AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು

Telecom companies may hike mobile tariffs in early 2026: ಮುಂದಿನ ಆರು ತಿಂಗಳೊಳಗೆ ಮೊಬೈಲ್ ಟ್ಯಾರಿಫ್​ಗಳು ಏರಿಕೆ ಆಗಬಹುದು ಎಂದು ಕೆಲ ವರದಿಗಳಲ್ಲಿ ಹೇಳಲಾಗಿದೆ. ಟೆಲಿಕಾಂ ಕಂಪನಿಗಳು 2026ರ ಆರಂಭದಲ್ಲಿ ಶೇ. 10ರಿಂದ 20ರಷ್ಟು ಟ್ಯಾರಿಫ್ ಏರಿಸಬಹುದು. 5ಜಿ ನೆಟ್ವರ್ಕ್​ಗೆ ಇನ್​ಫ್ರಾಸ್ಟ್ರಕ್ಚರ್ ಅಳವಡಿಸಲು ಸಾಕಷ್ಟು ವೆಚ್ಚವಾಗುತ್ತದೆ. ಅದನ್ನು ಭರಿಸಲು ಟ್ಯಾರಿಫ್ ಏರಿಕೆ ಅನಿವಾರ್ಯ ಎನ್ನಲಾಗಿದೆ.

ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು
ಮೊಬೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 12, 2025 | 2:25 PM

Share

ನವದೆಹಲಿ, ಆಗಸ್ಟ್ 12: ಮೊಬೈಲ್ ಬಳಕೆದಾರರ ಜೇಬಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕತ್ತರಿ ಬೀಳಲಿದೆ. ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಪ್ಲಾನ್​ಗಳ ದರ ಏರಿಕೆ ಆಗಬಹುದು ಎನ್ನುವ ಸುದ್ದಿ ಇದೆ. ಮುಂದಿನ ಆರು ತಿಂಗಳೊಳಗೆ ಟೆಲಿಕಾಂ ಕಂಪನಿಗಳು (telecom companies) ದರ ಏರಿಕೆ ಮಾಡಲು ಅಣಿಗೊಂಡಿವೆ. ಕಳೆದ ವರ್ಷ (2024) ಎಲ್ಲಾ ಟೆಲಿಕಾಂ ಕಂಪನಿಗಳು ಶೇ. 15ರಿಂದ 20ರಷ್ಟು ಏರಿಕೆ ಮಾಡಿದ್ದವು. ಈ ಬಾರಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ. ಶೇ. 10-15ರಷ್ಟು ಏರಿಕೆ ಅಗಬಹುದು ಎಂದು ಹೇಳಲಾಗುತ್ತಿದೆ.

‘ಮೊಬೈಲ್ ಟ್ಯಾರಿಫ್ ಏರಿಕೆ ಆಗುವುದು ನಿಶ್ಚಿತವಾಗಿದೆ. ಕಳೆದ ವರ್ಷಕ್ಕಿಂತ ಕಡಿಮೆ ಏರಿಕೆ ಆಗುವ ನಿರೀಕ್ಷೆ ಇದೆ. ಶೇ. 15-20ಕ್ಕಿಂತ ಕಡಿಮೆ ಏರಿಕೆ ಆಗಬಹುದು’ ಎಂದು ಐಸಿಆರ್​ಎ ಸಂಸ್ಥೆಯ ವಿಶ್ಲೇಷಕರೊಬ್ಬರು ಹೇಳಿದ್ದಾಗಿ ಎನ್​ಡಿಟಿವಿ ಪ್ರಾಫಿಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

ಈ ಹಿಂದೆ ಎರಡು ವರ್ಷಕ್ಕೊಮ್ಮೆ ಮೊಬೈಲ್ ಟ್ಯಾರಿಫ್​ಗಳನ್ನು ಪರಿಷ್ಕರಿಸಲಾಗುತ್ತಿತ್ತು. ಈಗ ಹೆಚ್ಚೆಚ್ಚು ಬಾರಿ ದರ ಪರಿಷ್ಕರಣೆ ಆಗಬಹುದು. ಹಾಗೆಯೇ, ಟೆಲಿಕಾಂ ಕಂಪನಿಗಳಿಗೆ ಪ್ರತೀ ಬಳಕೆದಾರರಿಂದ ಸಿಗುವ ಆದಾಯ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆಯೂ ಇದೆ. 2024-25ರಲ್ಲಿ ಪ್ರತೀ ಬಳಕೆದಾರರಿಗೆ ಸರಾಸರಿ ಆದಾಯ 200 ರೂ ಇತ್ತು. 2025-26ರಲ್ಲಿ ಇದು 220 ರೂಗೆ ಏರಿಕೆ ಆಗಬಹುದು ಎನ್ನುವುದು ವಿಶ್ಲೇಷಕರ ಅಂದಾಜು. ಆದರೆ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಇದಕ್ಕಿಂತ ಹೆಚ್ಚಿನ ಆದಾಯ ಇದೆ.

ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

ಈ ಹಣಕಾಸು ವರ್ಷಾಂತ್ಯದೊಳಗೆ ಮೊಬೈಲ್ ಟ್ಯಾರಿಫ್​ಗಳನ್ನು ಪರಿಷ್ಕರಿಸಲಾಗಬಹುದು. 5ಜಿ ಇನ್​ಫ್ರಾಸ್ಟ್ರಕ್ಚರ್ ಅಳವಡಿಕೆಗೆ ಸಾಕಷ್ಟು ಬಂಡವಾಳ ವೆಚ್ಚ ಆಗುವ ಅಗತ್ಯತೆ ಇರುವುದರಿಂದ ಅದನ್ನು ಭರಿಸಲು ಟ್ಯಾರಿಫ್ ಏರಿಕೆಯು ಟೆಲಿಕಾಂ ಕಂಪನಿಗಳಿಗೆ ಅನಿವಾರ್ಯವಾಗಿದೆ.

ಟೆಲಿಕಾಂ ಕಂಪನಿಗಳು 2026ರಲ್ಲಿ ಎಷ್ಟು ಹೆಚ್ಚಳ ಮಾಡಬಹುದು?

  • ರಿಲಾಯನ್ಸ್ ಜಿಯೋ ಆರಂಭಿಕ ಪ್ಲಾನ್: 155 ರೂನಿಂದ 189 ರೂಗೆ ಏರಿಸಬಹುದು (ಶೇ. 22)
  • ರಿಲಾಯನ್ಸ್ ಜಿಯೋ ಹೈಯರ್ ಎಂಡ್ ಪ್ಲಾನ್: 2,999 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ 20)
  • ಏರ್ಟೆಲ್ ಆರಂಭಿಕ ಪ್ಲಾನ್: 179ರೂನಿಂದ 199 ರೂಗೆ ಏರಿಕೆ ಸಾಧ್ಯತೆ (ಶೇ. 11)
  • ಏರ್ಟೆಲ್ ಹೈಯರ್ ಎಂಡ್ ಪ್ಲಾನ್: 2,999 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ. 20)
  • ವೊಡಾಫೋನ್ ಐಡಿಯಾ ಆರಂಭಿಕ ಪ್ಲಾನ್: 179 ರೂನಿಂದ 199 ರೂಗೆ ಏರಿಕೆ ಸಾಧ್ಯತೆ (ಶೇ. 11)
  • ವೊಡಾಫೋನ್ ಐಡಿಯಾ ಹೈಯರ್ ಎಂಡ್ ಪ್ಲಾನ್: ಶೇ. 2,899 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ. 24)

ಇಲ್ಲಿ ಟೆಲಿಕಾಂ ತ್ರಯರಾದ ಜಿಯೋ, ಏರ್​ಟೆಲ್ ಮತ್ತು ವಿಐಗಳ ಹೈಯರ್ ಎಂಡ್ ಟ್ಯಾರಿಫ್​ಗಳು ಸಮವಾಗಿರಲಿವೆ. ರಿಲಾಯನ್ಸ್ ಜಿಯೋ ಕೂಡ ತನ್ನ ದರಗಳನ್ನು ಪ್ರತಿಸ್ಪರ್ಧಿಗಳಿಗೆ ಸಮನಾಗಿ ಏರಿಸುವ ಸಾಧ್ಯತೆ ಇದೆ. ಆದರೆ, ಹೆಚ್ಚು ಬಳಕೆಯಲ್ಲಿರುವ ಎಂಟ್ರಿ ಲೆವೆಲ್ ಪ್ಲಾನ್​ಗಳಲ್ಲಿ ಜಿಯೋ ದರ ಕಡಿಮೆ ಇದೆ.

ಇದನ್ನೂ ಓದಿ: ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್​ಬಿಐ ಕರಡು ನಿಯಮಗಳಿವು…

ಇನ್ನೊಂದೆಡೆ, ಬಿಎಸ್ಸೆನ್ನೆಲ್ ಯಾವ ತಂತ್ರ ಅನುಸರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಜಿಯೋ, ಏರ್ಟೆಲ್, ವಿಐಗಳಿಗಿಂತ ಬಿಎಸ್ಸೆನ್ನೆಲ್​ನ ಎಲ್ಲಾ ಟ್ಯಾರಿಫ್​ಗಳು ಕಡಿಮೆ ಇದೆ. ಆದರೆ, ಅದು ಅದರ 5ಜಿ ಇನ್​ಫ್ರಾಸ್ಟ್ರಕ್ಚರ್ ಇನ್ನೂ ಅಳವಡಿಕೆ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Tue, 12 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