Pretend to Work: ‘ಡಮ್ಮಿ ಆಫೀಸು’, ‘ಡಮ್ಮಿ ಸಹೋದ್ಯೋಗಿಗಳು’; ಚೀನಾದಲ್ಲಿ ಹೊಸ ಟ್ರೆಂಡ್
Pretend to work becomes trending in China: ಚೀನಾದಲ್ಲಿ ಬರೋಬ್ಬರಿ ಶೇ. 14ರಷ್ಟು ಅಧಿಕ ಮಟ್ಟದಲ್ಲಿ ನಿರುದ್ಯೋಗ ಇದೆ. ಅಲ್ಲೀಗ ‘ಡಮ್ಮಿ ಆಫೀಸ್’ಗಳು ತಲೆ ಎತ್ತುತ್ತುವೆ. ಕೆಲಸ ಇಲ್ಲದ ಯುವಕ, ಯುವತಿಯರು ತಾವು ಕೆಲಸದಲ್ಲಿದ್ದೇವೆಂದು ತೋರ್ಪಪಡಿಸಿಕೊಳ್ಳಲು ಇಲ್ಲಿಗೆ ಹಣ ಕೊಟ್ಟು ಹೋಗುತ್ತಿದ್ದಾರೆ. ರಿಯಲ್ ಆಫೀಸ್ಗಳಲ್ಲಿ ಇರುವಂತೆ ಅಲ್ಲಿ ಮೇಜು, ಕುರ್ಚಿ, ಕಂಪ್ಯೂಟರ್, ಇಂಟರ್ನೆಟ್, ಕಾಫಿ, ಟೀ ಇತ್ಯಾದಿ ಸೌಕರ್ಯ ಇರುತ್ತದೆ.

ನವದೆಹಲಿ, ಆಗಸ್ಟ್ 12: ಕೆಲಸ ಕಳೆದುಕೊಂಡವರು ಏನು ಮಾಡುತ್ತಾರೆ? ಮನೆಯಲ್ಲಿ ಇದ್ದರೆ ಮುಜುಗರ. ಕೆಲಸ ಇಲ್ಲವೆಂದು ಚುಚ್ಚುವ ನೆಂಟರಿಷ್ಟರು. ಮನೆಯಲ್ಲಿ ಖಾಲಿ ಕೂರುವುದೂ ಯಾತನೆಯೇ. ನಿರುದ್ಯೋಗಿಗಳ ಪಾಡು ಆ ದೇವರಿಗೇ ಪ್ರೀತಿ. ಚೀನಾದಲ್ಲಿ (China) ಬರೋಬ್ಬರಿ ಶೇ. 14ರಷ್ಟು ನಿರುದ್ಯೋಗ (unemployment) ಇದೆಯಂತೆ. ಅಲ್ಲಿಯ ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗೆಂದೇ ಡಮ್ಮಿ ಆಫೀಸ್ಗಳು ಸೃಷ್ಟಿಯಾಗುತ್ತಿವೆ. ನಿರುದ್ಯೋಗಿಗಳು ಕೆಲಸ ಮಾಡುತ್ತಿದ್ದೇವೆ ಎಂದು ತೋರ್ಪಡಿಸಿಕೊಳ್ಳಲು ಈ ಡಮ್ಮಿ ಆಫೀಸ್ಗಳಿಗೆ ಹೋಗುತ್ತಿದ್ದಾರೆ. ಬಿಬಿಸಿ ವರದಿ ಪ್ರಕಾರ, ಇಂತಹದ್ದೊಂದು ಟ್ರೆಂಡ್ ಚೀನಾದಲ್ಲಿ ವ್ಯಾಪಕವಾಗುತ್ತಿದೆ.
ಚೀನೀಯರ ಪ್ರಿಟೆಂಡ್ ಟು ವರ್ಕ್ ಟ್ರೆಂಡ್
ಕೆಲಸ ಇಲ್ಲದ ಮತ್ತು ಕೆಲಸ ಕಳೆದುಕೊಂಡ ಚೀನೀಯರು ತಮ್ಮ ಆಪ್ತರಿಗೆ ತಾವು ಕೆಲಸದಲ್ಲಿದ್ದೇವೆಂದು ತೋರ್ಪಡಿಸಲು ‘ಕಚೇರಿ’ಯೊಂದಕ್ಕೆ ಹೋಗುತ್ತಾರೆ. ಆದರೆ ಅದು ಥೇಟ್ ರಿಯಲ್ ಕಚೇರಿಯಂತಿರುವ ಡಮ್ಮಿ ಕಚೇರಿ. ಆ ಸೌಕರ್ಯಕ್ಕೆ ಒಂದಷ್ಟು ಹಣ ಕಟ್ಟಬೇಕು. ರಿಯಲ್ ಕಚೇರಿಗಳಲ್ಲಿ ಇರುವ ಡೆಸ್ಕ್, ಕಂಪ್ಯೂಟರ್, ವೈಫೈ, ಮೀಟಿಂಗ್ ರೂಮ್, ಊಟ, ತಿಂಡಿ, ಡ್ರಿಂಕ್ಸ್ ಇತ್ಯಾದಿ ಸೌಕರ್ಯಗಳು ಇರುತ್ತವೆ.
