ಭಾರತವು ತನ್ನ ಅತಿದೊಡ್ಡ ಐಪಿಒ ಆದ ಎಲ್ಐಸಿ ಐಪಿಒದ (LIC IPO) ಮೇಲ್ಸ್ತರ ದರದ ಬ್ಯಾಂಡ್ ಲೆಕ್ಕಾಚಾರದಲ್ಲಿ 205.6 ಶತಕೋಟಿ ರೂಪಾಯಿಗಳನ್ನು (2.7 ಶತಕೋಟಿ ಯುಎಸ್ಡಿ) ಸಂಗ್ರಹಿಸಿದೆ. ಸ್ಥಳೀಯ ಹೂಡಿಕೆದಾರರಿಂದ ಬಲವಾದ ಬೇಡಿಕೆ ಮತ್ತು ವಿದೇಶಿ ಫಂಡ್ಗಳಿಂದ ಕೊನೆ ನಿಮಿಷದ ಆಸಕ್ತಿ ನಂತರ ಈ ಮೊತ್ತದ ಸಂಗ್ರಹ ಆಗಿದೆ. ಭಾರತೀಯ ಜೀವ ವಿಮಾ ನಿಗಮವು ಒಂದು ಷೇರನ್ನು 949 ರೂಪಾಯಿಗಳಿಗೆ ನೀಡಲಿದೆ ಎಂದು ಸರ್ಕಾರಿ ಸಂಸ್ಥೆಯು ಶುಕ್ರವಾರ ಸಲ್ಲಿಸಿದ ಪ್ರಾಸ್ಪೆಕ್ಟಸ್‌ನಲ್ಲಿ ತಿಳಿಸಿದೆ. ವಿನಿಮಯ ಕೇಂದ್ರದಲ್ಲಿ ಮೇ 17ರಿಂದ ವಹಿವಾಟು ಪ್ರಾರಂಭವಾಗಲಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರ ಸಬ್ಸ್ಕ್ರಿಪ್ಷನ್ ಮುಕ್ತಾಯದ ಕೊನೆಯ ಕ್ಷಣದಲ್ಲಿ ಮಾರಾಟಕ್ಕಾಗಿ ತಮ್ಮ ಬಿಡ್‌ಗಳನ್ನು ಹೆಚ್ಚಿಸಿದರು. ಕರೆನ್ಸಿ ಅಪಾಯಗಳು ಮತ್ತು ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳ ಆಚೆಗೆ ಈ ಐಪಿಒ ದೂರವಿಟ್ಟರು. ಗಲ್ಫ್ ತೈಲ ದೈತ್ಯ ಕಂಪೆನಿಯಾದ ಸೌದಿ ಅರೇಬಿಯನ್ ಆಯಿಲ್ ಕಂಪೆನಿ 2019ರಲ್ಲಿ 29.4 ಬಿಲಿಯನ್ ಯುಎಸ್ಡಿ ಲಿಸ್ಟಿಂಗ್ ಅನ್ನು ಉಲ್ಲೇಖಿಸಿ, ಇದನ್ನು ಭಾರತದ “ಅರಾಮ್ಕೊ ಕ್ಷಣ” ಎಂದು ಕರೆಯಲಾಗಿದೆ. ಅದು ವಿಶ್ವದ ಅತಿದೊಡ್ಡ ಐಪಿಒ ಆಗಿತ್ತು. ಎಲ್ಐಸಿಯ ಐಪಿಒ ಅರಾಮ್ಕೋ ಐಪಿಒ ಅನ್ನು ಪ್ರಮಾಣದಲ್ಲಿ ಮಾತ್ರವಲ್ಲದೆ ಅದರ ಅವಲಂಬನೆಯಲ್ಲಿಯೂ ಹೋಲುತ್ತದೆ.
ಕೆಲವು ವಿದೇಶಿ ಖರೀದಿದಾರರು ಅದನ್ನು ತುಂಬಾ ದುಬಾರಿ ಎಂದು ಪರಿಗಣಿಸಿದರು. ಆ ನಂತರ ದೇಶೀಯ ಹೂಡಿಕೆದಾರರ ಮೇಲೆ ಭರವಸೆ ಇಡಲಾಯಿತು. ರೀಟೇಲ್ ಹೂಡಿಕೆದಾರರಿಗೆ ಆಫರ್ ಬೆಲೆಯಲ್ಲಿ 45 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗಿದ್ದರೆ, ಪಾಲಿಸಿದಾರರು 60 ರೂಪಾಯಿಗಳ ರಿಯಾಯಿತಿಯನ್ನು ಪಡೆದರು.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: LIC IPO Allotment Status: ಎಲ್ಐಸಿ ಐಪಿಒ ಹಂಚಿಕೆ ಮೇ 12ಕ್ಕೆ ಸಾಧ್ಯತೆ; ಆನ್ಲೈನ್ನಲ್ಲಿ ಸ್ಥಿತಿ ತಿಳಿಯಲು ಹೀಗೆ ಮಾಡಿ