿ ಜೂನ್ 28ರ ಮಂಗಳವಾರ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯು ದೇಶೀಯ ಕರೆನ್ಸಿಯ ಮೇಲೂ ಪರಿಣಾಮ ಬೀರಿತು. ಡಾಲರ್ ಎದುರು ರೂಪಾಯಿ ಮೌಲ್ಯ ದಿನದ ಕನಿಷ್ಠ ಮಟ್ಟದಲ್ಲಿ 78.68ಕ್ಕೆ ಕುಸಿದಿದೆ. ಸೋಮವಾರದಂದು ರೂಪಾಯಿ ಮೌಲ್ಯವು 4 ಪೈಸೆಗಳಷ್ಟು ಕುಸಿದು, ಅಮೆರಿಕ ಡಾಲರ್ ಎದುರು ಅದರ ಜೀವಿತಾವಧಿಯ ಕನಿಷ್ಠ ಮಟ್ಟವಾದ 78.37ಕ್ಕೆ ಕೊನೆಗೊಂಡಿತು.
“ಜೂನ್ 28ರಂದು ಡಾಲರ್ ಸೂಚ್ಯಂಕಕ್ಕೆ ವಿರುದ್ಧವಾಗಿ ಭಾರತೀಯ ರೂಪಾಯಿ ಸ್ಪಾಟ್ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ಮುಂದುವರಿದ ಮಾರಾಟದ ಕಾರಣದಿಂದಾಗಿ ಹೆಚ್ಚಿದ ಕಚ್ಚಾ ತೈಲ ಬೆಲೆಗಳು, ಇದು ನಿವ್ವಳ ಆಮದುದಾರರ ಹಣಕಾಸಿನ ಸಮತೋಲನವನ್ನು ತಗ್ಗಿಸಬಹುದು. ಏರುತ್ತಿರುವ ಕಚ್ಚಾ ತೈಲ ಬೆಲೆಗಳು ಮತ್ತೊಮ್ಮೆ ಹಣದುಬ್ಬರ ಹೆಚ್ಚಳದ ಕಳವಳವನ್ನು ತರುತ್ತವೆ. ಇದು ಕೇಂದ್ರೀಯ ಬ್ಯಾಂಕ್‌ಗಳಿಗೆ ದರಗಳನ್ನು ಏರಿಸುವುದಕ್ಕೆ ಅತ್ಯಂತ ಆಕ್ರಮಣಕಾರಿ ಮಾಡುತ್ತದೆ ಮತ್ತು ಆ ಮೂಲಕ ಆರ್ಥಿಕ ಹಿಂಜರಿತದತ್ತ ನಡೆಸುತ್ತದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಇನ್ನೂ ಮುಂದುವರಿದು, “ಈ ಅವಳಿ ಕೊರತೆಗಳು ಉದಯೋನ್ಮುಖ ಮಾರುಕಟ್ಟೆಯ ಕರೆನ್ಸಿಯ ಮೇಲೆ ಒತ್ತಡವನ್ನು ಹೆಚ್ಚಿಸುವುದರಿಂದ ವರ್ಷಾಂತ್ಯದ ವೇಳೆಗೆ ರೂಪಾಯಿ ಮೌಲ್ಯವು 80/81 ಮಟ್ಟಕ್ಕೆ ಕುಸಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಜುಲೈ ಸಭೆಯಲ್ಲಿ ಫೆಡ್ 75 ಬಿಪಿಎಸ್ ದರಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಆದರೆ ಆರ್‌ಬಿಐ ಸಭೆಯು ಆಗಸ್ಟ್‌ವರೆಗೆ ಬಾಕಿ ಉಳಿದಿಲ್ಲ. ಇದು ಭಾರತ ಮತ್ತು ಯುಎಸ್ ನಡುವಿನ ಯೀಲ್ಡ್ ವ್ಯತ್ಯಾಸಗಳನ್ನು ಕಡಿಮೆ ಮಾಡುತ್ತದೆ ಮತ್ತು ರೂಪಾಯಿಯ ಮೇಲೆ ಮತ್ತಷ್ಟು ತೂಗಬಹುದು,” ಎನ್ನುತ್ತಾರೆ. ಮೊದಲೇ ಹೇಳಿದಂತೆ ಭಾರತೀಯ ರೂಪಾಯಿ ವಿರುದ್ಧ ಈ ವರ್ಷ ಇಲ್ಲಿಯವರೆಗೆ ಡಾಲರ್ ಸುಮಾರು ಶೇ 6ರಷ್ಟು ಹೆಚ್ಚಾಗಿದೆ.
