Paytm: 2023ರ ಸೆಪ್ಟೆಂಬರ್ ವೇಳೆಗೆ ಪೇಟಿಎಂ ತಲುಪಬಹುದು ಬ್ರೇಕ್​ ಈವನ್ ಎನ್ನುತ್ತಿದೆ ಕಂಪೆನಿ

Paytm: 2023ರ ಸೆಪ್ಟೆಂಬರ್ ವೇಳೆಗೆ ಪೇಟಿಎಂ ತಲುಪಬಹುದು ಬ್ರೇಕ್​ ಈವನ್ ಎನ್ನುತ್ತಿದೆ ಕಂಪೆನಿ
ಸಾಂದರ್ಭಿಕ ಚಿತ್ರ

2023ನೇ ಇಸವಿಯ ಸೆಪ್ಟೆಂಬರ್ ಹೊತ್ತಿಗೆ ಪೇಟಿಎಂ ಲಾಭ ಹಾಗೂ ನಷ್ಟ ಎರಡೂ ಅಲ್ಲದ ಬ್ರೇಕ್ ಈವನ್ ಸ್ಥಿತಿಯನ್ನು ತಲುಪಬಹುದು ಎಂದು ಕಂಪೆನಿ ತಿಳಿಸಿದೆ.

TV9kannada Web Team

| Edited By: Srinivas Mata

Apr 07, 2022 | 11:41 AM

ಫಿನ್​ಟೆಕ್ ಸ್ಟಾರ್ಟ್​ ಅಪ್ ಆದ ಒನ್​97 ಕಮ್ಯುನಿಕೇಷನ್ಸ್ (Paytm) ಬುಧವಾರದಂದು ಹೇಳಿರುವ ಪ್ರಕಾರ, ಮುಂದಿನ ಆರು ತ್ರೈಮಾಸಿಕಗಳಲ್ಲಿ ಕಾರ್ಯಾಚರಣೆಯ Ebitda (ಬಡ್ಡಿ, ತೆರಿಗೆ, ಸವಕಳಿ ಮತ್ತು ಅಮಾರ್ಟೈಸೇಷನ್ ಮುಂಚಿನ ಗಳಿಕೆ) ಬ್ರೇಕ್ ಈವನ್, ಅಂದರೆ ಹಾಕಿದ ಬಂಡವಾಳಕ್ಕೆ ಸಮನಾದ ಆದಾಯವನ್ನು ತಲುಪುತ್ತದೆ ಎಂದು ಹೇಳಿದೆ. ನಿಯಂತ್ರಕರ ಫೈಲಿಂಗ್‌ನಲ್ಲಿ ತಿಳಿಸಿರುವಂತೆ, ಹೆಚ್ಚಿನ ವಿಶ್ಲೇಷಕರು ಅಂದಾಜು ಮಾಡಿರುವುದಕ್ಕೆ ಮುಂದಿನ 2023ರ ಸೆಪ್ಟೆಂಬರ್ ತ್ರೈಮಾಸಿಕದ ವೇಳೆಗೆ Ebitda ಬ್ರೇಕ್-ಈವನ್ (ESOP ವೆಚ್ಚಗಳ ಮೊದಲು) ಸಾಧಿಸಬಹುದು ಎಂದು ಅದು ಹೇಳಿದೆ. ಆದರೆ ಕಂಪೆನಿಯ ಬೆಳವಣಿಗೆ ಯೋಜನೆಗಳಲ್ಲಿ ರಾಜಿ ಆಗುವುದಿಲ್ಲ.

