Cash Transactions: ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಿಥ್​ಡ್ರಾ ಅಥವಾ ಜಮೆಗೆ ಪ್ಯಾನ್- ಆಧಾರ್ ಕಡ್ಡಾಯ

ಒಂದು ಹಣಕಾಸು ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರವನ್ನು ಮಾಡಿದಲ್ಲಿ ಕಡ್ಡಾಯವಾಗಿ ಪ್ಯಾನ್ ಅಥವಾ ಆಧಾರ್ ಒದಗಿಸಬೇಕಾಗುತ್ತದೆ.

Cash Transactions: ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಿಥ್​ಡ್ರಾ ಅಥವಾ ಜಮೆಗೆ ಪ್ಯಾನ್- ಆಧಾರ್ ಕಡ್ಡಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: May 13, 2022 | 1:39 PM

ಒಂದು ಹಣಕಾಸು ವರ್ಷದಲ್ಲಿ (ಏಪ್ರಿಲ್​ನಿಂದ ಮಾರ್ಚ್​ ತನಕ) 20 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ವಿಥ್​ಡ್ರಾ ಅಥವಾ ಜಮೆ ಮಾಡಬೇಕು ಅಂದರೆ ಪರ್ಮನೆಂಟ್ ಅಕೌಂಟ್ ನಂಬರ್ (PAN) ಅಥವಾ ಆಧಾರ್ ಒದಗಿಸಲೇಬೇಕು. ಈ ನಿಯಮ ಶೀಘ್ರದಲ್ಲೇ ಜಾರಿ ಆಗುತ್ತದೆ. ಈ ನಿಯಮವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು ಅಂದರೆ, ಇದು ನಗದು ವಹಿವಾಟಿಗೆ ಮಾತ್ರ ಅನ್ವಯ ಆಗುವಂಥದ್ದು. ಬ್ಯಾಂಕ್​ಗಳು, ಕೋ-ಆಪರೇಟಿವ್​ ಬ್ಯಾಂಕ್​ಗಳು, ಅಂಚೆ ಕಚೇರಿಗಳಲ್ಲಿ ಮಾಡುವಂಥ 20 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಜಮೆಯ ಸಂದರ್ಭದಲ್ಲಿ ಪ್ಯಾನ್ ಅಥವಾ ಆಧಾರ್ ಒದಗಿಸಬೇಕಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಮೇ 10ನೇ ತಾರೀಕಿನಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. ಅಷ್ಟೇ ಅಲ್ಲ, ಬ್ಯಾಂಕ್​ನಲ್ಲೋ ಅಂಚೆ ಕಚೇರಿಯಲ್ಲೋ ಚಾಲ್ತಿ ಖಾತೆ ಅಥವಾ ಕ್ಯಾಶ್ ಕ್ರೆಡಿಟ್ ಖಾತೆ ತೆರೆಯಬೇಕು ಅಂದರೆ ಅದಕ್ಕೂ ಪ್ಯಾನ್ ಅಥವಾ ಆಧಾರ್ ನಮೂದಿಸುವುದು ಕಡ್ಡಾಯ ಆಗಲಿದೆ.

ನಗದು ವಹಿವಾಟಿಗೆ ತಡೆ ಹಾಕುವ ಮತ್ತೊಂದು ಪ್ರಯತ್ನ

ಈ ಸುತ್ತೋಲೆಯ ಮುಖ್ಯ ಉದ್ದೇಶವೇ ನಗದು ಮಾರ್ಗದ ಮೂಲಕ ನಡೆಸುವ ಲೆಕ್ಕಕ್ಕೆ ಹಣಕಾಸು ವಹಿವಾಟಿನ ಮೇಲೆ ನಿಗಾ ಇಡುವುದಾಗಿದೆ. ತೆರಿಗೆ ಪಾವತಿದಾರರು (ವೈಯಕ್ತಿಕ, ಕಾರ್ಪೊರೇಟ್, ಹಿಂದೂ ಅವಿಭಕ್ತ ಕುಟುಂಬ ಅಥವಾ ಸೊಸೈಟಿ) ಒಂದು ಹಣಕಾಸು ವರ್ಷದಲ್ಲಿ ನಿರ್ದಿಷ್ಟ ನಗದು ಮಿತಿಗಿಂತ ಹೆಚ್ಚಿನ ನಗದು ಜಮೆ ಅಥವಾ ವಿಥ್​ಡ್ರಾ ಮಾಡಿದಲ್ಲಿ ಬ್ಯಾಂಕಿಂಗ್ ಸಂಸ್ಥೆ ಅಥವಾ ಯಾವುದೇ ವರದಿ ಮಾಡುವ ವ್ಯಕ್ತಿ ಆ ವಹಿವಾಟಿನ ಬಗ್ಗೆ ಆದಾಯ ತೆರಿಗ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತೆರಿಗೆ ತಜ್ಞರು ಹೇಳುತ್ತಾರೆ. ಇದರ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆಯು ವಹಿವಾಟನ್ನು ಹಿಂದಿನ ಐಟಿ ರಿಟರ್ನ್ ಜತೆಗೆ ತಾಳೆ ಮಾಡುತ್ತದೆ. ಒಂದು ವೇಳೆ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ, ಹೆಚ್ಚಿನ ಮೌಲ್ಯದ ವಹಿವಾಟಿಗೆ ಸಂಬಂಧಿಸಿದಂತೆ ನೋಟಿಸ್​ಗಳನ್ನು ಕಳುಹಿಸಿ, ವಿವರಣೆ ಕೇಳುತ್ತದೆ ಮತ್ತು ನಗದು ಬಂದಂಥ ಮೂಲವನ್ನು ತಿಳಿಸುವಂತೆ ಆದಾಯ ತೆರಿಗೆ ಪಾವತಿದಾರರನ್ನು ಕೇಳಲಾಗುತ್ತದೆ.