ಪ್ರಮುಖ ಉತ್ಪಾದಕರಾದ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಸಾಧ್ಯವಾಗದೇ ತೈಲ ಬೆಲೆಗಳು ಇಂದು ಮೂರನೇ ದಿನಕ್ಕೆ ಏರಿಕೆ ಕಂಡಿದ್ದು, ಲಿಬಿಯಾ ಮತ್ತು ಈಕ್ವೆಡಾರ್‌ನಲ್ಲಿನ ರಾಜಕೀಯ ಅಶಾಂತಿಯು ಪೂರೈಕೆಯ ಬಗ್ಗೆ ಆತಂಕ ಹೆಚ್ಚಿಸಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಯುಎಸ್ಡಿ 1.26 ಅಥವಾ ಶೇ 1.1ರಷ್ಟು ಮೇಲೇರಿ, ಬ್ಯಾರೆಲ್ಗೆ 116.35ರಲ್ಲಿ ಮುಂದುವರೆದಿದೆ. ಈ ಹಿಂದಿನ ಸೆಷನ್ನಲ್ಲೂ ಶೇ 1.7ರಷ್ಟು ಏರಿಕೆಯಾಗಿತ್ತು.
ದೇಶಿಯ ಮಾರುಕಟ್ಟೆಗಳಲ್ಲಿ ಎಫ್‌ಐಐಗಳ ನಿರಂತರ ಮಾರಾಟ ಕೂಡ ರೂಪಾಯಿ ಮೇಲೆ ಒತ್ತಡ ಹೇರುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದು, ಷೇರು ವಿನಿಮಯದ ಮಾಹಿತಿಯ ಪ್ರಕಾರ ರೂ. 1,278.42 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ.
ಮತ್ತೊಬ್ಬ ತಜ್ಞರ ಪ್ರಕಾರ, ಈ ವಾರ ರೂಪಾಯಿ ಅಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ. “ಕಚ್ಚಾ ತೈಲ ಬೆಲೆಗಳಲ್ಲಿ ಮರುಕಳಿಸುವಿಕೆ ಮತ್ತು ರಷ್ಯಾದ ಮೇಲೆ ಹೆಚ್ಚಿನ ಆರ್ಥಿಕ ನಿರ್ಬಂಧಗಳ ಮಾತುಕತೆಗಳು ರೂಪಾಯಿಯನ್ನು ಕೆಳಕ್ಕೆ ತಳ್ಳಿದವು. ದೇಶಿಯ ಮಾರುಕಟ್ಟೆಗಳಲ್ಲಿ ಎಫ್‌ಐಐಗಳ ನಿರಂತರ ಮಾರಾಟ ಕೂಡ ರೂಪಾಯಿ ಮೇಲೆ ಒತ್ತಡ ಹೇರುತ್ತಿದೆ. ರಷ್ಯಾದ ಮೇಲಿನ ಮತ್ತಷ್ಟು ಆರ್ಥಿಕ ನಿರ್ಬಂಧಗಳು ಜಾಗತಿಕ ಇಂಧನ ಬೆಲೆಗಳನ್ನು ಹೆಚ್ಚಿಸಬಹುದು ಮತ್ತು ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳ ಮೇಲೆ ಒತ್ತಡವನ್ನು ಉಂಟುಮಾಡಬಹುದು.”
ಇದನ್ನೂ ಓದಿ: ಮೊದಲ ಬಾರಿಗೆ ಅಮೆರಿಕದಿಂದ ಹೆಚ್ಚಿನ ಪ್ರಮಾಣದ ಯೂರಿಯಾ ಆಮದು ಮಾಡಲಿದೆ ಭಾರತ
Published On - 2:02 pm, Tue, 28 June 22