App Based Taxi: ಆ್ಯಪ್ ಆಧಾರಿತ ಟ್ಯಾಕ್ಸಿಗಳ ಬಗ್ಗೆ ಬಳಕೆದಾರರು ಹೇಳಿಕೊಂಡ ದೂರುಗಳು ಏನೇನಲ್ಲ ಇವೆ ಗೊತ್ತಾ?

ಓಲಾ, ಉಬರ್​ನಂಥ ಟ್ಯಾಕ್ಸಿ ಅಗ್ರಿಗೇಟರ್​ಗಳ ಸೇವೆ ಬಗ್ಗೆ ಲೋಕಲ್​ಸರ್ಕಲ್ಸ್​​ನಿಂದ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ವ್ಯಕ್ತವಾದ ಅಭಿಪ್ರಾಯ ಇಲ್ಲಿದೆ.

App Based Taxi: ಆ್ಯಪ್ ಆಧಾರಿತ ಟ್ಯಾಕ್ಸಿಗಳ ಬಗ್ಗೆ ಬಳಕೆದಾರರು ಹೇಳಿಕೊಂಡ ದೂರುಗಳು ಏನೇನಲ್ಲ ಇವೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 07, 2022 | 7:55 AM

ತಲುಪುವ ಸ್ಥಳದ ಬಗ್ಗೆ ತಿಳಿದುಕೊಂಡ ನಂತರ ಚಾಲಕರು ಸವಾರಿಗಳನ್ನು ರದ್ದುಗೊಳಿಸುವುದು ಕಳೆದ 12 ತಿಂಗಳಲ್ಲಿ ಅಪ್ಲಿಕೇಷನ್ ಟ್ಯಾಕ್ಸಿ ಬಳಕೆದಾರರಲ್ಲಿ ಮುಖ್ಯ ಚಿಂತೆಯ ಅಂಶವಾಗಿದೆ ಎಂದು ಏಪ್ರಿಲ್ 6ರಂದು ಬಿಡುಗಡೆಯಾದ ಲೋಕಲ್ ಸರ್ಕಲ್ಸ್ ಸಮೀಕ್ಷೆಯ (Survey) ಸಂಶೋಧನೆಗಳು ಸೂಚಿಸಿವೆ. “ಶೇ 79ರಷ್ಟು ಆ್ಯಪ್ ಟ್ಯಾಕ್ಸಿ ಬಳಕೆದಾರರು ಹೇಳಿರುವಂತೆ, ತಲುಪಬೇಕಾದ ಸ್ಥಳದ ಬಗ್ಗೆ ತಿಳಿದುಕೊಂಡ ನಂತರ ಅಥವಾ ನಗದುರಹಿತ ಪಾವತಿ ವಿಧಾನದ ಬಗ್ಗೆ ತಿಳಿದ ಮೇಲೆ ‘ಡ್ರೈವರ್ ಕ್ಯಾನ್ಸಲಿಂಗ್ ರೈಡ್’ ಎಂಬುದು ಪ್ರಮುಖ ಬಾಧೆಯಾಗಿದೆ ಎಂದು ಹೇಳುತ್ತಾರೆ,” ಅನ್ನೋದನ್ನು ಸಂಶೋಧನಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಶೇ 45ರಷ್ಟು ಕ್ಯಾಬ್ ಅಗ್ರಿಗೇಟರ್ ಸೇವೆಯ ಬಳಕೆದಾರರು ಬೆಲೆಗಳ ಏರಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪೀಕ್ ಅವರ್‌ಗಳಲ್ಲಿ (ಬೇಡಿಕೆ ಹೆಚ್ಚಾಗಿರುವ ಅವಧಿ) ಸಾಮಾನ್ಯ ವೆಚ್ಚಕ್ಕಿಂತ “ಒಂದೂವರೆ ಪಟ್ಟು ಹೆಚ್ಚು” ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸಮೀಕ್ಷೆಗೆ ಪ್ರತಿಕ್ರಿಯಿಸಿದ ಪೈಕಿ ಕೆಲವು ಮಂದಿ ಕೆಲವು ಆ್ಯಪ್-ಆಧಾರಿತ ಟ್ಯಾಕ್ಸಿ ಡ್ರೈವರ್‌ಗಳು ಅಳವಡಿಸಿಕೊಂಡಿರುವ ಆರೋಪಿತ ಸುಲಿಗೆ ಅಭ್ಯಾಸಗಳ ಬಗ್ಗೆ ತಮ್ಮ ಬೇಸರ ಹೇಳಿಕೊಂಡಿದ್ದಾರೆ.

