Vedantu Layoff: ಎಡ್‌ಟೆಕ್ ಯುನಿಕಾರ್ನ್ ವೇದಾಂತುನಿಂದ 200 ಉದ್ಯೋಗಿಗಳಿಗೆ ಕೊಕ್
ಯುನಿಕಾರ್ನ್ ಎಡ್‌ಟೆಕ್ ಕಂಪೆನಿ ವೇದಾಂತುನಿಂದ 200 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಯಾವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಎಡ್‌ಟೆಕ್ (EdTech) ಯುನಿಕಾರ್ನ್ ಆದ ಸುಮಾರು ಎಂಟು ತಿಂಗಳ ನಂತರ ವೇದಾಂತು ಇನ್ನೋವೇಷನ್ ಕೂಡ ಇದೀಗ ತನ್ನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ದು (Layoff), ಯುನಿಕಾರ್ನ್ ಆದ ಅನ್ಅಕಾಡೆಮಿ ಮತ್ತು ಲಿಡೋ ಲರ್ನಿಂಗ್‌ನಂತಹ ಉದ್ಯೋಗಿಗಳನ್ನು ವಜಾಗೊಳಿಸಿದ ಸಾಲಿಗೆ ಹೊಸ ಸೇರ್ಪಡೆ ಆಗಿದೆ. ಎಬಿಸಿ ವರ್ಲ್ಡ್ ಏಷ್ಯಾ ನೇತೃತ್ವದ ಸರಣಿ ಇ ಫಂಡಿಂಗ್ ಸುತ್ತಿನ ಭಾಗವಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುನಿಕಾರ್ನ್ ಟ್ಯಾಗ್ ಅನ್ನು ಪಡೆದ ವೇದಾಂತು ಸುಮಾರು 200 ಉದ್ಯೋಗಿಗಳನ್ನು ಅಥವಾ ಅದರ ಒಟ್ಟು ಸಾಮರ್ಥ್ಯದ ಶೇ 3.5ರಷ್ಟು ವಜಾಗೊಳಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. 200 ಉದ್ಯೋಗಿಗಳಲ್ಲಿ 120 ಗುತ್ತಿಗೆ ಆಧಾರದವರು ಮತ್ತು 80 ಪೂರ್ಣಾವಧಿ ಉದ್ಯೋಗಿಗಳು ಇದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
“ನಾವು ಅವರೊಂದಿಗೆ (ಗುತ್ತಿಗೆದಾರರು) ವಾರ್ಷಿಕ ಒಪ್ಪಂದವನ್ನು ಹೊಂದಿದ್ದೇವೆ ಮತ್ತು ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ನಮ್ಮ ಬೆಳವಣಿಗೆಯ ನಿರೀಕ್ಷೆಗಳ ಆಧಾರದ ಮೇಲೆ ಈ ಪಾತ್ರಗಳಿಗೆ ಸಂಬಂಧಿಸಿದಂತೆ ಮರುಸಮತೋಲನ ಮಾಡುವ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ,” ಎಂದು ವಕ್ತಾರರು ಹೇಳಿದ್ದಾರೆ. “ವರ್ಷವಿಡೀ ಶಿಕ್ಷಕರ ಕಲಿಕೆಯ ಅನುಭವ ಮತ್ತು ನಿರಂತರತೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ವರ್ಷದ ಮಧ್ಯದಲ್ಲಿ ಮರುಮೌಲ್ಯಮಾಪನ ಮಾಡಲಾಗುವುದಿಲ್ಲ. ಹೆಚ್ಚಿನ ತಂತ್ರಜ್ಞಾನದ ಮಧ್ಯಸ್ಥಿಕೆ, ವರ್ಗ ಸ್ವರೂಪದ ಪುನರ್ರಚನೆ ಮತ್ತು ವಿಭಾಗಗಳಲ್ಲಿನ ಬದಲಾವಣೆಗಳೊಂದಿಗೆ ನಮ್ಮ ಶಿಕ್ಷಣ ತಜ್ಞರು ಮತ್ತು ಸಹಾಯಕ ಶಿಕ್ಷಕರ ಈ ಪಾತ್ರಗಳನ್ನು ಮರುಪರಿಶೀಲಿಸುತ್ತೇವೆ,” ಎಂದು ವಕ್ತಾರರು ಸೇರಿಸಿದ್ದಾರೆ.
ಕಂಪೆನಿಯು ಇದೇ ರೀತಿಯ ಹುದ್ದೆಗಳಿಗೆ 100 ಸೇರಿದಂತೆ ವಿವಿಧ ತಂಡಗಳಲ್ಲಿ 1,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ದೇಶಾದ್ಯಂತ ಕಡಿಮೆಯಾದ ಕೊವಿಡ್ -19 ಪ್ರಕರಣಗಳಿಗೆ ಧನ್ಯವಾದಗಳು. ಶಾಲೆಗಳು ಮತ್ತು ಭೌತಿಕ ಬೋಧನಾ ತರಗತಿಗಳು ಪುನರಾರಂಭಗೊಳ್ಳುವುದರೊಂದಿಗೆ ಭಾರತದಲ್ಲಿ ಎಡ್‌ಟೆಕ್ ವಲಯವು ನಿಧಾನ ಆಗುತ್ತಿದೆ ಎಂಬ ಮಾತಿನ ಮಧ್ಯೆ ವೇದಾಂತುದಿಂದ ನೌಕರರನ್ನು ವಜಾಗೊಳಿಸುವ ಕ್ರಮವು ಬಂದಿದೆ. ಈ ವರ್ಷ ಇಲ್ಲಿಯವರೆಗೆ, ಎಡ್‌ಟೆಕ್ ಯುನಿಕಾರ್ನ್ ಅನ್ಅಕಾಡೆಮಿ ತನ್ನ ಶೇ 10ರಷ್ಟು ಉದ್ಯೋಗಿಗಳನ್ನು ಅಥವಾ 600 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಲಿಡೋ ಲರ್ನಿಂಗ್ 1,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಡ್‌ಟೆಕ್ ವಲಯವು 2021ರಲ್ಲಿ ಮೂರು ಯುನಿಕಾರ್ನ್ ಪಡೆದಿದ್ದರೆ, 2022ರಲ್ಲಿ ಕೇವಲ ಒಂದು ಯುನಿಕಾರ್ನ್ ಅನ್ನು ಪಡೆದುಕೊಂಡಿದೆ.
ಖಚಿತವಾಗಿ ಹೇಳುವುದಾದರೆ, ಕೊವಿಡ್ -19ರ ಹರಡುವಿಕೆಯನ್ನು ತಡೆಯಲು 2020ರಲ್ಲಿ ದೇಶವು ಲಕ್ಷಾಂತರ ವಿದ್ಯಾರ್ಥಿಗಳನ್ನು ಮನೆಯೊಳಗೆ ಲಾಕ್‌ಡೌನ್ ಮಾಡಬೇಕಾದ ನಂತರ ಎಡ್‌ಟೆಕ್ ವಲಯವು ಸತತ ಎರಡು ವರ್ಷಗಳ ಅಮೋಘ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Unacademy: ವೆಚ್ಚ ಕಡಿತಕ್ಕಾಗಿ 600 ಉದ್ಯೋಗಿಗಳನ್ನು ವಜಾ ಮಾಡಿದ ಎಜುಟೆಕ್ ಕಂಪನಿ ಅನ್ಅಕಾಡೆಮಿ