Inflation Compensation: ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಪರಿಹಾರವಾಗಿ ಈ ಕಂಪೆನಿಯಿಂದ ಉದ್ಯೋಗಿಗಳಿಗೆ ತಲಾ 74 ಸಾವಿರ ರೂ.

ಯುನೈಟೆಡ್​ ಕಿಂಗ್​ಡಮ್​ನ ಈ ಕಂಪೆನಿಯಿಂದ ತನ್ನ ಸಿಬ್ಬಂದಿಗೆ ತಲಾ 750 ಪೌಂಡ್ಸ್, ಭಾರತದ ರೂಪಾಯಿ ಲೆಕ್ಕದಲ್ಲಿ 74000 ಅನ್ನು ಹಣದುಬ್ಬರದಿಂದ ಚೇತರಿಸಿಕೊಳ್ಳಲಿ ಎಂದು ನೀಡಲಾಗಿದೆ.

Inflation Compensation: ವಿದ್ಯುತ್, ಪೆಟ್ರೋಲ್ ಬೆಲೆ ಏರಿಕೆ ಪರಿಹಾರವಾಗಿ ಈ ಕಂಪೆನಿಯಿಂದ ಉದ್ಯೋಗಿಗಳಿಗೆ ತಲಾ 74 ಸಾವಿರ ರೂ.
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 06, 2022 | 9:00 PM

ಬ್ರಿಟಿಷ್ ಕಂಪೆನಿಯೊಂದರ ನಡೆ ಈಚೆಗೆ ಭಾರೀ ಸುದ್ದಿಯಾಗಿದೆ. ಇಂಧನ ಹಾಗೂ ವಿದ್ಯುತ್​ನಂಥ ಅಗತ್ಯ ವಸ್ತುಗಳ ಬೆಲೆ ಏರಿಕೆ (Price Hike) ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಉದ್ಯೋಗಿಗೆ 750 ಪೌಂಡ್ (ಭಾರತದ ರೂಪಾಯಿ ಲೆಕ್ಕದಲ್ಲಿ 74,091) ನೀಡಿದೆ. ಎಮೆರೀಸ್ ಟಿಂಬರ್ ಅಂಡ್ ಬಿಲ್ಡರ್ಸ್ ಮರ್ಚೆಂಟ್ಸ್​ನಲ್ಲಿನ 60ರಷ್ಟು ಉದ್ಯೋಗಿಗಳಿಗೆ ಈ ಮೊತ್ತವನ್ನು ಪಾವತಿಸಲಾಗಿದೆ. ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ತಮ್ಮ ಜೇಬಿನಿಂದ ಈ ಮೊತ್ತವನ್ನು ನೀಡಿದ್ದಾರೆ. ಇದರಿಂದಾಗಿ ಅವರಿಗೆ 45,000 ಪೌಂಡ್ಸ್ (44.46 ಲಕ್ಷ ರೂಪಾಯಿ) ವೆಚ್ಚ ಆಗುತ್ತದೆ ಎಂದು LADbible ವರದಿ ಮಾಡಿದೆ. “ಹೆಚ್ಚುತ್ತಿರುವ ಇಂಧನ/ಪೆಟ್ರೋಲ್ ಮತ್ತು ವಿದದ್ಯುತ್/ಅನಿಲ ಬೆಲೆಯಿಂದಾಗಿ ನಾವು ಎಲ್ಲ ಎಮೆರೀಸ್​ನ ಎಲ್ಲ ಸಿಬ್ಬಂದಿಗೆ 750 ಪೌಂಡ್ ನೀಡಲು ನಿರ್ಧರಿಸಿದ್ದೇವೆ. ನಿಶ್ಚಿತವಲ್ಲದ ಹಣಕಾಸು ಸಮಯದಲ್ಲಿ ಇದರಿಂದ ನಮ್ಮ ತಂಡಕ್ಕೆ ದೀರ್ಘಾವಧಿಯಲ್ಲಿ ಸಹಾಯ ಆಗುತ್ತದೆ. ಕುಟುಂಬದ ರೀತಿಯಲ್ಲೇ ಎಮೆರೀಸ್​ನಿಂದ ಒಬ್ಬರು ಮತ್ತೊಬ್ಬರ ಬಗ್ಗೆ ಇಂಥ ಕಷ್ಟದ ಸಮಯದಲ್ಲಿ ಕಾಳಜಿ ವಹಿಸುತ್ತದೆ!” ಎಂದು ಕಂಪೆನಿ ಟ್ವೀಟ್ ಮಾಡಿದೆ.

