Unacademy: ವೆಚ್ಚ ಕಡಿತಕ್ಕಾಗಿ 600 ಉದ್ಯೋಗಿಗಳನ್ನು ವಜಾ ಮಾಡಿದ ಎಜುಟೆಕ್ ಕಂಪನಿ ಅನ್​ಅಕಾಡೆಮಿ

ವಜಾ ಆಗಿರುವ ಉದ್ಯೋಗಿಗಳಲ್ಲಿ ಪೂರ್ಣಾವಧಿ ಮತ್ತು ಗುತ್ತಿಗೆನೌಕರರೂ ಸಹ ಸೇದ್ದಾರೆ. ಕಳೆದ ಎರಡು ತಿಂಗಳುಗಳಿಂದ ವೆಚ್ಚ ಕಡಿತಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದ ಕಂಪನಿಯು ಇದೇ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ

Unacademy: ವೆಚ್ಚ ಕಡಿತಕ್ಕಾಗಿ 600 ಉದ್ಯೋಗಿಗಳನ್ನು ವಜಾ ಮಾಡಿದ ಎಜುಟೆಕ್ ಕಂಪನಿ ಅನ್​ಅಕಾಡೆಮಿ
ಪ್ರಾತಿನಿಧಿಕ ಚಿತ್ರ (Pic Courtesy: twitter.com/unacademy)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 1:15 PM

ಬೆಂಗಳೂರು: ಆನ್​ಲೈನ್ ಎಜುಟೆಕ್ ಕಂಪನಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಅನ್​ಅಕಾಡೆಮಿ 600 ಉದ್ಯೋಗಿಗಳನ್ನು ವಜಾ ಮಾಡಿದೆ. ವಜಾ ಆಗಿರುವ ಉದ್ಯೋಗಿಗಳಲ್ಲಿ ಪೂರ್ಣಾವಧಿ ಮತ್ತು ಗುತ್ತಿಗೆನೌಕರರೂ ಸಹ ಸೇದ್ದಾರೆ. ಕಳೆದ ಎರಡು ತಿಂಗಳುಗಳಿಂದ ವೆಚ್ಚ ಕಡಿತಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದ ಕಂಪನಿಯು ಇದೇ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಎಕ್ಸ್​ಪ್ರೆಸ್ ಜಾಲತಾಣ ವರದಿ ಮಾಡಿದೆ. ಕಂಪನಿಯು ಹೊಸ ಕ್ಷೇತ್ರಗಳಿ ತನ್ನ ಕಾರ್ಯಾಚರಣೆ ವಿಸ್ತರಿಸಿದ ಕಾರಣ ಒಂದೇ ರೀತಿಯ ಕೆಲಸ ಮಾಡುವ ಹಲವು ಹುದ್ದೆಗಳು ಇರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಒಂದಿಷ್ಟು ಜನರನ್ನು ಕೆಲಸದಿಂದ ವಜಾ ಮಾಡಲು ಕಂಪನಿ ತೀರ್ಮಾನಿಸಿತು. ಪ್ರಸ್ತುತ ಅನ್​ಅಕಾಡೆಮಿಯಲ್ಲಿ 6,000ಕ್ಕೂ ಹೆಚ್ಚು ಪೂರ್ಣಾವಧಿ ಮತ್ತು ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯು ಇತ್ತೀಚೆಗೆ ಖರೀದಿಸಿದ ಹೊಸ ಸ್ಟಾರ್ಟ್​ಅಪ್​ಗಳ ಉದ್ಯೋಗಿಗಳೂ ಈ ಸಂಖ್ಯೆಯಲ್ಲಿ ಸೇರಿದ್ದಾರೆ. ಕಂಪನಿಯು ಇತ್ತೀಚೆಗೆ ಘೋಷಿಸಿರುವ ಲೇಆಫ್​ಗಳಲ್ಲಿ ಒಟ್ಟು ಉದ್ಯೋಗಿಗಳ ಪೈಕಿ ಶೇ 10ಕ್ಕಿಂತಲೂ ಕಡಿಮೆ ಸಂಖ್ಯೆಯ ಕಾರ್ಮಿಕರಿಗೆ ಧಕ್ಕೆಯಾಗಿದೆ ಕಂಪನಿಯ ಹೇಳಿಕೆಯು ತಿಳಿಸಿದೆ.

ಈವರೆಗೆ ಅನ್​ಅಕಾಡೆಮಿ ಕಂಪನಿಯು 11 ಕಂಪನಿಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಇವೆಲ್ಲವೂ ಟೆಸ್ಟ್​-ಪ್ರಿಪ್ (ಪರೀಕ್ಷೆಗಳಿಗೆ ಸಿದ್ಧತೆ) ವಲಯಗಳಿಗೆ ಸೇರಿದ್ದವೇ ಎನ್ನುವುದು ಗಮನಾರ್ಹ ಸಂಗತಿ. ಟ್ಯಾಪ್​ಚೀಫ್, ಮಾಸ್ಟ್ರೀ, ಪ್ರೆಪ್​ಲ್ಯಾಡರ್, ಹಂಡಾ-ಕ-ಫಂಡಾ ಮತ್ತಿತರ ಕಂಪನಿಗಳು ಸೇರಿವೆ. ಈವರೆಗೆ ಅನ್​ಅಕಾಡೆಮಿ ಸ್ವಾಧೀನ ಪಡಿಸಿಕೊಂಡಿರುವ ಅತಿಹೆಚ್ಚು ಬೆಲೆ ಬಾಳುವ ಕಂಪನಿ ಪ್ರೆಪ್​ಲ್ಯಾಡರ್. ಇದನ್ನು ಜುಲೈ 2020ರಲ್ಲಿ ಅನ್​ಅಕಾಡೆಮಿಯು ₹ 5 ಕೋಟಿ ಮೌಲ್ಯಕ್ಕೆ ಖರೀದಿಸಿತ್ತು.

