AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Enabled Payment System: ಏನಿದು ಆಧಾರ್ ಎನೇಬಲ್ಡ್ ಪಾವತಿ ವ್ಯವಸ್ಥೆ? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ

ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಅಂದರೇನು ಎಂಬ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿ ನಿಮಗೆ ಈ ಲೇಖನದಲ್ಲಿ ದೊರೆಯಲಿದೆ.

Aadhaar Enabled Payment System: ಏನಿದು ಆಧಾರ್ ಎನೇಬಲ್ಡ್ ಪಾವತಿ ವ್ಯವಸ್ಥೆ? ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 15, 2022 | 10:32 AM

Share

ಈಗಿನ ಡಿಜಿಟಲ್ ಜಮಾನದಲ್ಲಿ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳುವುದು ಓಬೀರಾಯನ ಫ್ಯಾಷನ್​ನವರು ಮಾತ್ರ ಎಂಬಂತೆ ಆಗಿರುವುದರಿಂದ ಪಾವತಿ ಆಯ್ಕೆಗಳ ವಿಷಯದಲ್ಲಿ ಸರಾಸರಿ ಗ್ರಾಹಕರು ಈಗ ಈ ಆಯ್ಕೆಗೆ ಬದಲಾಗುತ್ತಿದ್ದಾರೆ. ನಗದು ಪಾವತಿಯ (Cash Payment) ಬಗ್ಗೆ ಏನು ಹೇಳಬೇಕು, ಡಿಜಿಟಲ್ ಪಾವತಿ ಆಯ್ಕೆಗಳ ದರವು ಏರುತ್ತಿದ್ದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸುವ “ಆಧುನಿಕ” ವಿಧಾನವೂ ವೇಗವಾಗಿ ಕಡಿಮೆ ಆಗುತ್ತಾ ಬರುತ್ತಿದೆ. ಡಿಜಿಟಲ್ ಪಾವತಿಯ ವಿವಿಧ ವಿಧಾನಗಳಲ್ಲಿ ಸರ್ಕಾರವು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ಅಥವಾ AePS ಅನ್ನು ಉತ್ತೇಜಿಸುತ್ತಿದೆ. ಸಬ್ಸಿಡಿ ಪಾವತಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ.

AePS ಅಂದರೇನು?

ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AePS) ಬ್ಯಾಂಕ್ ನೇತೃತ್ವದ ಮಾದರಿಯಾಗಿದ್ದು, ಇದು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನೇರ ಲಾಭ ವರ್ಗಾವಣೆಯ (DBT) ಫಲಾನುಭವಿಗಳ ಖಾತೆಗಳನ್ನು ಒಳಗೊಂಡಂತೆ ಬಿಜಿನೆಸ್ ಕರೆಸ್ಪಾಂಡೆಂಟ್ ಮೂಲಕ (BCs) ಖಾತೆಗಳಲ್ಲಿ ಆನ್‌ಲೈನ್ ಇಂಟರ್‌ಆಪರೇಬಲ್ ಹಣಕಾಸು ವಹಿವಾಟುಗಳನ್ನು ಅನುಮತಿಸುತ್ತದೆ.

ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಆಧಾರ್ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಲು ಮತ್ತು ನಗದು ಠೇವಣಿ, ನಗದು ಹಿಂಪಡೆಯುವಿಕೆ, ಇಂಟ್ರಾಬ್ಯಾಂಕ್ ಅಥವಾ ಇಂಟರ್‌ಬ್ಯಾಂಕ್ ನಿಧಿ ವರ್ಗಾವಣೆ, ಬ್ಯಾಲೆನ್ಸ್ ವಿಚಾರಣೆ ಮತ್ತು ಬಿಜಿನೆಸ್ ಕರೆಸ್ಪಾಂಡೆಂಟ್ ಮೂಲಕ ಮಿನಿ ಸ್ಟೇಟ್‌ಮೆಂಟ್ ಪಡೆಯುವಂತಹ ಮೂಲಭೂತ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಲು ಈ ಸೇವೆಯನ್ನು ಒದಗಿಸುತ್ತವೆ.

ಈ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು ಯಾವುವು?

ಈ ಪಾವತಿ ವ್ಯವಸ್ಥೆ ಅಡಿಯಲ್ಲಿ ವಹಿವಾಟಿನ ವೈಫಲ್ಯಗಳ ದೂರುಗಳು ಹೆಚ್ಚಾಗುತ್ತಿದ್ದು, ಇದು ಕುಸಿತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರವು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಕುಸಿತವನ್ನು ಕಡಿಮೆ ಮಾಡಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದೆ.

