AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?

Telecom dept plans for mobile number validation platform: ಕೇಂದ್ರ ದೂರಸಂಪರ್ಕ ಇಲಾಖೆಯು ಸೈಬರ್ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಗ್ರಾಹಕರ ಮೊಬೈಲ್ ನಂಬರ್ ಪರಿಶೀಲಿಸಲು ಮೊಬೈಲ್ ನಂಬರ್ ವ್ಯಾಲಿಡೇಶನ್ ಅನ್ನು ಸ್ಥಾಪಿಸಬಹುದು. ಇದು ಕೇಂದ್ರೀಕೃತ ಪ್ಲಾಟ್​​ಫಾರ್ಮ್ ಆಗಿದ್ದು ಬ್ಯಾಂಕ್ ಮತ್ತು ಟೆಲಿಕಾಂ ಆಪರೇಟರ್​​ಗಳು ತಮ್ಮ ಗ್ರಾಹಕರ ಮೊಬೈಲ್ ಐಡಿಗಳನ್ನು ಇಲ್ಲಿ ಪರಿಶೀಲಿಸಬಹುದು.

ಸೈಬರ್ ವಂಚನೆ ತಪ್ಪಿಸಲು ಟೆಲಿಕಾಂ ಇಲಾಖೆ ಹೊಸ ಕ್ರಮ; ಮೊಬೈಲ್ ಐಡಿ ಪರಿಶೀಲನೆಗೆ ಪ್ರತ್ಯೇಕ ಪ್ಲಾಟ್​ಫಾರ್ಮ್?
ಮೊಬೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2025 | 2:24 PM

Share

ನವದೆಹಲಿ, ಜೂನ್ 27: ಸೈಬರ್ ವಂಚನೆಗೆ ಕಡಿವಾಣ ಹಾಕಲು ಟೆಲಿಕಾಂ ಇಲಾಖೆ ಬಿಗಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಅದರಂತೆ, ಗ್ರಾಹಕರ ಮೊಬೈಲ್ ನಂಬರ್ ಅಥವಾ ಗುರುತುಗಳನ್ನು ಪರಿಶೀಲಿಸಬಹುದಾದಂತಹ ಕೇಂದ್ರೀಕೃತ ಪ್ಲಾಟ್​​ಫಾರ್​ಮ್​​ವೊಂದನ್ನು ರಚಿಸಲು ಮುಂದಾಗಿದೆ. ಟೆಲಿಕಾಂ ಆಪರೇಟರ್​​ಗಳು, ಬ್ಯಾಂಕುಗಳು, ಇಕಾಮರ್ಸ್ ಸಂಸ್ಥೆಗಳು ಮೊದಲಾದವು ಈಗ ಈ ಪ್ಲಾಟ್​​ಫಾರ್ಮ್ ಮೂಲಕ ತಮ್ಮ ಗ್ರಾಹಕರ ಗುರುತುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ 2024ರ ದೂರಸಂಪರ್ಕ ಟೆಲಿಕಾಂ ಸೈಬರ್ ಭದ್ರತೆ ನಿಯಮಗಳಿಗೆ (Telecommunications Rules 2024) ತಿದ್ದುಪಡಿ ತರಲು ರೂಪಿಸಲಾದ ಕರಡು ಅಧಿಸೂಚನೆಯಲ್ಲಿ ಇಂಥದ್ದೊಂದು ಪ್ರಸ್ತಾಪ ಮಾಡಲಾಗಿದೆ.