“ಇದರೊಂದಿಗೆ ಹೊಂದಿಕೊಂಡಂತೆ, ನಮ್ಮ ಮಾರುಕಟ್ಟೆ ಬಂಡವಾಳ ಮೌಲ್ಯವು ಸುಸ್ಥಿರ ಆಧಾರದ ಮೇಲೆ ಐಪಿಒ ಮಟ್ಟವನ್ನು ದಾಟಿದಾಗ ಮಾತ್ರ ನನ್ನ ಸ್ಟಾಕ್ ಅನುದಾನವನ್ನು ನನಗೆ ವಹಿಸಲಾಗುವುದು,” ಎಂದು ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ ಷೇರುದಾರರಿಗೆ ಪತ್ರ ಬರೆದಿದ್ದಾರೆ. ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಪೇಟಿಎಂ ಅನ್ನು ಹೊಂದಿರುವ ಒನ್​97 ಭಾರೀ ನಿರೀಕ್ಷೆಯೊಂದಿಗೆ 2021ರ ನವೆಂಬರ್ ತಿಂಗಳಲ್ಲಿ ಐಪಿಒ ಬಂದಿತ್ತು. ಆದರೆ ಅಲ್ಲಿಂದ ನಿರಂತರವಾಗಿ ಇಳಿಜಾರಿನತ್ತ ಸಾಗುತ್ತಿದೆ. ಘೋಷಣೆಯ ನಂತರ ಷೇರುಗಳು ಶೇ 5ರಷ್ಟು ಏರಿಕೆಯಾಗಿ ರೂ. 640ಕ್ಕೆ ತಲುಪಿತ್ತು. ಅಂದಹಾಗೆ ಪೇಟಿಎಂ ಷೇರುಗಳನ್ನು 2150 ರೂಪಾಯಿಗೆ ವಿತರಿಸಲಾಗಿತ್ತು. ಅಲ್ಲಿಂ ಅದು ಶೇ 70ರಷ್ಟು ಕಡಿಮೆಯಾಗಿದೆ.

ಶರ್ಮಾ ಅವರು ಫೈಲಿಂಗ್‌ನಲ್ಲಿ ಹೇಳಿರುವಂತೆ, “ನಮ್ಮ ಷೇರುಗಳು ಐಪಿಒ ಬೆಲೆಯಿಂದ ಗಣನೀಯವಾಗಿ ಕುಸಿದಿದ್ದು, ಭಾರೀ ಬೆಳವಣಿಗೆಯ ಸ್ಟಾಕ್​ಗಳಿಗೆ ಜಾಗತಿಕವಾಗಿ ಏರಿಳಿತದ ಸನ್ನಿವೇಶದ ಹಿನ್ನೆಲೆಯಲ್ಲಿ ಹೀಗಾಗಿದೆ.” ಮಾರ್ಚ್ ಮಧ್ಯದಲ್ಲಿ ಮಾಕ್ವೇರಿಯಿಂದ ಸ್ಟಾಕ್‌ನ ಬೆಲೆಯ ಗುರಿಯನ್ನು ರೂ. 700ರ ಹಿಂದಿನ ಮಟ್ಟದಿಂದ ರೂ. 450ಕ್ಕೆ ಕಡಿತಗೊಳಿಸಿತು. ಬ್ರೋಕರೇಜ್​ಗಳು ವಾದಿಸುವಂತೆ, ಪ್ರಮಾಣ ಮತ್ತು ಗಾತ್ರವನ್ನು ಪಡೆಯಲು ಫಿನ್‌ಟೆಕ್‌ಗಳು ವಿತರಣೆಯನ್ನು ಮೀರಿ ಮತ್ತು ಅವರಿಗೆ ಪರವಾನಗಿಗಳ ಅಗತ್ಯ ಇರುವ ಸಾಲವನ್ನು ನೀಡಬೇಕಾಗುತ್ತದೆ. ಆದರೆ ಒನ್​97 ಸಣ್ಣ ಹಣಕಾಸು ಬ್ಯಾಂಕ್ (SFB) ಪರವಾನಗಿಯನ್ನು ಪಡೆಯುವ ಸಂಭವನೀಯತೆಯು “ಈಗ ಗಮನಾರ್ಹವಾಗಿ ಕಡಿಮೆಯಾಗಿದೆ” ಎಂದು ತಿಳಿಸಲಾಗಿದೆ.

