Indian Army Recruitment 2022: ಭಾರತೀಯ ಸೇನೆಯಲ್ಲಿ 10ನೇ, 12ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
Indian Army Recruitment: ಈ ನೇಮಕಾತಿ ಅಭಿಯಾನದ ಮೂಲಕ, ಬಿಇಜಿ ರೂರ್ಕಿಯಲ್ಲಿ ಗ್ರೂಪ್ ಸಿ ಯ 36 ಹುದ್ದೆಗಳು ಮತ್ತು ಜಿಆರ್‌ಸಿ ಜಬಲ್‌ಪುರದಲ್ಲಿ ಹಂತ 1 ಮತ್ತು ಹಂತ 2 ರ 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
Indian Army Recruitment 2022: ಭಾರತೀಯ ಸೇನೆಯು ಗ್ರೂಪ್ C ಮತ್ತು ಗ್ರೆನೇಡಿಯರ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಬೆಂಗಾಲ್ ಇಂಜಿನಿಯರ್ ಗ್ರೂಪ್, ರೂರ್ಕಿ, ಜಬಲ್‌ಪುರದಲ್ಲಿ ಲೆವೆಲ್ 1 ಮತ್ತು ಲೆವೆಲ್ 2 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 10, 12ನೇ ತರಗತಿ ಉತ್ತೀರ್ಣರಾದವರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಈ ನೇಮಕಾತಿ ಅಭಿಯಾನದ ಮೂಲಕ, ಬಿಇಜಿ ರೂರ್ಕಿಯಲ್ಲಿ ಗ್ರೂಪ್ ಸಿ ಯ 36 ಹುದ್ದೆಗಳು ಮತ್ತು ಜಿಆರ್‌ಸಿ ಜಬಲ್‌ಪುರದಲ್ಲಿ ಹಂತ 1 ಮತ್ತು ಹಂತ 2 ರ 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್, ವಾಚ್‌ಮ್ಯಾನ್ ವಾಚ್‌ಮ್ಯಾನ್, ಬಾರ್ಬರ್, ರೇಂಜ್ ಚೌಕಿದಾರ್, ಸಫಾಯಿವಾಲಾ, ಸ್ಟೋರ್ ಕೀಪರ್ ಮತ್ತು ಕುಕ್ ಹುದ್ದೆಗಳು ಸೇರಿವೆ.
Indian Army Recruitment 2022: ಅರ್ಜಿ ಸಲ್ಲಿಸುವುದು ಹೇಗೆ: BEG ಸೆಂಟರ್ ರೂರ್ಕಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ indianarmy.nic.in ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದಲ್ಲದೆ, ಅರ್ಜಿ ನಮೂನೆಯು ನೇಮಕಾತಿ ಅಧಿಸೂಚನೆಯಲ್ಲಿ ಲಭ್ಯವಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಮತ್ತು ಎಲ್ಲಾ ಕಡ್ಡಾಯ ದಾಖಲೆಗಳನ್ನು ಲಗತ್ತಿಸುವ ಮೂಲಕ ಅಭ್ಯರ್ಥಿಗಳು ಫಾರ್ಮ್ ಅನ್ನು ಏಪ್ರಿಲ್ 30 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
the commandant, bengal Engineer Group (BEG) Center Roorkee, Haridwar, Uttarakhand.
ಈ ನೇಮಕಾತಿ ಕುರಿತಾದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಹಾಗೂ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇನ್ನು ಜಿಆರ್‌ಸಿ ಜಬಲ್‌ಪುರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಕೆಳಗೆ ನೀಡಲಾದ ನೇರ ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ ಅರ್ಜಿಯನ್ನು ಭರ್ಜರಿ ಮಾಡಿ, ಎಲ್ಲಾ ದಾಖಲೆಯ ಪ್ರತಿಯೊಂದಿಗೆ ಮೇ 1 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.
The Commandant, Grenadiers Regimental Center (GRC), Jabalpur, Madhya Pradesh, Pin-482001,
ಈ ನೇಮಕಾತಿ ಕುರಿತಾದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಹಾಗೂ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ.