ಶೆಟ್ಟಿ ಮತ್ತು ಶಂಕರ್ ಫ್ಯಾಮಿಲಿ: ಭಾರತದ ಮೊದಲ ತಲೆಮಾರಿನ ಕೌಟುಂಬಿಕ ಬ್ಯುಸಿನೆಸ್ಗಳಲ್ಲಿ ಇಬ್ಬರು ಕನ್ನಡಿಗರು
Hurun India Most valued First Generation family business: ಹುರುನ್ ಇಂಡಿಯಾ ಸಂಸ್ಥೆ ಭಾರತದ ಅತ್ಯಂತ ಮೌಲ್ಯಯುತ ಎನಿಸಿರುವ ಫಸ್ಟ್ ಜನರೇಶನ್ ಫ್ಯಾಮಿಲಿ ಬ್ಯುಸಿನೆಸ್ಗಳ ಪಟ್ಟಿ ಪ್ರಕಟಿಸಿದೆ. ಇದರಲ್ಲಿ 14 ಲಕ್ಷ ಕೋಟಿ ರೂ ಮೌಲ್ಯದ ಬ್ಯುಸಿನೆಸ್ ಹೊಂದಿರುವ ಅದಾನಿ ಫ್ಯಾಮಿಲಿ ಮೊದಲ ಸ್ಥಾನ ಪಡೆದಿದೆ. ಪಟ್ಟಿಯಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಡಾ. ದೇವಿ ಶೆಟ್ಟಿ ಮತ್ತು ಎಂಆರ್ ಜೈಶಂಕರ್ ಆ ಇಬ್ಬರು ಕನ್ನಡಿಗ ಬ್ಯುಸಿನೆಸ್ಮೆನ್.

ಬೆಂಗಳೂರು, ಆಗಸ್ಟ್ 12: ಭಾರತದಲ್ಲಿರುವ ಮೊದಲ ತಲೆಮಾರಿನ ಫ್ಯಾಮಿಲಿ ಬ್ಯುಸಿನೆಸ್ಗಳ ಪೈಕಿ ನಂಬರ್ ಒನ್ ಸ್ಥಾನವನ್ನು ಅದಾನಿ ಫ್ಯಾಮಿಲಿ ಪಡೆದಿದೆ. ಹುರುನ್ ಇಂಡಿಯಾ ಪ್ರಕಟಿಸಿದ ಅತ್ಯಂತ ಮೌಲ್ಯಯುತ ಫ್ಯಾಮಿಲಿ ಬ್ಯುಸಿನೆಸ್ ಲಿಸ್ಟ್ನಲ್ಲಿ (Hurun India Most Valuable First Generation Family Business) ಇದನ್ನು ಗುರುತಿಸಲಾಗಿದೆ. ಈ ಫಸ್ಟ್ ಜನರೇಶನ್ ಫ್ಯಾಮಿಲಿ ಬ್ಯುಸಿನೆಸ್ ಪಟ್ಟಿಯಲ್ಲಿ ಎರಡು ಕನ್ನಡಿಗ ಕುಟುಂಬಗಳೂ ಇವೆ ಎನ್ನುವುದು ವಿಶೇಷ.
ಏನಿದು ಮೊದಲ ತಲೆಮಾರಿನ ಫ್ಯಾಮಿಲಿ ಬ್ಯುಸಿನೆಸ್?
ಒಬ್ಬ ವ್ಯಕ್ತಿ ಆರಂಭಿಸಿದ ಬ್ಯುಸಿನೆಸ್ ಅನ್ನು ಆತನ ಮುಂದಿನ ತಲೆಮಾರಿನವರು ಮುಂದುವರಿಸಿಕೊಂಡು ಹೋಗುವುದಕ್ಕೆ ಫ್ಯಾಮಿಲಿ ಬ್ಯುಸಿನೆಸ್ ಎನ್ನುವುದು. ಎರಡನೇ ತಲೆಮಾರಿನವರು ಫ್ಯಾಮಿಲಿ ಬ್ಯುಸಿನೆಸ್ನಲ್ಲಿ ತೊಡಗಿಸಿಕೊಂಡಿದ್ದರೆ ಅದು ಫಸ್ಟ್ ಜನರೇಶನ್ ಫ್ಯಾಮಿಲಿ ಬ್ಯುಸಿನೆಸ್ ಎನಿಸುತ್ತದೆ.