ಕೆಲಸದಿಂದ ವಜಾಗೊಳಿಸಲು ಗುರುತಿಸಿದ್ದವರಿಗೆ ಬಹುಮುಂಚೆಯೇ ನೊಟೀಸ್ ನೀಡಲಾಗಿತ್ತು. ನಮ್ಮಲ್ಲಿ ಕೆಲಸ ಮಾಡುವವರ ಕಾರ್ಯವೈಖರಿಯನ್ನು ನಿರಂತರವಾಗಿ ಗಮನಿಸುತ್ತಿರುತ್ತವೆ. ಕಾರ್ಯಕ್ಷಮತೆ ಸರಿಯಿಲ್ಲದಿರುವುದು ಗಮನಕ್ಕೆ ಬಂದಾಗ ಅಂಥವರಿಗೆ ಸುಧಾರಿಸಿಕೊಳ್ಳಲು ಒಂದಿಷ್ಟು ಸಮಯ ಕೊಡುತ್ತೇವೆ. ಅದು ಸಾಧ್ಯವಾಗಿದ್ದ ಪರಿಸ್ಥಿತಿಯಲ್ಲಿ ಅಂಥವರಿಗೆ ಕೆಲಸ ಬಿಡಲು ಹೇಳುತ್ತೇವೆ. ಇದರ ಜೊತೆಗೆ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯೂ ನಿರಂತರ ನಡೆಯುತ್ತಲೇ ಇರುತ್ತದೆ ಎಂದು ಅನ್​ಕ್ಯಾಡೆಮಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಫೈನಾನ್ಷಿಯಲ್ ಎಕ್ಸ್​ಪ್ರೆಸ್​ ವರದಿಯು ತಿಳಿಸಿದೆ.

2015ರಲ್ಲಿ ಗೌರವ್ ಮಂಜಲ್, ಹೇಮೇಶ್ ಸಿಂಗ್, ರೊಮನ್ ಸೈನಿ ಮತ್ತು ಸಚಿನ್ ಗುಪ್ತ ಅವರು ಅನ್​ಅಕ್ಯಾಡೆಮಿ ಹುಟ್ಟುಹಾಕಿದ್ದರು. ಆರಂಭದಲ್ಲಿ ಕಂಪನಿಯು 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗುತ್ತಿತ್ತು. 2019ರಲ್ಲಿ ತನ್ನ ಕೆಲವು ಕಂಟೆಂಟ್​ಗೆ ಚಂದಾದಾರಿಕೆ ಆರಂಭಿಸಿತು. ಜೊತೆಗೆ ಲೈವ್​ ಟ್ಯೂಷನ್ ಕ್ಲಾಸ್​ ವಿಭಾಗದಲ್ಲಿಯೂ ವ್ಯವಹಾರ ಆರಂಭಿಸಿತು.

ಫೇಸ್​ಬುಕ್, ಟೈಗರ್ ಗ್ಲೋಬಲ್, ಟೆಮಾಸೆಕ್ ಹೋಲ್ಡಿಂಗ್ಸ್, ಸಾಫ್ಟ್​ಬ್ಯಾಂಕ್, ಬ್ಲೂಮ್ ವೆಂಚುರ್ಸ್, ಸೆಖೋಯಾ, ನೆಕ್ಸಸ್ ವೆಂಚುರ್ ಪಾರ್ಟ್​ನರ್ಸ್, ಎಲಿವೇಶನ್ ಕ್ಯಾಪಿಟಲ್ ಮತ್ತು ಇತರ ಕಂಪನಿಗಳ ಸಹಯೋಗದಲ್ಲಿ ಅನ್​ಅಕ್ಯಾಡೆಮಿ ಈವರೆಗೆ ₹ 80 ಕೋಟಿ ಬಂಡವಾಳ ಸಂಗ್ರಹಿಸಿದೆ. ಪ್ರಸ್ತುತ ಅನ್​ಅಕ್ಯಾಡೆಮಿಯ ಮಾರುಕಟ್ಟೆ ಮೌಲ್ಯವನ್ನು ₹ 340 ಕೋಟಿ ಎಂದು ಅಂದಾಜಿಸಲಾಗಿದೆ. ಅನ್​ಅಕ್ಯಾಡೆಮಿಗೆ ಭಾರತದ ಮತ್ತೊಂದು ಪ್ರಮುಖ ಎಜ್​ಟೆಕ್ ಕಂಪನಿ ಬೈಜೂಸ್ ತೀವ್ರ ಸ್ಪರ್ಧೆಯೊಡ್ಡುತ್ತಿದೆ. ಬೈಜೂಸ್​ನ ಮಾರುಕಟ್ಟೆ ಮೌಲ್ಯ ₹ 2,200 ಕೋಟಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Indian Army Recruitment 2022: ಭಾರತೀಯ ಸೇನೆಯಲ್ಲಿ 10ನೇ, 12ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

ಇದನ್ನೂ ಓದಿ: Inflation Compensation: ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಪರಿಹಾರವಾಗಿ ಈ ಕಂಪೆನಿಯಿಂದ ಉದ್ಯೋಗಿಗಳಿಗೆ ತಲಾ 74 ಸಾವಿರ ರೂ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್