JioPhone Tariff: ಜಿಯೋಫೋನ್ ದರ ಶೇ 20ರಷ್ಟು ಹೆಚ್ಚಳ
ಜಿಯೋಫೋನ್ ದರ ಶೇಕಡಾ 20ರಷ್ಟು ಹೆಚ್ಚಳ ಮಾಡಿದೆ. ವಿವಿಧ ಪ್ಲಾನ್ಗಳ ದರವನ್ನು ಏರಿಕೆ ಮಾಡಲಾಗಿದೆ. ಅದರ ಬಗ್ಗೆ ವಿವರಗಳು ಇಲ್ಲಿವೆ.
ಕೆಲ ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ತನ್ನ ಜಿಯೋಫೋನ್ ಅನ್ನು ಭಾರತೀಯ ಬಳಕೆದಾರರಿಗಾಗಿ ಘೋಷಿಸಿತು. ಜಿಯೋಫೋನ್ (JioPhone) ಒಂದು ಕೈಗೆಟುಕುವ ಫೀಚರ್ ಫೋನ್ ಆಗಿದ್ದು, ಇದನ್ನು ಸದ್ಯಕ್ಕೆ ಭಾರತದಲ್ಲಿ ಅನೇಕ ಹೊಸ ಫೋನ್ ಬಳಕೆದಾರರು ಅಥವಾ ಹಿರಿಯರು ಬಳಸುತ್ತಿದ್ದಾರೆ. ಫೋನ್ ಅನ್ನು ಜಿಯೋ SIM ಕಾರ್ಡ್‌ನೊಂದಿಗೆ ಮಾತ್ರ ಬಳಸಬಹುದು ಮತ್ತು ವಿಶೇಷವಾಗಿ ಜಿಯೋಫೋನ್ಗಾಗಿ ಒಂದೆರಡು ಅಗ್ಗದ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಜಿಯೋ ಯೋಜನೆಗಳು ಇನ್ನು ಮುಂದೆ ಅಗ್ಗವಾಗಿಲ್ಲ, ಏಕೆಂದರೆ ಕಂಪೆನಿಯು ದರಗಳನ್ನು ಶೇ 20ರಷ್ಟು ಹೆಚ್ಚಿಸಿದೆ.
ಜಿಯೋಫೋನ್ ದರಗಳು ಶೇ 20ರಷ್ಟು ಹೆಚ್ಚಳ ಆರಂಭದಲ್ಲಿ ಎಲ್ಲ ಜಿಯೋಫೋನ್ ದರಗಳನ್ನು ಪರಿಚಯಾತ್ಮಕ ಬೆಲೆಯಲ್ಲಿ ನೀಡಲಾಯಿತು. ಆದರೆ ವರದಿಯ ಪ್ರಕಾರ, ಪರಿಚಯಾತ್ಮಕ ಕೊಡುಗೆ ಮುಗಿದಿದೆ ಮತ್ತು ಬೆಲೆಗಳನ್ನು ಶೇ 20ರಷ್ಟು ಹೆಚ್ಚಿಸಲಾಗಿದೆ. ಬೆಲೆ ಬದಲಾವಣೆಯು ಕಂಪೆನಿಯ ವೆಬ್‌ಸೈಟ್‌ನಲ್ಲಿಯೂ ಪ್ರತಿಫಲಿಸುತ್ತದೆ. ರೂ. 155 ಜಿಯೋಫೋನ್ ಯೋಜನೆಯು ಈಗ ರೂ. 186, 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ರೂ. 185 ಪ್ಲಾನ್‌ನ ಬೆಲೆಯನ್ನು ಈಗ ರೂ.222ಕ್ಕೆ ಹೆಚ್ಚಿಸಲಾಗಿದೆ. ಅದೇ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಪ್ರೀಮಿಯಂ ಯೋಜನೆ ರೂ. 748, ಇದು ಸುಮಾರು ಒಂದು ವರ್ಷದ ವ್ಯಾಲಿಡಿಟಿಯನ್ನು ನೀಡುತ್ತದೆ, ಅಂದರೆ 336 ದಿನಗಳು, ಬೆಲೆ ಈಗ ರೂ. 899.
ಗಮನಿಸಬೇಕಾದ ಅಂಶವೆಂದರೆ, ರಿಲಯನ್ಸ್ ಜಿಯೋ ತನ್ನ ನಿಯಮಿತ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸಹ ಹೆಚ್ಚಿಸುತ್ತಿದೆ. ವಾಸ್ತವವಾಗಿ, ಭಾರ್ತಿ ಏರ್‌ಟೆಲ್ ಕೂಡ ತನ್ನ ರೀಚಾರ್ಜ್ ಪ್ಲಾನ್ಗಳನ್ನು ಹೆಚ್ಚಿಸಿದೆ. ಎರಡೂ ಬೆಲೆ ಪ್ರಿಪೇಯ್ಡ್ ಪ್ಲಾನ್ ದರಗಳನ್ನು ಶೇ 25ರವರೆಗೆ ಹೆಚ್ಚಿಸಿವೆ. ಇದು ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳಲು ಪ್ರತಿ ಬಳಕೆದಾರರಿಗೆ (ARPU) ಸರಾಸರಿ ಆದಾಯವನ್ನು ಹೆಚ್ಚಿಸುವುದು. ಈ ಹಿಂದೆ, ದರ ಹೆಚ್ಚಳದೊಂದಿಗೆ ಎರಡೂ ಟೆಲಿಕಾಂಗಳು ಚಂದಾದಾರರ ನಷ್ಟವನ್ನು ಕಂಡಿವೆ. ಆದರೆ ಈ ಚಂದಾದಾರರು ಸ್ಪೆಕ್ಟ್ರಮ್‌ನ ಕೆಳ ತುದಿಯಿಂದ ಬಂದವರು, ಅಂದರೆ ಮಾಸಿಕ ಖರ್ಚು ಕಡಿಮೆ ಇರುವವರು. ಅವರು ಕಂಪೆನಿಯ ARPUಗೆ ಕೊಡುಗೆ ನೀಡುವುದಿಲ್ಲ ಎನ್ನಲಾಗಿದೆ.
ನಿರ್ದಿಷ್ಟವಾಗಿ ಜಿಯೋಗೆ, ಭಾರ್ತಿ ಏರ್‌ಟೆಲ್ ಮತ್ತು Viನಂಥ ಸ್ಪರ್ಧೆಗಿಂತ ಅದರ ದರಗಳು ಇನ್ನೂ ಕಡಿಮೆ ಇರುವುದರಿಂದ ಅದು ಹೆಚ್ಚಿನ ಚಂದಾದಾರರನ್ನು ಕಳೆದುಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಜಿಯೋ ARPUನಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಶೇ 10.6 ಏರಿಕೆ ಕಂಡು, ಈ ವರ್ಷದ ಮಾರ್ಚ್‌ನಲ್ಲಿ ರೂ. 168 ಆಗಿದೆ. ಎಲ್ಲ ಪ್ರಮುಖ ಟೆಲಿಕಾಂ ಕಂಪೆನಿಗಳ ಪೈಕಿ ಭಾರ್ತಿ ಏರ್‌ಟೆಲ್ ಅತ್ಯಧಿಕ ARPU ರೂ. 178 ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:56 pm, Wed, 15 June 22