ಹೊಸ ಗ್ರಾಹಕರನ್ನು ಸೇರ್ಪಡೆ ಮಾಡದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸುವ ನಿಯಂತ್ರಕ ಕ್ರಮವನ್ನು ಬ್ರೋಕರೇಜ್ ಸೂಚಿಸಿದೆ. ಆ ಸಮಯದಲ್ಲಿ ಮಾಧ್ಯಮ ವರದಿಗಳು ತಿಳಿಸಿರುವಂತೆ, ಒನ್​97ನಲ್ಲಿ ಚೀನೀ ಮಾಲೀಕತ್ವ ಶೇ 25ರಷ್ಟು ಇರುವುದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ಗೆ ಆರಾಮದಾಯಕವಾಗಿಲ್ಲ ಎಂದು ಸೂಚಿಸಿದೆ. ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಲು ಶೀಘ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕಂಪೆನಿ ಹೇಳಿದೆ. ಡಿಜಿಟಲ್ ಪಾವತಿಗಳು, ಬೈ ನೌ ಪೇ ಲೇಟರ್ (ಬಿಎನ್‌ಪಿಎಲ್) ಮತ್ತು ಕಟ್ಟುನಿಟ್ಟಾದ ಕೆವೈಸಿ ಮತ್ತು ಅನುಸರಣೆ ಮಾನದಂಡಗಳ ಮೇಲಿನ ಆರ್‌ಬಿಐ ನಿಯಮಗಳು ಎಲ್ಲ ಫಿನ್‌ಟೆಕ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಅವುಗಳ ಯೂನಿಟ್ ಆರ್ಥಿಕ ಸಂಗತಿಗಳು ಮತ್ತು ಬೆಳವಣಿಗೆ ನಿರೀಕ್ಷೆಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಈ ಮಧ್ಯೆ, ಒನ್​97 ಹಣಕಾಸು ವರ್ಷ 2022ರ ನಾಲ್ಕನೇ ತ್ರೈಮಾಸಿಕದಲ್ಲಿ 6.5 ಮಿಲಿಯನ್ ಸಾಲಗಳನ್ನು ಮಾರಾಟ ಮಾಡಿ, ಶೇ 48ರಷ್ಟು ತ್ರೈಮಾಸಿಕದಿಂದ ತ್ರೈಮಾಸಿಕ ಬೆಳವಣಿಗೆಯನ್ನು ದಾಖಲಿಸಿದೆ. ವಿತರಿಸಲಾದ ಸಾಲಗಳ ಮೌಲ್ಯವು ತ್ರೈಮಾಸಿಕದಿಂದ ತ್ರೈಮಾಸಿಕವಾಗಿ ಶೇ 63ರಷ್ಟು ಹೆಚ್ಚಾಗಿ, 3,553 ಕೋಟಿ ರೂಪಾಯಿ ಮುಟ್ಟಿದೆ. ಅಲ್ಲದೆ, ಇದು ತನ್ನ ಸಾಲ ವಿತರಣೆ ಮತ್ತು ಸೇವಾ ವ್ಯವಹಾರವನ್ನು ಮತ್ತಷ್ಟು ಅಳೆಯಲು ಮಾರ್ಕ್ಯೂ ಸಾಲದಾತರೊಂದಿಗೆ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 2022ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪೇಟಿಎಂ ಪ್ಲಾಟ್‌ಫಾರ್ಮ್ ಮೂಲಕ ಪ್ರೊಸೆಸ್ ಮಾಡಲಾದ ಒಟ್ಟು ವ್ಯಾಪಾರಿ ಪಾವತಿ ಪ್ರಮಾಣವು (GMV) ಸರಿಸುಮಾರು ರೂ. 2.59 ಲಕ್ಷ ಕೋಟಿ. ಇದು ವರ್ಷದಿಂದ ವರ್ಷಕ್ಕೆ ಶೇ 104ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಇದನ್ನೂ ಓದಿ: Paytm: ಪೇಟಿಎಂಗೆ ಗ್ರಾಹಕರು ಸಿಕ್ಕಿರುವುದು ಕ್ಯಾಶ್​ಬ್ಯಾಕ್​ಗಳಿಂದಲೇ ಹೊರತು ಸೇವೆಯಿಂದಲ್ಲ ಎಂದ ಹಿರಿಯ ಬ್ಯಾಂಕರ್

Follow us on

Related Stories

Most Read Stories

Click on your DTH Provider to Add TV9 Kannada