Twitter CEO: 44 ಬಿಲಿಯನ್ ಡಾಲರ್​ ಖರೀದಿ ವ್ಯವಹಾರ ಮುಗಿದ ಮೇಲೆ ಸ್ವತಃ ಎಲಾನ್ ಮಸ್ಕ್ ಆಗಲಿದ್ದಾರಂತೆ ಟ್ವಿಟ್ಟರ್ ಸಿಇಒ

ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿ ಪೂರ್ಣಗೊಂಡ ನಂತರ ಅದರ ಸಿಇಒ ಆಗಬಹುದು ಎಂದು ಮೂಲಗಳು ತಿಳಿಸಿವೆ. ಅದರ ಬಗ್ಗೆ ವಿವರಗಳು ಇಲ್ಲಿವೆ.

Twitter CEO: 44 ಬಿಲಿಯನ್ ಡಾಲರ್​ ಖರೀದಿ ವ್ಯವಹಾರ ಮುಗಿದ ಮೇಲೆ ಸ್ವತಃ ಎಲಾನ್ ಮಸ್ಕ್ ಆಗಲಿದ್ದಾರಂತೆ ಟ್ವಿಟ್ಟರ್ ಸಿಇಒ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: May 06, 2022 | 2:02 PM

ಎಲಾನ್ ಮಸ್ಕ್ ಅವರು ಸಾಮಾಜಿಕ-ಮಾಧ್ಯಮ ಸಂಸ್ಥೆ ಟ್ವಿಟ್ಟರ್ (Twitter)​ ಅನ್ನು 44 ಬಿಲಿಯನ್ ಡಾಲರ್​ಗೆ ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್‌ನ ತಾತ್ಕಾಲಿಕ ಸಿಇಒ ಆಗುವ ನಿರೀಕ್ಷೆಯಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ಗುರುವಾರ ತಿಳಿಸಿವೆ. ಅಂದಹಾಗೆ ಬಿಲಿಯನೇರ್ ಎಲಾನ್​ ಮಸ್ಕ್ ಟ್ವಿಟ್ಟರ್ ಜತೆಗಿನ ಒಪ್ಪಂದಕ್ಕೆ ಬೇಕಾದ ಹಣವನ್ನು ಹೊಂದಿಸಲು ಹತ್ತಿರದಲ್ಲಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್ ಅವರು ಟೆಸ್ಲಾ ಇಂಕ್‌ನಲ್ಲಿ ಸಿಇಒ ಆಗಿದ್ದಾರೆ ಮತ್ತು ದಿ ಬೋರಿಂಗ್ ಕಂಪೆನಿ ಹಾಗೂ ಸ್ಪೇಸ್‌ಎಕ್ಸ್‌ನ ಇತರ ಎರಡು ಉದ್ಯಮಗಳ ಮುಖ್ಯಸ್ಥರಾಗಿದ್ದಾರೆ. ಟೆಸ್ಲಾ ಷೇರುಗಳು ಗುರುವಾರ ಶೇ 8ಕ್ಕಿಂತ ಕಡಿಮೆಯಾಗಿದೆ. ಏಕೆಂದರೆ, ಟ್ವಿಟ್ಟರ್‌ನೊಂದಿಗೆ ಮಸ್ಕ್‌ನ ಒಳಗೊಳ್ಳುವಿಕೆಯಿಂದಾಗಿ ವಿಶ್ವದ ಅತ್ಯಂತ ಬೆಲೆಬಾಳುವ ಎಲೆಕ್ಟ್ರಿಕ್-ಕಾರ್ ತಯಾರಕರ ಸಂಸ್ಥೆಯಿಂದ ಅವರ ಗಮನ ಬೇರೆಡೆಗೆ ಆಗಬಹುದು ಎಂದು ಹೂಡಿಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಟ್ವಿಟ್ಟರ್ ಷೇರುಗಳು ಸುಮಾರು ಶೇ 4ರಷ್ಟು ಏರಿಕೆ ಕಂಡು, ಲಾಭ ವಿಸ್ತರಣೆಯಾಗಿ ಯುಎಸ್​ಡಿ 50.89ರಲ್ಲಿದೆ. ಆ ಮೂಲಕ ಒಪ್ಪಂದದ ಬೆಲೆ ಯುಎಸ್​ಡಿ 54.20ರ ಹತ್ತಿರದಲ್ಲಿದೆ. ಹೂಡಿಕೆದಾರರು ಹೊಸ ಹಣಕಾಸು ಒಪ್ಪಂದದ ಪೂರ್ಣಗೊಳ್ಳುವುದರ ಮೇಲೆ ಗಮನ ನೆಟ್ಟಿದ್ದಾರೆ. ನವೆಂಬರ್‌ನಲ್ಲಿ ಟ್ವಿಟ್ಟರ್‌ನ ಸಿಇಒ ಆಗಿ ನೇಮಕಗೊಂಡ ಪರಾಗ್ ಅಗರವಾಲ್, ಮಸ್ಕ್‌ಗೆ ಕಂಪೆನಿಯ ಮಾರಾಟವು ಪೂರ್ಣಗೊಳ್ಳುವವರೆಗೆ ಅವರ ಪಾತ್ರದಲ್ಲಿ ಉಳಿಯುವ ನಿರೀಕ್ಷೆಯಿದೆ. ಮಧ್ಯಂತರ ಆಧಾರದ ಮೇಲೆ ಟ್ವಿಟ್ಟರ್‌ನ ಸಿಇಒ ಆಗಲು ಮಸ್ಕ್ ಯೋಜಿಸಿದ್ದಾರೆ ಎಂದು ಸಿಎನ್‌ಬಿಸಿ ಗುರುವಾರ ವರದಿ ಮಾಡಿದೆ.

