Elon Musk: ಟ್ವಿಟ್ಟರ್ ಖರೀದಿಗೆ ತಾತ್ಕಾಲಿಕ ತಡೆ; ಬೇಡವೇ ಬೇಡ ಅಂದರೆ ಎಲಾನ್​ ಮಸ್ಕ್​ಗೆ 100 ಕೋಟಿ ಯುಎಸ್​ಡಿ ಬರೆ

Elon Musk On Twitter Purchase: ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ ಒಪ್ಪಂದಕ್ಕೆ ತಾತ್ಕಾಲಿಕವಾಗಿ ತಡೆ.

Elon Musk: ಟ್ವಿಟ್ಟರ್ ಖರೀದಿಗೆ ತಾತ್ಕಾಲಿಕ ತಡೆ; ಬೇಡವೇ ಬೇಡ ಅಂದರೆ ಎಲಾನ್​ ಮಸ್ಕ್​ಗೆ 100 ಕೋಟಿ ಯುಎಸ್​ಡಿ ಬರೆ
ಎಲಾನ್ ಮಸ್ಕ್Image Credit source: IA
Follow us
TV9 Web
| Updated By: Srinivas Mata

Updated on:May 13, 2022 | 5:19 PM

4400 ಕೋಟಿ ಅಮೆರಿಕನ್ ಡಾಲರ್​ ಮೌಲ್ಯದ ಟ್ವಿಟ್ಟರ್ (Twitter) ಖರೀದಿ ವ್ಯವಹಾರಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ. ಇದನ್ನು ಸ್ವತಃ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ. ಇದು ಅವರೇ ಅ್ಈಟ್​ ಮಾಡಿರುವಂತೆ ತಾತ್ಕಾಲಿಕವಾದ ತಡೆ. ಟ್ವಿಟ್ಟರ್​ ಇಂಕ್​ನಿಂದ ಇನ್ನೊಂದಿಷ್ಟು ಮಾಹಿತಿ ಬಾಕಿ ಇದೆ ಹಾಗೂ ನಕಲಿ ಖಾತೆಗಳ ಬಗ್ಗೆ ಕೂಡ ವಿವರ ನೀಡಬೇಕಾಗಿದೆ. ಆ ಹಿನ್ನೆಲೆಯಿಂದ ವ್ಯವಹಾರಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ತಮ್ಮ ಟ್ವೀಟ್​ನಲ್ಲಿ ಮಸ್ಕ್, ಟ್ವಿಟ್ಟರ್ ವ್ಯವಹಾರಕ್ಕೆ ತಾತ್ಕಾಲಿಕವಾಗಿ ತಡೆ ಹಾಕಲಾಗಿದೆ. ಸ್ಪಾಮ್/ನಕಲಿ ಖಾತೆಗಳು ಶೇ 5ಕ್ಕಿಂತ ಕಡಿಮೆ ಇರುವುದಕ್ಕೆ ಸಂಬಂಧಿಸಿದ ಲೆಕ್ಕಾಚಾರಕ್ಕೆ ಬಾಕಿ ಇರುವ ಮಾಹಿತಿ ಕೈ ಸೇರಬೇಕಿದೆ ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ಫೈಲಿಂಗ್​ನಲ್ಲಿ, ಮೊದಲ ತ್ರೈಮಾಸಿಕದ ಲೆಕ್ಕಾಚಾರದ ಪ್ರಕಾರ ನಿತ್ಯ ಹಣ ಗಳಿಸಬಹುದಾದ ಸಕ್ರಿಯ ಬಳಕೆದಾರರ ಪೈಕಿ ಶೇ 5ಕ್ಕಿಂತ ಕಡಿಮೆ ನಕಲಿ ಅಥವಾ ಸ್ಪಾಮ್ ಖಾತೆಗಳು ಎಂದು ಟ್ವಿಟ್ಟರ್ ಹೇಳಿತ್ತು.

ಮಸ್ಕ್ ಜತೆಗೆ ವ್ಯವಹಾರ ಅಂತಿಮ ಆಗುವ ತನಕ ಹಲವು ಅಪಾಯಗಳನ್ನು ಎದುರಿಸಿರುವುದಾಗಿ ಟ್ವಿಟ್ಟರ್ ತನ್ನ ಫೈಲಿಂಗ್​ನಲ್ಲಿ ತಿಳಿಸಿದೆ. ಟ್ವಿಟ್ಟರ್​ ಮೇಲೆ ಜಾಹೀರಾತುದಾರರು ಖರ್ಚು ಮಾಡುತ್ತಾರೆಯೇ, ಭವಿಷ್ಯದ ಯೋಜನೆ ಹಾಗೂ ಕಾರ್ಯತಂತ್ರ ಇಂಥ ವಿಚಾರಗಳಲ್ಲಿ ಚಿಂತೆ ಇದ್ದುದಾಗಿ ಹೇಳಿಕೊಂಡಿದೆ. ಇನ್ನು ಉದ್ಯೋಗಿಗಳಿಗೆ ಟ್ವಿಟ್ಟರ್ ಸಿಇಒ ಪರಾಗ್ ಕಳಿಸಿರುವ ಸುತ್ತೋಲೆಯಲ್ಲಿ, ಕಂಪೆನಿಯ ಇಬ್ಬರು ಹಿರಿಯ ನಾಯಕತ್ವ ಸ್ಥಾನದಲ್ಲಿದ್ದವರನ್ನು ಕೆಲಸದಿಂದ ತೆಗೆದಿರುವುದಾಗಿ ಹೇಳಿದ್ದಾರೆ. ಅವರು ಗ್ರಾಹಕ ಮತ್ತು ಆದಾಯವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ. ತಾನು ಖರೀದಿ ಮಾಡುವುದಾಗಿ ಮಸ್ಕ್ ಘೋಷಣೆ ಮಾಡಿದ ನಂತರ ಟ್ವಿಟ್ಟರ್​ನಲ್ಲಿ ಕಾಣಿಸಿಕೊಂಡ ಅತಿ ದೊಡ್ಡ ತಲ್ಲಣ ಇದು.

ಟ್ವಿಟ್ಟರ್​ನಿಂದ 2023ರ ಕೊನೆಯ ಹೊತ್ತಿಗೆ 750 ಕೋಟಿ ಯುಎಸ್​ಟಿ ವಾರ್ಷಿಕ ಆದಾಯ ಮತ್ತು ಪ್ರತಿ ನಿತ್ಯ 31.5 ಕೋಟಿ ಬಳಕೆದಾರರನ್ನು ಪಡೆಯುವ ಗುರಿ ಇತ್ತು. ಆದರೆ ಈಚಿನ ಗಳಿಕೆ ವರದಿಯಲ್ಲಿ ಆ ಗುರಿಯನ್ನು ಹಿಂಪಡೆಯಲಾಗಿದೆ. ಇನ್ನು ಅಗರ್​ವಾರ್​ ಮಾತನಾಡಿ, ಟ್ವಿಟ್ಟರ್​ನಿಂದ ಬಹುತೇಕ ನೇಮಕಾತಿ ನಿಲ್ಲಿಸಲಾಗುವುದು ಮತ್ತು ಈಗಿನ ಉದ್ಯೋಗಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಈ ಪೈಕಿ ಯಾವುದನ್ನು ಹಿಂಪಡೆಯಬಹುದು ಎಂದು ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಅಂದಹಾಗೆ, ಟ್ವಿಟ್ಟರ್ ಖರೀದಿ ವ್ಯವಹಾರದಿಂದ ಎಲಾನ್ ಮಸ್ಕ್ ಹಿಂದಕ್ಕೆ ಸರಿದರೆ ರದ್ದತಿ ಶುಲ್ಕವಾಗಿ ಟ್ವಿಟ್ಟರ್​ ಕಂಪೆನಿಗೆ 100 ಕೋಟಿ ಅಮೆರಿಕನ್ ಡಾಲರ್ ಕಟ್ಟಿ ಕೊಡಬೇಕಾಗುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ

Published On - 4:18 pm, Fri, 13 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