ಇದನ್ನೂ ಓದಿ: ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು
ನಿರುದ್ಯೋಗಿಗಳಿಗೆ ಅವಮಾನ ತಪ್ಪಿಸುತ್ತವೆ ಈ ಕಚೇರಿಗಳು…
ಬೀಜಿಂಗ್, ಶೆಂಝೆನ್, ಶಾಂಘೈ, ನಾನ್ಜಿಂಗ್, ವುಹಾನ್ ಇತ್ಯಾದಿ ಚೀನೀ ನಗರಗಳಲ್ಲಿ ಇಂಥ ಡಮ್ಮಿ ಕಚೇರಿಗಳು ತಲೆ ಎತ್ತುತ್ತಿವೆ. ಬಿಬಿಸಿ ವರದಿ ಪ್ರಕಾರ 16ರಿಂದ 24ರ ವಯೋಮಾನದಲ್ಲಿರುವ ಯುವಕ ಯುವತಿಯರೇ ಈ ರೀತಿಯ ಡಮ್ಮಿ ಕಚೇರಿಗಳಿಗೆ ಹೋಗಿ ‘ಕೆಲಸ ತೋರ್ಪಡಿಕೆ’ ಮಾಡುತ್ತಿದ್ದಾರೆನ್ನಲಾಗಿದೆ.
ತಾವು ನಿರುದ್ಯೋಗಿಗಳಾಗಿದ್ದೇವೆ ಎಂಬ ಕಹಿ ಸತ್ಯ ಕುಟುಂಬಕ್ಕೆ, ಆಪ್ತರಿಗೆ ಗೊತ್ತಾಗಬಾರದೆಂದು ಅವರು ಇಲ್ಲಿಗೆ ಬರುತ್ತಾರೆ. ಇದು ಅವರಿಗೆ ಆತ್ಮಾಭಿಮಾನದ ರಕ್ಷಣೆಯ ವಿಚಾರವಾಗಿದೆ.
ಇದನ್ನೂ ಓದಿ: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ
ಈ ಡಮ್ಮಿ ಆಫೀಸ್ನಲ್ಲಿ ಹೊಸ ಹೊಸ ಐಡಿಯಾಗಳು..?
ನಿರುದ್ಯೋಗಿಗಳು ಒಂದೆಡೆ ಸೇರಿದರೆ ತರಲೆ, ಕುಡಿತ, ಮೋಜು ಮಸ್ತಿ ಇತ್ಯಾದಿ ಕೆಲಸಕ್ಕೆ ಬಾರದ ಚಟುವಟಿಕೆಗಳಲ್ಲಿ ನಿರತರಾಗಿರುವ ಸಾಧ್ಯತೆ ಹೆಚ್ಚು. ಆದರೆ, ಚೀನಾದಲ್ಲಿನ ಇಂತಹ ಡಮ್ಮಿ ಆಫೀಸುಗಳಲ್ಲಿ ನಿರುದ್ಯೋಗಿಗಳು ಸುಖಾಸುಮ್ಮನೆ ಕಾಲಹರಣ ಮಾಡುವುದಿಲ್ಲ. ತಮ್ಮಂತೆಯೇ ನಿರುದ್ಯೋಗ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೊತೆ ಕೂತು ಹೊಸ ಐಡಿಯಾಗಳಿಗೆ ತಡಕಾಡುತ್ತಾರೆ. ಕೆಲಸಗಳಿಗೆ ಅರ್ಜಿ ಸಲ್ಲಿಸುವುದು ಇತ್ಯಾದಿ ಕಾರ್ಯಗಳಲ್ಲಿ ತಮ್ಮ ತೊಡಗಿಸಿಕೊಳ್ಳುತ್ತಾರಂತೆ. ಅಷ್ಟೇ ಅಲ್ಲ, ಕೆಲಸಕ್ಕೆ ಬೇಕಾಗಬಹುದಾದ ಕೌಶಲ್ಯಗಳನ್ನು ಕಲಿಯಲು ಈ ಡಮ್ಮಿ ಕಚೇರಿಯನ್ನೇ ಬಳಸಿಕೊಳ್ಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