ರಾಯಿಟರ್ಸ್ ಸೋಮವಾರದಂದು ವರದಿ ಮಾಡಿದಂತೆ, ಮಸ್ಕ್ ಟ್ವಿಟ್ಟರ್ ಸ್ವಾಧೀನಕ್ಕಾಗಿ ದೊಡ್ಡ ಹೂಡಿಕೆ ಸಂಸ್ಥೆಗಳು ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ. ಇದೇ ವೇಳೆ ತಮ್ಮ ಸಂಪತ್ತಿನ ಹೆಚ್ಚಿನ ಮೊತ್ತವನ್ನು ಈ ವ್ಯವಹಾರದಲ್ಲಿ ತೊಡಗಿಸುವುದಕ್ಕೆ ಅವರಿಗೆ ಇಷ್ಟ ಇಲ್ಲ. ನಿಯಂತ್ರಕರ ಫೈಲಿಂಗ್ ಪ್ರಕಾರ, ಪ್ರಸ್ತಾವಿತ ಸ್ವಾಧೀನಕ್ಕೆ ಷೇರುಗಳನ್ನು ಕೊಡುಗೆ ನೀಡಲು ಮಸ್ಕ್ ಕಂಪೆನಿಯ ಮಾಜಿ ಮುಖ್ಯಸ್ಥ ಜಾಕ್ ಡೋರ್ಸೆ ಸೇರಿದಂತೆ ಟ್ವಿಟ್ಟರ್‌ನ ಅಸ್ತಿತ್ವದಲ್ಲಿರುವ ಷೇರುದಾರರೊಂದಿಗೆ ಮಾತುಕತೆ ನಡೆಸುವುದನ್ನು ಮುಂದುವರಿಸಿದ್ದಾರೆ.

ಮಸ್ಕ್ ಅವರು ಈ ವ್ಯವಹಾರದಿಂದ ಹೊರನಡೆದರೆ ಟ್ವಿಟ್ಟರ್‌ಗೆ 1 ಶತಕೋಟಿ ಡಾಲರ್ ಟರ್ಮಿನೇಷನ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಸಾಮಾಜಿಕ ಮಾಧ್ಯಮ ಕಂಪೆನಿಯಾದ ಟ್ವಿಟ್ಟರ್ ಈ ಒಪ್ಪಂದವನ್ನು ಪೂರ್ಣಗೊಳಿಸಲು ಮಸ್ಕ್ ಮೇಲೆ ಮೊಕದ್ದಮೆ ಹೂಡಬಹುದು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Parag Agarwal: ಟ್ವಿಟ್ಟರ್ ಸಿಇಒ ಪರಾಗ್ ಅಗರ್​ವಾಲ್​ರನ್ನು ಕೆಲಸದಿಂದ ತೆಗೆದಲ್ಲಿ 300 ಕೋಟಿ ರೂ.ಗೂ ಹೆಚ್ಚು ಪರಿಹಾರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್