“ಎಲ್ಲರೂ ಕಷ್ಟ ಪಡುತ್ತಿರುವಾಗ ನಾವು ಸಿಬ್ಬಂದಿಯೊಂದಿಗೆ ಆ ಸಂಪತ್ತನ್ನು ಹಂಚಿಕೊಳ್ಳಲು ಬಯಸುತ್ತೇವೆ. ಅವರು ಅದನ್ನು ನಿರೀಕ್ಷಿಸಿರಲಿಲ್ಲ ಮತ್ತು ಅವರು ತುಂಬಾ ಸಂತೋಷಪಟ್ಟರು,” ಎಂದು 51 ವರ್ಷದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರು ಮಕ್ಕಳ ತಂದೆ ಜೇಮ್ಸ್ ಹಿಪ್ಕಿನ್ಸ್ ಹೇಳಿದ್ದಾರೆ ಎಂದು ದ ಸನ್ ವರದಿ ಮಾಡಿದೆ. 2022ರ ಅಂತ್ಯದ ವೇಳೆಗೆ ಯುನೈಟೆಡ್ ಕಿಂಗ್​ಡಮ್​ನ ಹಣದುಬ್ಬರವು 40 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಸರ್ಕಾರವು ಮುನ್ಸೂಚನೆ ನೀಡಿದ್ದರಿಂದ ಏರುತ್ತಿರುವ ವೆಚ್ಚಗಳೊಂದಿಗೆ ಹೋರಾಡುತ್ತಿರುವ ಬ್ರಿಟನ್ನರಿಗೆ ಸಹಾಯ ಮಾಡಲು ತಮ್ಮ ಸರ್ಕಾರವು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಕಳೆದ ತಿಂಗಳು ಪ್ರಧಾನಿ ಬೋರಿಸ್ ಜಾನ್ಸನ್ ಒಪ್ಪಿಕೊಂಡಿದ್ದರು.

ನೆರೆಯ ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಹಿನ್ನೆಲೆಯಲ್ಲಿ ಮತ್ತು ಕೊರೊನಾ ಲಾಕ್‌ಡೌನ್‌ಗಳಿಂದ ದೇಶಗಳು ತಮ್ಮ ಆರ್ಥಿಕತೆಯನ್ನು ಪುನಃ ಮುಕ್ತಗೊಳಿಸಿದ ನಂತರ ಸರಕುಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ವಿಶ್ವದಾದ್ಯಂತ ಹೆಚ್ಚುತ್ತಿರುವ ಹಣದುಬ್ಬರವನ್ನು ಎದುರಿಸಲಾಗುತ್ತಿದೆ. ಭಾರತದಲ್ಲಿ ಕಳೆದ 16 ದಿನಗಳಿಂದ 14ನೇ ಸುತ್ತಿನ ಹೆಚ್ಚಳದಲ್ಲಿ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಇತ್ತೀಚಿನ ಏರಿಕೆಯು ಇಂಧನದ ವೆಚ್ಚದಲ್ಲಿ ಒಟ್ಟು ಹೆಚ್ಚಳವನ್ನು 10 ರೂಪಾಯಿ ಮಾಡಿದೆ.

ಇದನ್ನೂ ಓದಿ: ಬೆಲೆ ಏರಿಕೆ ನಮಗೆ ನುಂಗಲಾರದ ತುತ್ತಾಗಿದೆ, ತಿಂಡಿ ಬೆಲೆ ಶೇ. 10 ಜಾಸ್ತಿ ಮಾಡ್ತಿದ್ದೇವೆ -ಸಹಿಸಿಕೊಳೀ ಎಂದ ಹೋಟೆಲು ಮಾಲೀಕರು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್