“ಕೆಲವು ಚಾಲಕರು ರೈಲು ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತಲ್ಲದ ಹೊತ್ತಲ್ಲಿ ಬುಕಿಂಗ್ ತೆಗೆದುಕೊಳ್ಳುತ್ತಾರೆ. ಗ್ರಾಹಕರು ಬಂದ ನಂತರ ಚಾಲಕರು ಟ್ಯಾಕ್ಸಿ ಅಪ್ಲಿಕೇಷನ್ ಅನ್ನು ಕಡಿತಗೊಳಿಸುತ್ತಾರೆ ಮತ್ತು ಅದೇ ಪ್ರಯಾಣಕ್ಕೆ ಒಂದೂವರೆಯಿಂದ ಎರಡು ಪಟ್ಟು ಬೆಲೆಯನ್ನು ಕೇಳುತ್ತಾರೆ ಎಂದು ವರದಿಯಾಗಿದೆ,” ಎಂದು ಲೋಕಲ್ ಸರ್ಕಲ್ಸ್ ತಿಳಿಸಿವೆ. ಮೇಲಿನ ಸಮಸ್ಯೆಗಳ ಹೊರತಾಗಿಯೂ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು “ಅನುಕೂಲಕ್ಕಾಗಿ” ಅಪ್ಲಿಕೇಷನ್ ಆಧಾರಿತ ಟ್ಯಾಕ್ಸಿಗಳನ್ನು ಬಳಸಿಕೊಂಡು ಪ್ರಯಾಣಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ 12 ತಿಂಗಳಲ್ಲಿ ಸುಮಾರು ಶೇ 58ರಷ್ಟು ಜನರು ಕ್ಯಾಬ್ ಅಗ್ರಿಗೇಟರ್ ಸೇವೆಗಳನ್ನು ಬಳಸಿಕೊಂಡು ಪ್ರಯಾಣಿಸಿದ್ದಾರೆ ಎಂದು ಸಮೀಕ್ಷೆ ಹೇಳಿದ್ದು, “ಹೆಚ್ಚಿನ ಗ್ರಾಹಕರು ಅವರು ಅಪ್ಲಿಕೇಷನ್ ಟ್ಯಾಕ್ಸಿಗಳನ್ನು ಬಳಸುವುದಕ್ಕೆ ಅನುಕೂಲವನ್ನು ಪ್ರಮುಖ ಕಾರಣವೆಂದು ಉಲ್ಲೇಖಿಸಿದ್ದಾರೆ”. ಪ್ರತಿಕ್ರಿಯಿಸಿದವರಲ್ಲಿ ಶೇ 60ರಷ್ಟು ಜನರು ಮಾಸ್ಕಿಂಗ್ ಮತ್ತು ಸಾಮಾಜಿಕ ಅಂತರದ ಅನುಸರಣೆಯಲ್ಲಿ ತೃಪ್ತರಾಗಿದ್ದರೆ, ಕೇವಲ ಶೇ 35ರಷ್ಟು ಜನರು ನೈರ್ಮಲ್ಯ ಅಥವಾ ಸ್ಯಾನಿಟೇಷನ್​ನ ಅನುಸರಣೆಯಲ್ಲಿ ತೃಪ್ತರಾಗಿದ್ದಾರೆ. ಲೋಕಲ್​ಸರ್ಕಲ್ಸ್ ಪ್ರಕಾರ, ಭಾರತದ 324 ಜಿಲ್ಲೆಗಳಲ್ಲಿ ವಾಸಿಸುವ 65,000 ಅಪ್ಲಿಕೇಷನ್ ಟ್ಯಾಕ್ಸಿ ಬಳಕೆದಾರರಲ್ಲಿ ಸಮೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ ಭಾಗವಹಿಸಿದವರಲ್ಲಿ ಶೇ 66ರಷ್ಟು ಪುರುಷರು ಮತ್ತು ಶೇ 34ರಷ್ಟು ಮಹಿಳೆಯರು. ಗ್ರಾಹಕರು ಎತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಸಂಶೋಧನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಗಮನಾರ್ಹವಾಗಿ, ಓಲಾ ಮತ್ತು ಉಬರ್ ಭಾರತದಲ್ಲಿ ಎರಡು ಪ್ರಮುಖ ಕ್ಯಾಬ್ ಅಗ್ರಿಗೇಟರ್​ಗಳಾಗಿವೆ. ಸರಿಸುಮಾರು ಸಮಾನ ಮಾರುಕಟ್ಟೆ ಪಾಲನ್ನು ಹೊಂದುವ ಅಂದಾಜುಗಳೊಂದಿಗೆ ಎರಡೂ ಕಂಪೆನಿಗಳು ತೀವ್ರ ಸ್ಪರ್ಧೆಯಲ್ಲಿವೆ. 2020ರ ಫೆಬ್ರವರಿಯಲ್ಲಿ ಉಬರ್ ತನ್ನ ಅಖಿಲ ಭಾರತದ ಮಾರುಕಟ್ಟೆ ಪಾಲು ಶೇ 50ಕ್ಕಿಂತ ಹೆಚ್ಚಿದೆ ಎಂದು ಹೇಳಿಕೊಂಡಿದೆ. ಕ್ಯಾಬ್ ಅಗ್ರಿಗೇಟರ್‌ಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಮತ್ತು ಯಾವುದೇ ರೀತಿ ದುಷ್ಕೃತ್ಯಗಳನ್ನು ತಡೆಗಟ್ಟಲು ಕೇಂದ್ರವು 2020ರ ನವೆಂಬರ್​ನಲ್ಲಿ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಇದನ್ನೂ ಓದಿ: ರಾಜ್ಯದ ಜನರಿಗೆ ಮೊತ್ತೊಂದು ಬೆಲೆ ಏರಿಕೆ ಬಿಸಿ; ಖಾಸಗಿ ಬಸ್ ಟಿಕೆಟ್ ದರ ಹಾಗೂ ಪ್ರವಾಸಿ ಟ್ಯಾಕ್ಸಿ ವಾಹನಗಳ ಬಾಡಿಗೆ ಹೆಚ್ಚಳಕ್ಕೆ ಚಿಂತನೆ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