ವಹಿವಾಟು ಕಡಿಮೆ ಆಗುತ್ತಿರುವ ಪ್ರಕರಣಗಳನ್ನು ಪರಿಶೀಲಿಸಲು ಕ್ರಮಗಳು

NPCI ನೆಟ್‌ವರ್ಕ್ ತಂಡವನ್ನು ಒಳಗೊಂಡಂತೆ 24×7 ತಾಂತ್ರಿಕ ಬೆಂಬಲ ತಂಡವನ್ನು ಹೊಂದಿದ್ದು, ಇದು ಘಟನೆಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಘಟನೆಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಬಗೆಹರಿಸಲು ಬ್ಯಾಂಕ್‌ಗಳಿಗೆ ಸಹಾಯ ಮಾಡುತ್ತದೆ. ಬ್ಯಾಂಕ್‌ಗಳು ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಹಿವಾಟುಗಳನ್ನು ನಿರಾಕರಿಸುತ್ತಿದ್ದರೆ, ಬ್ಯಾಂಕ್‌ಗಳ ಹಿರಿಯ ನಿರ್ವಹಣೆಗೆ ವಿಷಯವನ್ನು ಎನ್‌ಪಿಸಿಐ ತಲುಪಿಸುತ್ತದೆ. ತಾಂತ್ರಿಕ ಕುಸಿತಗಳನ್ನು ಕಡಿಮೆ ಮಾಡಲು ಬ್ಯಾಂಕ್‌ಗಳಿಗೆ ಸಹಾಯ ಮಾಡುವುದಕ್ಕೆ ಎಲ್ಲ ಆನ್‌ಲೈನ್ ಉತ್ಪನ್ನಗಳಿಗೆ ತಾಂತ್ರಿಕ ಕಾರ್ಯಪಡೆಯನ್ನು ರಚಿಸಲಾಗಿದೆ. ಇದಲ್ಲದೆ, AePS ವಹಿವಾಟುಗಳ ತಾಂತ್ರಿಕ ಕುಸಿತಗಳನ್ನು ಹೊಂದಲು ನಿಯತಕಾಲಿಕವಾಗಿ ಸರ್ಕಾರದಿಂದ ನಿಯಮಿತ ಪರಿಶೀಲನೆಯನ್ನು ಮಾಡಲಾಗುತ್ತದೆ.

ಆರ್​ಬಿಐನಿಂದ ಮಧ್ಯಪ್ರವೇಶ

ಬಿಜಿನೆಸ್ ಕರೆಸ್ಪಾಂಡೆಂಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಭಾರತೀಯ ಬ್ಯಾಂಕ್‌ಗಳ ಸಂಘಕ್ಕೆ (IBA) ಬಿಜಿನೆಸ್ ಕರೆಸ್ಪಾಂಡೆಂಟ್ ರಿಜಿಸ್ಟ್ರಿ ಪೋರ್ಟಲ್‌ನ ಅಭಿವೃದ್ಧಿಗೆ ಚೌಕಟ್ಟನ್ನು ಸೂಚಿಸಿದೆ ಎಂದು ಆರ್‌ಬಿಐ ತಿಳಿಸಿದೆ. BC ರಿಜಿಸ್ಟ್ರಿ ಪೋರ್ಟಲ್ BC ಗಳ ಕುರಿತು ಸಂಬಂಧಿತ ಮಾಹಿತಿಯ ಕೇಂದ್ರೀಕೃತ (Centralised) ಭಂಡಾರವನ್ನು ಒದಗಿಸುತ್ತದೆ, ಇದು ಮೂಲಭೂತ ಜನಸಂಖ್ಯಾ ವಿವರಗಳು, ಸಂಬಂಧಪಟ್ಟ ಬ್ಯಾಂಕ್ ಮತ್ತು ಕಾರ್ಪೊರೇಟ್ BC ವಿವರಗಳನ್ನು ಸಂಗ್ರಹಿಸುತ್ತದೆ. ಜತೆಗೆ BCಗಳ ಸ್ಥಳ, ಕಾರ್ಯಾಚರಣೆಗಳ ಸ್ವರೂಪ, ಅರ್ಹತೆಗಳು, ಲಿಂಗ ಇತ್ಯಾದಿ ಸಹ ಸಂಗ್ರಹಿಸುತ್ತದೆ.

ಯಾವುದೇ ದುರುಪಯೋಗ ಅಥವಾ ವಂಚನೆಗಳ ಸಂದರ್ಭದಲ್ಲಿ ಪೋರ್ಟಲ್‌ನಲ್ಲಿ BCಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಆಯ್ಕೆಯನ್ನು ಬ್ಯಾಂಕ್‌ಗಳು ಹೊಂದಿದ್ದು, ಅದರ ವಿವರಗಳನ್ನು ಎಲ್ಲ ಪಾಲುದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ನಿರ್ಬಂಧಿಸಲಾದ ಅಥವಾ ಕಪ್ಪುಪಟ್ಟಿಗೆ ಸೇರಿಸಲಾದ ಎಲ್ಲ ಬಿಜಿನೆಸ್ ಕರೆಸ್ಪಾಂಡೆಂಟ್​ಗಳ ವಿವರಗಳನ್ನು ಎನ್‌ಪಿಸಿಐನಿಂದ ಕ್ರೋಡೀಕರಿಸಲಾಗುತ್ತದೆ ಮತ್ತು BC ಪರಿಸರ ವ್ಯವಸ್ಥೆಯ ಪ್ರಯೋಜನಕ್ಕಾಗಿ ಎಲ್ಲ ಸದಸ್ಯ ಬ್ಯಾಂಕ್‌ಗಳಿಗೆ ನಿಯತಕಾಲಿಕವಾಗಿ ವಿತರಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಿತಿ ಮೀರಿದ ನಗದು ವ್ಯವಹಾರ ಮಾಡುವ ಮುನ್ನ ಎಚ್ಚರ! ಮೊತ್ತಕ್ಕೆ ಸಮನಾದ ದಂಡ ತೆರಬೇಕಾದಿತು ಜೋಕೆ

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು