Investment Ideas: ಮಕ್ಕಳ ವಿದೇಶಿ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಕೂಡಿಸುವುದು ಹೇಗೆ? ಉಳಿತಾಯ, ಹೂಡಿಕೆ ಆಯ್ಕೆ ಹೀಗಿರಲಿ

ಮಕ್ಕಳನ್ನು ವಿದೇಶಗಳಲ್ಲಿ ಓದಿಸಬೇಕು ಎಂಬ ಬಯಕೆಯನ್ನು ಹೊಂದಿದ್ದರೆ ಈಗಲೇ ಹಣಕಾಸಿನ ಯೋಜನೆಯನ್ನು ರೂಪಿಸಿಕೊಂಡು ಭವಿಷ್ಯದಲ್ಲಿ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸಿ ನಿಮ್ಮ ಕನಸನ್ನು ಈಡೇರಿಸಿಕೊಳ್ಳಿ. ಇಲ್ಲದಿದ್ದರೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣಕಾಸಿನ ಸಮಸ್ಯೆ ಎದುರಾಗಬಹುದು. ಹಾಗಿದ್ದರೆ ಓದಿಗಾಗಿ ಹಣವನ್ನು ಕ್ರೂಡೀಕರಣ ಮಾಡವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

Investment Ideas: ಮಕ್ಕಳ ವಿದೇಶಿ ಉನ್ನತ ವಿದ್ಯಾಭ್ಯಾಸಕ್ಕೆ ಹಣ ಕೂಡಿಸುವುದು ಹೇಗೆ? ಉಳಿತಾಯ, ಹೂಡಿಕೆ ಆಯ್ಕೆ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: May 13, 2022 | 3:46 PM

ಮಕ್ಕಳನ್ನು ವಿದೇಶಗಳಲ್ಲಿ ಓದಿಸಬೇಕು ಎಂಬ ಬಯಕೆ ಹಲವರಿಗೆ ಇರುತ್ತದೆ. ಮುಖ್ಯವಾಗಿ ವಿವಿಧ ದೇಶಗಳಲ್ಲಿ ಕಾಲೇಜು ಮತ್ತಿತರ ಶುಲ್ಕಗಳು ಕಡಿಮೆ. ಜತೆಗೆ ಗುಣಮಟ್ಟದ ದೃಷ್ಟಿಯಿಂದ ಬಹಳ ಉತ್ತಮವಾದ ಶಿಕ್ಷಣ ಸಹ ದೊರೆಯುತ್ತದೆ. ಕಾಲೇಜು ಶುಲ್ಕವೇನೋ ಕೆಲ ಬಾರಿ ಕಡಿಮೆ ಆಗುತ್ತದೆ. ಆದರೆ ಅಲ್ಲಿನ ವಾಸ್ತವ್ಯ, ಊಟ-ತಿಂಡಿ ಮತ್ತಿತರ ಖರ್ಚಿಗಾದರೂ ಹಣದ ವ್ಯವಸ್ಥೆ ಆಗಲೇಬೇಕು. ಇನ್ನು ಆಯಾ ದೇಶ ಹಾಗೂ ಪ್ರದೇಶದ ಆಧಾರದ ಮೇಲೆ, ಜೀವನ ವೆಚ್ಚದ (cost of living) ಮೇಲೆ ಇದು ಬದಲಾಗುತ್ತದೆ. ಆದ್ದರಿಂದಾಗಿ ನೀವೇನಾದರೂ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸುವ ಇರಾದೆಯಲ್ಲಿದ್ದರೆ ಈಗಲೇ ಹಣಕಾಸಿನ ಯೋಜನೆಯನ್ನು ರೂಪಿಸಿ, ಭವಿಷ್ಯದಲ್ಲಿ ಮಕ್ಕಳನ್ನು ನೀವು ಇಚ್ಛೆ ಪಟ್ಟಲ್ಲಿ ಓದಿಸಿ ಕನಸನ್ನು ಈಡೇರಿಸಿಕೊಳ್ಳಿ. ವಿದೇಶದಲ್ಲಿ ಶಿಕ್ಷಣ ಪಡೆಯಲು ಹಣಕಾಸಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಿ. ಈ ಲೇಖನದಲ್ಲಿ ನಿಮಗೆ ಓದಿಗಾಗಿ ಹಣವನ್ನು ಕ್ರೋಡೀಕರಿಸುವುದು ಹೇಗೆ ಎಂಬುದಕ್ಕೆ ಆಯ್ಕೆಯನ್ನು ತೆರೆದಿಡಲಾಗುತ್ತದೆ.