ಇದು ಮೊಬೈಲ್ ನಂಬರ್ ವ್ಯಾಲಿಡೇಶನ್ (ಎಂಎನ್​​ವಿ) ಪ್ಲಾಟ್​​ಫಾರ್ಮ್ ಆಗಿದ್ದು, ಕೇಂದ್ರ ಸರ್ಕಾರವೇ ಖುದ್ದಾಗಿ ಇದನ್ನು ಸ್ಥಾಪಿಸಬಹುದು. ಅಥವಾ ಏಜೆನ್ಸಿಯೊಂದಕ್ಕೆ ಇದರ ಜವಾಬ್ದಾರಿ ವಹಿಸಬಹುದು. ಈ ಪ್ಲಾಟ್​​ಫಾರ್ಮ್ ಅನ್ನು ವೆರಿಫಿಕೇಶನ್​​ಗೆ ಬಳಸಲು ನಿರ್ದಿಷ್ಟ ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Credit Score: ಸಂಬಳ ಹೆಚ್ಚಿದರೆ ಕ್ರೆಡಿಟ್ ಸ್ಕೋರ್ ಹೆಚ್ಚುತ್ತಾ? ಅಂಕ ನಿರ್ಧಾರ ಆಗೋದು ಹೇಗೆ?

ನಕಲಿ ದಾಖಲೆ ಬಳಸಿ 21 ಲಕ್ಷ ಸಿಮ್ ಕನೆಕ್ಷನ್?

ದೂರಸಂಪರ್ಕ ಇಲಾಖೆಯು ಎಐ ಟೆಕ್ನಾಲಜಿ ಬಳಸಿ ಸಿಮ್ ಕನೆಕ್ಷನ್​​ಗಳನ್ನು ಪರಿಶೀಲನೆ ನಡೆಸುತ್ತಿದೆ. ನಕಲಿ ದಾಖಲೆಗಳನ್ನು ಸಲ್ಲಿಸಿ ಪಡೆಯಲಾದ ಕೋಟ್ಯಂತರ ಸಿಮ್​​ಗಳನ್ನು ಡಿಸ್​​ಕನೆಕ್ಟ್ ಮಾಡಲಾಗಿದೆ.

ಐಎಂಇಐ ವಿಚಾರದಲ್ಲಿ ಸರ್ಕಾರದ ಕ್ರಮ

ಭಾರತದ ಟೆಲಿಕಾಂ ನೆಟ್ವರ್ಕ್​ಗಳಲ್ಲಿ ಈಗಾಗಲೇ ಇರುವ ಐಎಂಇಐಗಳನ್ನು ಮತ್ತೊಂದು ಸಾಧನಗಳಿಗೆ ನಿಯೋಜಿಸದಂತೆ ಎಚ್ಚರ ವಹಿಸಿ ಎಂದು ಮೊಬೈಲ್ ತಯಾರಕರನ್ನು ಸರ್ಕಾರ ಕೇಳಲು ನಿರ್ಧರಿಸಿದೆ. ಭಾರತದಲ್ಲಿ ತಯಾರಾಗುವ ಅಥವಾ ಆಮದಾಗುವ ಫೋನ್​​ಗಳ ಐಎಂಇಐ ಸಂಖ್ಯೆ ಪುನಾವರ್ತನೆ ಆಗುವಂತಿಲ್ಲ.

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಇದೇ ವೇಳೆ, ಸರ್ಕಾರವು ಭಾರತದಲ್ಲಿ ಬಳಕೆಯಲ್ಲಿದ್ದ ಐಎಂಇಐಗಳ ಡಾಟಾಬೇಸ್ ಅನ್ನು ನಿರ್ಮಿಸಲಿದೆ. ನಿರ್ಬಂಧದಲ್ಲಿರುವ ಐಎಂಇಐಗಳೂ ಕೂಡ ಈ ಡಾಟಾಬೇಸ್​​ನಲ್ಲಿ ಇರಲಿವೆ. ಈ ಐಎಂಇಐ ಸಂಖ್ಯೆಯು ಹೊಸ ಉಪಕರಣಗಳಿಗೆ ನಿಯೋಜನೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶ. ಮೊಬೈಲ್ ತಯಾರಕರು ಐಎಂಇಐಗಳನ್ನು ನಿಯೋಜಿಸುವ ಮೊದಲು ಈ ಡಾಟಾಬೇಸ್​ ಅನ್ನು ಗಮನಿಸಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!