ಈ ನಿಯಮ ಮಾಡುತ್ತಿರುವ ಉದ್ದೇಶವೇ ಕಪ್ಪು ಹಣದ ಸಂಗ್ರಹವನ್ನು ತಡೆಯುವುದಾಗಿದೆ ಮತ್ತು ಆರ್ಥಿಕತೆಯಲ್ಲಿ ನಗದು ಚಲಾವಣೆಯ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ. ಇದರ ಜತೆಗೆ ಬ್ಯಾಂಕ್​ ಖಾತೆಗಳಲ್ಲಿ ನಡೆಯುವ ಅನುಮಾನಾಸ್ಪದ ವಹಿವಾಟುಗಳ ಮೇಲೂ ಕಣ್ಣಿಡಲು ಸಾಧ್ಯವಾಗುತ್ತದೆ. ಈ ಹಿಂದೆ ಪ್ಯಾನ್ ಇರಲಿಲ್ಲವಾದ್ದರಿಂದ ವಹಿವಾಟುಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ ತಜ್ಞರು. ಇನ್ನು ಈ ನಿಯಮದಿಂದ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಸಹಾಯ ಕೂಡ ಆಗಲಿದೆ. ಒಂದು ವೇಳೆ ಪ್ಯಾನ್ ಅಥವಾ ಆಧಾರ್ ಇಲ್ಲ ಎಂದಾದರೆ ಠೇವಣಿದಾರರು ವಹಿವಾಟು ನಡೆಸಬೇಕು ಎಂದಾದಲ್ಲಿ ಕನಿಷ್ಠ ಒಂದು ವಾರ ಮುಂಚೆ ಇವುಗಳಿಗಾಗಿ ಅಪ್ಲೈ ಮಾಡಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ.

ತೆರಿಗೆದಾರರು ಮತ್ತು ಬ್ಯಾಂಕ್ ಎರಡೂ ಕಡೆ ಜವಾಬ್ದಾರಿ

ನಿಯಮವನ್ನು ಅನುಸರಿಸಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯು ಖಾತೆದಾರರು ಮತ್ತು ಬ್ಯಾಂಕ್​ಗಳು ಹಾಗೂ ಅಂಚೆ ಕಚೇರಿಗಳಂತಹ ಸಂಸ್ಥೆಗಳ ಮೇಲೆ ಅವಲಂಬಿತವಾಗಿದೆ ಎಂದು ಸಿಬಿಡಿಟಿ ಅಧಿಸೂಚನೆಯು ಸ್ಪಷ್ಟಪಡಿಸುತ್ತದೆ. ಇದರಿಂದಾಗಿ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳ ಕೆಲಸದ ಹೊರೆ ಹೆಚ್ಚುತ್ತದೆ. “ಬ್ಯಾಂಕ್‌ಗಳು ಮತ್ತು ಪೋಸ್ಟ್-ಆಫೀಸ್ ಠೇವಣಿದಾರರ ಪ್ಯಾನ್ ಮತ್ತು ಆಧಾರ್ ಅನ್ನು ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡಂತೆ ನಿಗದಿತ ಸ್ವರೂಪದಲ್ಲಿ ಆದಾಯ ತೆರಿಗೆ (ಸಿಸ್ಟಮ್ಸ್) ಪ್ರಧಾನ ಮಹಾನಿರ್ದೇಶಕರಿಗೆ ವರದಿ ಮಾಡಬೇಕಾಗುತ್ತದೆ,” ಎಂದು ಸಂಬಂಧಪಟ್ಟವರು ಹೇಳುತ್ತಾರೆ.