ಮಕ್ಕಳು ಇನ್ನೂ ಆರಂಭದ ವಿದ್ಯಾಭ್ಯಾಸ ಪಡೆಯುವಾಗಲೇ ಭವಿಷ್ಯದಲ್ಲಿ ವಿದೇಶಕ್ಕೆ ತೆರಳಿ ಉನ್ನತ ವಿದ್ಯಾಭ್ಯಾಸ ಮಾಡುವುದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಮಗನಿಗೋ ಅಥವಾ ಮಗಳಿಗೋ ಈಗ 9 ವರ್ಷ ಆಗಿದ್ದರೆ ಮುಂದಿನ 15 ವರ್ಷಗಳಲ್ಲಿ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ(Foreign) ಕಳುಹಿಸುವ ಸಲುವಾಗಿ ಅವತ್ತಿಗೆ ಎಷ್ಟಾಗಬಹುದು (ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳಬೇಕು) ಎಂಬ ಲೆಕ್ಕಾಚಾರದೊಂದಿಗೆ ಉಳಿತಾಯ ಆರಂಭಿಸಬೇಕು. ಆದರೆ ಉಳಿತಾಯದಿಂದ ಹೆಚ್ಚಿನ ಅನುಕೂಲ ಆಗುವುದಿಲ್ಲ. ಆದ್ದರಿಂದ ಹಣದ ಹೂಡಿಕೆ (Investment) ಆಗಬೇಕು.

ಈಗ ಅಮೆರಿದಲ್ಲಿ ಎಂಬಿಎ ವ್ಯಾಸಂಗಕ್ಕೆ ಎರಡು ವರ್ಷಗಳಿಗೆ ಸುಮಾರು 80 ಲಕ್ಷ ರೂಪಾಯಿ ಆಗುತ್ತದೆ. ನಿಮ್ಮ ಬಳಿ 15 ವರ್ಷಗಳು ಇರುವುದರಿಂದ ಹಣದುಬ್ಬರ, ಶಿಕ್ಷಣ ಶುಲ್ಕದಲ್ಲಿ ಏರಿಕೆ, ಖರ್ಚು-ವೆಚ್ಚ ಏರಿಕೆ, ಇತ್ಯಾದಿಗಳನ್ನು ಗಮನಿಸಿಕೊಂಡು ಹಣವನ್ನು ಹೂಡಿಕೆ ಮಾಡಬೇಕು. ಈಗಿನ ಸನ್ನಿವೇಶವನ್ನೇ ಉದಾಹರಣೆಗೆ ತೆಗೆದುಕೊಂಡು ಹೇಳುವುದಾದರೆ, ಉಳಿತಾಯ ಯೋಜನೆಗಳಾದ ಪಿಪಿಎಫ್, ಎಸ್​ಎಸ್​ವೈಗಿಂತ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಸಹಾಯಕ. ಹಾಗೆಂದು ಒಂದನ್ನೇ ನಂಬಿಕೊಂಡು ಹೂಡಿಕೆ ಮಾಡಿದರೆ ಪ್ರಯೋಜನವಿಲ್ಲ. ವಿವಿಧ ವಲಯಗಳ, ವಿವಿಧ ಸ್ಟಾಕ್​ಗಳಲ್ಲಿ ಹೂಡಿಕೆ ಮಾಡಬೇಕು. ಇದು ಹೂಡಿಕೆಯಲ್ಲಿನ ಅಪಾಯವನ್ನು ತಗ್ಗಿಸುತ್ತದೆ. ಸ್ಟಾಕ್ ಮಾರುಕಟ್ಟೆಗಳಲ್ಲಿ ಅಪಾಯದ ಆತಂಕವಿದ್ದರೆ ಸೆನ್ಸೆಕ್ಸ್, ನಿಫ್ಟಿಯ ಮಾರ್ಕೆಟ್ ಇಂಡೆಕ್ಸ್ ಆಧಾರದಲ್ಲಿ ಇರುವ ಇಂಡೆಕ್ಸ್ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಬಹುದು.