ಇದನ್ನೂ ಓದಿ: ‘ಡಮ್ಮಿ ಆಫೀಸು’, ‘ಡಮ್ಮಿ ಸಹೋದ್ಯೋಗಿಗಳು’; ಚೀನಾದಲ್ಲಿ ಹೊಸ ಟ್ರೆಂಡ್
ಇಬ್ಬರು ಕನ್ನಡಿಗರಿದ್ದಾರೆ ಪಟ್ಟಿಯಲ್ಲಿ
ಹುರುನ್ ಇಂಡಿಯಾದ ಫಸ್ಟ್ ಜನರೇಶನ್ ಬ್ಯುಸಿನೆಸ್ ಪಟ್ಟಿಯಲ್ಲಿ ಟಾಪ್-20ಯಲ್ಲಿ ಎರಡು ಕನ್ನಡಿಗ ಕುಟುಂಬಗಳಿವೆ. ಒಂದು ಶೆಟ್ಟಿ ಫ್ಯಾಮಿಲಿ, ಮತ್ತೊಂದು ಶಂಕರ್ ಫ್ಯಾಮಿಲಿ.
ನಾರಾಯಣ ಹೃದಯಾಲಯದ ಸಂಸ್ಥಾಪಕರಾದ ಡಾ. ದೇವಿ ಶೆಟ್ಟಿ ಮತ್ತವರ ಕುಟುಂಬ 10ನೇ ಸ್ಥಾನ ಪಡೆದಿದೆ. ಇವರ ಬ್ಯುಸಿನೆಸ್ ಮೌಲ್ಯ 44,000 ಕೋಟಿ ರೂ ಇದೆ.
ಇನ್ನು, ಬ್ರಿಗೇಡ್ ಎಂಟರ್ಪ್ರೈಸಸ್ ಎನ್ನುವ ರಿಯಲ್ ಎಸ್ಟೇಟ್ ಕಂಪನಿಯ ಸ್ಥಾಪಕರಾದ ಎಂಆರ್ ಜೈಶಂಕರ್ ಕುಟುಂಬ 19ನೇ ಸ್ಥಾನ ಪಡೆದಿದೆ. ಚಿಕ್ಕಮಗಳೂರು ಮೂಲದ ಎಂಆರ್ ಜೈಶಂಕರ್ ಅವರ ಬ್ರಿಗೇಡ್ ಎಂಟರ್ಪ್ರೈಸಸ್ ಮೌಲ್ಯ 27,200 ಕೋಟಿ ರೂನಷ್ಟಿದೆ.
ಇದನ್ನೂ ಓದಿ: ತಿಂಗಳಿಗೆ 11,000 ಹೂಡಿಕೆ; 9 ಕೋಟಿ ರೂ ಮೊತ್ತಕ್ಕೆ ಎಷ್ಟು ವರ್ಷ ಬೇಕು?