ಹಲವಾರು ವಹಿವಾಟುಗಳಿಗೆ ಈಗಾಗಲೇ ಪ್ಯಾನ್ ಕಡ್ಡಾಯ

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಥವಾ ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ಪ್ರಾರಂಭಿಸಲು ಪ್ಯಾನ್ (PAN) ಅನ್ನು ಉಲ್ಲೇಖಿಸುವುದು ಕಡ್ಡಾಯ. ಅಲ್ಲದೆ, ಇತರ ಹಲವಾರು ಹಣಕಾಸು ವಹಿವಾಟುಗಳಲ್ಲಿ ಪ್ಯಾನ್ ಅನ್ನು ಉಲ್ಲೇಖಿಸುವುದು ಸಹ ಕಡ್ಡಾಯವಾಗಿದೆ. ಉದಾಹರಣೆಗೆ, ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆಯನ್ನು ತೆರೆಯಲು ಅಥವಾ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ಗಾಗಿ ಪ್ಯಾನ್ ಅಗತ್ಯವಿದೆ. ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಅಥವಾ ಬಾಂಡ್‌ಗಳಲ್ಲಿ ರೂ. 50,000 ಕ್ಕಿಂತ ಹೆಚ್ಚು ಹೂಡಿಕೆ ಮಾಡುವಾಗಲೂ ಪ್ಯಾನ್ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಅದೇ ರೀತಿ, ವಿಮಾದಾರರಿಗೆ ಜೀವ ವಿಮಾ ಪ್ರೀಮಿಯಂನಂತೆ ಹಣಕಾಸು ವರ್ಷದಲ್ಲಿ ರೂ. 50,000 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿಸಲು ಸಹ ಪ್ಯಾನ್ ಅಗತ್ಯವಿದೆ.

ಯಾವುದೇ ಒಂದು ದಿನದ ಅವಧಿಯಲ್ಲಿ ರೂ. 50,000 ಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ರೂ. 50,000ಕ್ಕಿಂತ ಹೆಚ್ಚಿನ ಮೊತ್ತದ ಟರ್ಮ್ ಡೆಪಾಸಿಟ್ (ಫಿಕ್ಸೆಡ್ ಡೆಪಾಸಿಟ್) ಅಥವಾ ಬ್ಯಾಂಕಿಂಗ್ ಕಂಪೆನಿ ಅಥವಾ ಸಹೋದ್ಯೋಗಿಯೊಂದಿಗೆ ಹಣಕಾಸು ವರ್ಷದಲ್ಲಿ ರೂ. 5 ಲಕ್ಷಕ್ಕಿಂತ ಹೆಚ್ಚು ಮೊತ್ತವನ್ನು ಕೋ ಆಪರೇಟಿವ್ ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿಂಗೇತರ ಹಣಕಾಸು ಕಂಪೆನಿಯಲ್ಲಿ ಜಮೆ ಮಾಡಿದರೂ ಮಾಹಿತಿ ಒದಗಿಸಬೇಕಾಗುತ್ತದೆ. ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಮೋಟಾರು ವಾಹನ ಅಥವಾ ವಾಹನವನ್ನು ಮಾರಾಟ ಮಾಡುವ ಅಥವಾ ಖರೀದಿಸುವ ಸಮಯದಲ್ಲಿ ಪ್ಯಾನ್ ಅನ್ನು ನಮೂದಿಸಬೇಕಾಗುತ್ತದೆ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗೆ 50,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ನಗದು ಪಾವತಿ ಅಥವಾ ಯಾವುದೇ ದೇಶಕ್ಕೆ ಪ್ರಯಾಣಿಸಲು ಅಥವಾ ಯಾವುದೇ ಸಮಯದಲ್ಲಿ, ಯಾವುದೇ ವಿದೇಶಿ ಕರೆನ್ಸಿಯನ್ನು ಖರೀದಿಸಲು ಪಾವತಿಸುವಾಗ ಅದನ್ನು ಉಲ್ಲೇಖಿಸಬೇಕು.

ಈ ಕೆಲವು ವಹಿವಾಟುಗಳಲ್ಲಿ ಪ್ಯಾನ್ ಲಭ್ಯವಿಲ್ಲದಿದ್ದರೆ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸಬಹುದು. ಆದರೆ ಕಡ್ಡಾಯವಾಗಿ ಎಲ್ಲೆಲ್ಲಿ ಪ್ಯಾನ್ ಅಥವಾ ಆಧಾರ್ ಅನ್ನು ನಮೂದಿಸದಿರುವುದು ಅಥವಾ ಒದಗಿಸದಿರುವುದು ನೋಟಿಸ್ ಮತ್ತು ದಂಡಕ್ಕೆ ಕಾರಣವಾಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Income Tax: ಹೆಚ್ಚಿನ ನಗದು ಒಳಗೊಂಡ ಈ 5 ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ, ಗಮನಿಸಿ

ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