ಇದು ದೀರ್ಘಕಾಲದ ಲೆಕ್ಕಾಚಾರ ಆಗಿರುವುದರಿಮದ ಮಾರುಕಟ್ಟೆಯ ವೇಗ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಇಂಡೆಕ್ಸ್ ಫಂಡ್​ಗಳು ನಿಮಗೆ ಅಪಾಯ ಮತ್ತು ರಿಟರ್ನ್​ ವಿಚಾರದಲ್ಲಿ ಗರಿಷ್ಠ ಸಮತೋಲನ ನೀಡಲಿದೆ. ಉತ್ತಮ ಇಂಡೆಕ್ಸ್ ಫಂಡ್​ಗಳು ವಾರ್ಷಿಕವಾಗಿ ಸರಾಸರಿ ಶೇಕಡಾ 13ರಿಂದ 15ರಷ್ಟು ರಿಟರ್ನ್ಸ್ ನೀಡಲಿದೆ. ನಿಮ್ಮ ಕೈಯಲ್ಲಿರುವ 15 ವರ್ಷಗಳಲ್ಲಿ 80 ಲಕ್ಷದಿಂದ 1 ಕೋಟಿಗೂ ಅಧಿಕ ಹಣವನ್ನು ಒಗ್ಗೂಡಿಸಲು ಪ್ರತಿ ತಿಂಗಳು ಸುಮಾರು 25 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.

“ಬಹುತೇಕ ಹೂಡಿಕೆದಾರರು ತಮ್ಮ ಮಕ್ಕಳ ಅಂತಾರಾಷ್ಟ್ರೀಯ ಶಿಕ್ಷಣಕ್ಕಾಗಿ ದೀರ್ಘಕಾಲೀನ ಹೂಡಿಕೆ ಮಾಡುವುದರಿಂದ ಅಸೆಟ್ ಕ್ಲಾಸ್​ನ ಈಕ್ವಿಟಿಗಳು ಇತರ ಅಸೆಟ್ ಕ್ಲಾಸ್ ಷೇರಿಗಿಂತ ಉತ್ತಮ ಸಾಧನೆ ತೋರುವ ಸಾಮರ್ಥ್ಯ ಹೊಂದಿವೆ. ಅಲ್ಲದೆ, ಮಾರ್ಕೆಟ್​ನ ಮಧ್ಯಂತರ ಏರು-ಪೇರುಗಳನ್ನು ನಿವಾರಿಸಿಕೊಳ್ಳಲು ಸಮಯಾವಕಾಶ ಇರುತ್ತದೆ. ದೇಶಿ ಹಾಗೂ ಅಂತಾರಾಷ್ಟ್ರೀಯ ಇಂಡೆಕ್ಸ್ ಫಂಡ್​ಗಳು ಹೂಡಿಕೆದಾರರು ತಮ್ಮ ಗುರಿ ಹತ್ತಿರ ಬಂದ ಹಾಗೆ ಡೆಟ್​ ಫಂಡ್​ಗಳತ್ತ ವರ್ಗಾವಣೆಯಾಗುವುದು ಉತ್ತಮ,” ಎಂದು ಪ್ಲಾನ್ ಅಹೆಡ್ ಸಂಸ್ಥೆಯ ಸಿಇಒ ವಿಶಾಲ್ ಧವನ್ ಹೇಳುತ್ತಾರೆ.

ಉನ್ನತ ವ್ಯಾಸಂಗಕ್ಕಾಗಿ ನೀವು ಹಣಕಾಸಿನ ಅಗತ್ಯದ ಮೇಲೆ ಗಮನಹರಿಸಿ ಹೂಡಿಕೆ ಮಾಡುವುದು ಉತ್ತಮ. ಇದಕ್ಕಾಗಿ ತಡ ಮಾಡದೆ ಎಸ್​ಐಪಿ ಮೂಲಕ ಪ್ರತಿ ತಿಂಗಳು ಹೂಡಿಕೆ ಮಾಡಿ. ಇದು ದೀರ್ಘಕಾಲಿನ ಹೂಡಿಕೆ ಆಗಿರುವುದರಿಂದ ಇಂಡೆಕ್ಸ್ ಮ್ಯೂಚುವಲ್ ಫಂಡ್​ಗಳು ಉತ್ತಮ ಆಯ್ಕೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