India Exports: ಒಟ್ಟಾರೆ ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳ ರಫ್ತು 2022ರ ಮೇ ತಿಂಗಳಲ್ಲಿ ಶೇ 24ರಷ್ಟು ಜಿಗಿತ
ಭಾರತದ ಒಟ್ಟಾರೆ ಮಾರುಕಟ್ಟೆ ವಸ್ತುಗಳು ಹಾಗೂ ಸೇವಾ ರಫ್ತು 2022ರ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದ ಜಿಗಿತವನ್ನು ದಾಖಲಿಸಿದೆ.
ಮೇ 2022*ರಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್ಡಿ 62.21 ಶತಕೋಟಿ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 24.03ರಷ್ಟು ಪಾಸಿಟಿವ್ ಬೆಳವಣಿಗೆ ಆಗಿದೆ. ಮೇ 2022ರಲ್ಲಿ ಸರಕು ರಫ್ತು (Export) ಯುಎಸ್ಡಿ 38.94 ಬಿಲಿಯನ್ ಆಗಿದ್ದು, ಅದೇ ಮೇ 2021ರಲ್ಲಿ ಯುಎಸ್ಡಿ 32.30 ಶತಕೋಟಿ ಆಗಿತ್ತು. ಆ ಮೂಲಕ ಶೇ 20.55 ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಮೇ 2022*ರ ಸೇವಾ ರಫ್ತಿನ ಅಂದಾಜು ಮೌಲ್ಯ ಯುಎಸ್ಡಿ 23.28 ಬಿಲಿಯನ್ ಆಗಿದ್ದು, ಮೇ 2021ಕ್ಕೆ ಹೋಲಿಸಿದರೆ ಶೇ 30.32 ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ (ಆಗ ಯುಎಸ್ಡಿ 17.86 ಬಿಲಿಯನ್).
ಏಪ್ರಿಲ್-ಮೇ 2022*ರಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್ಡಿ 124.59 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ಬಾರಿ ಇದೇ ಅವಧಿಗೆ ಹೋಲಿಸಿದರೆ ಶೇ 25.90ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಏಪ್ರಿಲ್-ಮೇ 2022ರ ಅವಧಿಗೆ ಸರಕು ರಫ್ತು ಯುಎಸ್ಡಿ 78.72 ಬಿಲಿಯನ್ ಆಗಿದ್ದು, ಏಪ್ರಿಲ್-ಮೇ 2021ರ ಅವಧಿಯಲ್ಲಿ ಆದ ಯುಎಸ್ಡಿ 63.05 ಶತಕೋಟಿಗೆ ಹೋಲಿಸಿದರೆ ಶೇ 24.86ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ದಾಖಲಿಸಿದೆ. ಏಪ್ರಿಲ್-ಮೇ 2022*ರ ಅಂದಾಜು ಮೌಲ್ಯದ ಸೇವೆಗಳ ರಫ್ತು ಯುಎಸ್ಡಿ 45.87 ಬಿಲಿಯನ್ ಆಗಿದ್ದು, ಇದು ಏಪ್ರಿಲ್-ಮೇ 2021ಕ್ಕೆ ಹೋಲಿಸಿದರೆ ಶೇ 27.71ರ ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ (ಯುಎಸ್ಡಿ 35.92 ಬಿಲಿಯನ್).
ಮೇ 2022*ರಲ್ಲಿ ಒಟ್ಟಾರೆ ಆಮದು (ಮಾರುಕಟ್ಟೆ ವಅ್ತುಗಳು ಮತ್ತು ಸೇವೆಗಳು ಸೇರಿ) ಯುಎಸ್ಡಿ 77.65 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 59.19ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಏಪ್ರಿಲ್-ಮೇ 2022*ರಲ್ಲಿ ಒಟ್ಟಾರೆ ಆಮದು ಯುಎಸ್ಡಿ 151.89 ಶತಕೋಟಿ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 45.44ರಷ್ಟು ಪಾಸಿಟಿವ್ ಬೆಳವಣಿಗೆಯನ್ನು ದಾಖಲಿಸಿದೆ.
(* ಗಮನಿಸಿ: ಆರ್‌ಬಿಐನಿಂದ ಬಿಡುಗಡೆಯಾದ ಇತ್ತೀಚಿನ ಡೇಟಾವು ಏಪ್ರಿಲ್ 2022ಕ್ಕೆ ಆಗಿದೆ. ಮೇ 2022ರ ಡೇಟಾವು ಅಂದಾಜು ಆಗಿದ್ದು, ಇದನ್ನು ಆರ್‌ಬಿಐನ ನಂತರದ ಬಿಡುಗಡೆಯ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. (ii) ಏಪ್ರಿಲ್-ಮೇ 2021ರ ಡೇಟಾವನ್ನು ತ್ರೈಮಾಸಿಕ ಪಾವತಿಗಳ ಬ್ಯಾಲೆನ್ಸ್ ಡೇಟಾವನ್ನು ಬಳಸಿಕೊಂಡು ಅನುಪಾತದ ಆಧಾರದ ಮೇಲೆ ಪರಿಷ್ಕರಿಸಲಾಗಿದೆ.)
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Wed, 15 June 22