AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಂಟ್ರಲ್ ಜಿಎಸ್​ಟಿ ಅಧಿಕಾರಿಗಳು ಯುಪಿಐ ಟ್ರಾನ್ಸಾಕ್ಷನ್ ಆಧಾರದಲ್ಲಿ ನೋಟೀಸ್ ನೀಡಿಲ್ಲ: ನಿರ್ಮಲಾ ಸೀತಾರಾಮನ್

Union Minister Nirmala Sitharaman says tax evasion in Karnataka rises 5 times: ಜುಲೈನಲ್ಲಿ ಬೆಂಗಳೂರಿನ ಕೆಲ ಅಂಗಡಿಗಳ ಮೇಲೆ ಟ್ಯಾಕ್ಸ್ ನೋಟೀಸ್ ಕೊಟ್ಟ ಘಟನೆಗೆ ಕೇಂದ್ರ ಸಚಿವೆ ಎನ್ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರೀಯ ಜಿಎಸ್​ಟಿ ಅಧಿಕಾರಿಗಳು ಯುಪಿಐ ಟ್ರಾನ್ಸಾಕ್ಷನ್ ಆಧಾರದ ಮೇಲೆ ಯಾರಿಗೂ ನೋಟೀಸ್ ಕೊಟ್ಟಿಲ್ಲ ಎಂದು ಸಚಿವೆ ಹೇಳಿದ್ದಾರೆ. ಸಂಸತ್​ನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, 2024-25ರಲ್ಲಿ ಕರ್ನಾಟಕದಲ್ಲಿ ಐದು ಪಟ್ಟು ಹೆಚ್ಚು ತೆರಿಗೆ ವಂಚನೆಯಾಗಿದೆ ಎಂದಿದ್ದಾರೆ.

ಸೆಂಟ್ರಲ್ ಜಿಎಸ್​ಟಿ ಅಧಿಕಾರಿಗಳು ಯುಪಿಐ ಟ್ರಾನ್ಸಾಕ್ಷನ್ ಆಧಾರದಲ್ಲಿ ನೋಟೀಸ್ ನೀಡಿಲ್ಲ: ನಿರ್ಮಲಾ ಸೀತಾರಾಮನ್
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2025 | 6:45 PM

Share

ಬೆಂಗಳೂರು, ಆಗಸ್ಟ್ 11: ಕಳೆದ ತಿಂಗಳು ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ಭಾರೀ ಮೊತ್ತದ ಟ್ಯಾಕ್ಸ್ ನೋಟೀಸ್ ಕೊಟ್ಟ ಪ್ರಕರಣಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಇಂದು ಸೋಮವಾರ ಲಿಖಿತ ಉತ್ತರ ನೀಡಿದ ಅವರು, ಯುಪಿಐ ಟ್ರಾನ್ಸಾಕ್ಷನ್ ಆಧಾರದಲ್ಲಿ ಕೇಂದ್ರೀಯ ಜಿಎಸ್​ಟಿ ಅಧಿಕಾರಿಗಳು (Central GST officers) ಯಾರಿಗೂ ನೋಟೀಸ್ ಕೊಟ್ಟಿಲ್ಲ ಎಂದಿದ್ದಾರೆ.

ಅವಲೋಕಿಸದೆ ಕರ್ನಾಟಕ ಹಾಗೂ ಇತರ ಭಾಗಗಳಲ್ಲಿ ವ್ಯಾಪಾರಿಗಳ ಬ್ಯುಸಿನೆಸ್ ಅವಲೋಕಿಸದೆಯೇ ಅವರಿಗೆ ಟ್ಯಾಕ್ಸ್ ನೋಟೀಸ್ ಕೊಡಲಾಗಿತ್ತೇ ಎನ್ನುವ ಪ್ರಶ್ನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲಿಖಿತ ಉತ್ತರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ಹಲವು ಶಾಪ್​ಗಳ ಮೇಲೆ ಟ್ಯಾಕ್ಸ್ ನೋಟೀಸ್ ನೀಡಿದ್ದ ರಾಜ್ಯ ಜಿಎಸ್​​ಟಿ ವಿಭಾಗಗಳಿಂದ. ಕರ್ನಾಟಕದ ಕಮರ್ಷಿಯಲ್ ಟ್ಯಾಕ್ಸ್ ವತಿಯಿಂದ ಈ ನೋಟೀಸ್​ಗಳು ಹೋಗಿದ್ದುವು. ಯುಪಿಐ ಟ್ರಾನ್ಸಾಕ್ಷನ್ ಆಧಾರದ ಮೇಲೆ ಟ್ಯಾಕ್ಸ್ ನೀಡಲಾಗಿತ್ತು ಎನ್ನಲಾಗಿದೆ. ಈ ನೋಟೀಸ್​ನಲ್ಲಿ ಸೆಂಟ್ರಲ್ ಜಿಎಸ್​ಟಿ ಅಧಿಕಾರಿಗಳ ಪಾತ್ರ ಇಲ್ಲ.

ಇದನ್ನೂ ಓದಿ: SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್​ಟಿ ಲೆಕ್ಕಾಚಾರ

ಕರ್ನಾಟಕದಲ್ಲಿ ತೆರಿಗೆ ವಂಚನೆ ಪ್ರಕರಣ ಅಧಿಕ

ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕದಲ್ಲಿ ತೆರಿಗೆ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದ ಪ್ರಕಾರ 2024-25ರಲ್ಲಿ ಕರ್ನಾಟಕದಲ್ಲಿ 39,577 ಕೋಟಿ ರೂ ಮೊತ್ತದಷ್ಟು ತೆರಿಗೆ ವಂಚನೆ ಆಗಿರುವುದನ್ನು ಜಿಎಸ್​ಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರಂತೆ. ಹಿಂದಿನ ವರ್ಷಕ್ಕೆ (2023-24) ಹೋಲಿಸಿದರೆ ತೆರಿಗೆ ವಂಚೆಯಾದ ಮೊತ್ತವು ಐದು ಪಟ್ಟು ಹೆಚ್ಚಾಗಿದೆ.

2024-25ರಲ್ಲಿ ತೆರಿಗೆ ವಂಚನೆಯಾಗಿರುವ 1,254 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ತೆರಿಗೆ ವಂಚನೆಯಾದ 39,577 ಕೋಟಿ ರೂ ಪೈಕಿ 1,623 ಕೋಟಿ ರೂ ಮೊತ್ತವನ್ನು ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

ಹಿಂದಿನ ವರ್ಷದಲ್ಲಿ 925 ತೆರಿಗೆ ವಂಚನೆ ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಒಟ್ಟು ವಂಚನೆಯಾಗಿದ್ದು 7,202 ಕೋಟಿ ರೂ. ಇದರಲ್ಲಿ 1,197 ಕೋಟಿ ರೂ ಹಣವನ್ನು ವಸೂಲಿ ಮಾಡಲಾಗಿತ್ತು. 2022-23ರಲ್ಲಿ 959 ಪ್ರಕರಣಗಳಿಂದ 25,839 ಕೋಟಿ ರೂ ಮೊತ್ತದ ತೆರಿಗೆ ವಂಚನೆ ನಡೆದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್