ಟಾಪ್ 20 ಮೊದಲ ತಲೆಮಾರಿನ ಫ್ಯಾಮಿಲಿ ಬ್ಯುಸಿನೆಸ್
- ಗೌತಮ್ ಅದಾನಿ ಮತ್ತು ಕುಟುಂಬ: 14 ಲಕ್ಷ ಕೋಟಿ ರೂ
- ಸೈರಸ್ ಪೂನಾವಾಲ ಮತ್ತು ಕುಟುಂಬ: 2.28 ಲಕ್ಷ ಕೋಟಿ ರೂ
- ಮುರಳಿ ದಿವಿ ಫ್ಯಾಮಿಲಿ (ದಿವಿಸ್ ಲ್ಯಾಬ್): 1.81 ಲಕ್ಷ ಕೋಟಿ ರೂ
- ಎಸ್ ಎನ್ ನುವಾಲ್ ಫ್ಯಾಮಿಲಿ (ಸೋಲಾರ್ ಇಂಡಸ್ಟ್ರೀಸ್): 1.59 ಲಕ್ಷ ಕೋಟಿ ರೂ
- ಪ್ರತಾಪ್ ರೆಡ್ಡಿ ಕುಟುಂಬ (ಅಪೋಲೋ ಆಸ್ಪತ್ರೆಗಳು): 1.04 ಲಕ್ಷ ಕೋಟಿ ರೂ
- ಗ್ರಂಧಿ ಮಲ್ಲಿಕಾರ್ಜುನ ರಾವ್ (ಜಿಎಂಆರ್ ಇಂಡಸ್ಟ್ರೀಸ್): 98,300 ಕೋಟಿ ರೂ
- ಪಿ.ಪಿ. ರೆಡ್ಡಿ (ಮೇಘ ಎಂಜಿನಿಯರಿಂಗ್): 85,300 ಕೋಟಿ ರೂ
- ಹಸ್ಮುಖ್ ಚುಡ್ಗರ್ (ಇಂಟಾಸ್ ಫಾರ್ಮಾ): 58,900 ಕೋಟಿ ರೂ
- ಕಲ್ಯಾಣರಾಮನ್ (ಕಲ್ಯಾಣ್ ಜ್ಯುವೆಲರ್ಸ್): 57,400 ಕೋಟಿ ರೂ
- ಡಾ. ದೇವಿ ಶೆಟ್ಟಿ (ನಾರಾಯಣ ಹೃದಯಾಲಯ): 44,400 ಕೋಟಿ ರೂ
- ಸಂದೀಪ್ ಎಂಜಿನಿಯರ್ (ಆಸ್ಟ್ರಾಲ್ ಪೈಪ್ಸ್): 40,500 ಕೋಟಿ ರೂ
- ಕರ್ಸನ್ಭಾಯ್ ಪಟೇಲ್ (ನಿರ್ಮಾ ಇಂಡಸ್ಟ್ರೀಸ್): 35,300 ಕೋಟಿ ರೂ
- ನಿರಂಜನ್ ಹೀರನಂದಾನಿ (ರಿಯಲ್ ಎಸ್ಟೇಟ್ ಬ್ಯುಸಿನೆಸ್): 33,000 ಕೋಟಿ ರೂ
- ಮಹಾಬಿರ್ ಪ್ರಸಾದ್ ಅಗರ್ವಾಲ್ (ಶ್ಯಾಮ್ ಮೆಟಾಲಿಕ್ಸ್): 32,900 ಕೋಟಿ ರೂ
- ಮನ್ನಾಲಾಲ್, ಪುರುಷೋತ್ತಮ್ ಅಗರ್ವಾಲ್ (ಅಜಂತ ಫಾರ್ಮಾ): 32,200 ಕೋಟಿ ರೂ
- ಆಜಾದ್ ಮೂಪನ್ (ಡಿಎಂ ಹೆಲ್ತ್ಕೇರ್): 30,900 ಕೋಟಿ ರೂ
- ಮೋಫತ್ರಾಜ್ ಮುನೋತ್ (ಕಲ್ಪತರು): 29,600 ಕೋಟಿ ರೂ
- ಹಬಿಲ್ ಖೋರಾಕಿವಾ (ವಾಕಾರ್ಟ್): 27,900 ಕೋಟಿ ರೂ
- ಎಂಆರ್ ಜೈಶಂಕರ್ (ಬ್ರಿಗೇಡ್ ಎಂಟರ್ಪ್ರೈಸಸ್): 27,200 ಕೋಟಿ ರೂ
- ಭಾಸ್ಕರ್ ರಾವ್ ಬೊಲ್ಲಿನೇನಿ (ಕೃಷಿ ಇನ್ಸ್ಟಿಟ್ಯೂಟ್): 27,000 ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




