Poverty In India: ಭಾರತದಲ್ಲಿ ವಿಪರೀತ ಬಡತನ ಬಹುತೇಕ ನಿರ್ಮೂಲನೆ ಎನ್ನುತ್ತಿದೆ ಐಎಂಎಫ್
ಐಎಂಎಫ್ನ ವರ್ಕಿಂಗ್ ಪೇಪರ್ ಪ್ರಕಾರ ಭಾರತದಲ್ಲಿ ತೀವ್ರ ಬಡತನದ ನಿರ್ಮೂಲನೆ ಆಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರ್ಕಿಂಗ್ ಪೇಪರ್ನಿಂದ ತಿಳಿದುಬಂದಿದೆ.
ಭಾರತದಲ್ಲಿ ಅತಿ ಬಡತನ (Poverty) ಬಹುತೇಕ ನಿವಾರಣೆ ಆಗಿದ್ದು, ಬಳಕೆ ಅಸಮಾನತೆಯು 40 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅದು ಸರ್ಕಾರ ನೀಡಿದ ಆಹಾರ ಧಾನ್ಯಗಳ ಕಾರಣಕ್ಕೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೊರತಂದಿರುವ ಹೊಸ ವರ್ಕಿಂಗ್ ಪೇಪರ್ನಲ್ಲಿ ತಿಳಿಸಲಾಗಿದೆ. ಈ ಐಎಂಎಫ್ ವರ್ಕಿಂಗ್ ಪೇಪರ್ನ ಲೇಖಕರು ಅರ್ಥಶಾಸ್ತ್ರಜ್ಞರಾದ ಸುರ್ಜಿತ್ ಭಲ್ಲ, ಅರವಿಂದ್ ವೀರ್ಮಣಿ ಮತ್ತು ಕರಣ್ ಭಾಸಿನ್. ಈ ಲೇಖಕರು ತಿಳಿಸಿರುವಂತೆ, ವಿಪರೀತ ಬಡತನದಲ್ಲಿ ಬದುಕಿರುವವರ ಪ್ರಮಾಣ ಈಗ ಶೇ 1ಕ್ಕಿಂತ ಕಡಿಮೆ ಇದೆ. ಈ ಪ್ರಮಾಣವು ಕೊರೊನಾ ಕಾಲದಲ್ಲೂ ಸ್ಥಿರವಾಗಿತ್ತು. ಅದಕ್ಕೆ ಕಾರಣ ಆಗಿದ್ದು ಸಬ್ಸಿಡಿಗಳು, ಅದರಲ್ಲೂ ಆಹಾರ ಧಾನ್ಯಗಳನ್ನು ನೀಡಿದ್ದು ಎನ್ನಲಾಗಿದೆ. ಏಷ್ಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯಾದ ಭಾರತದಲ್ಲಿ ಬಡವರು ಹಾಗೂ ಶ್ರೀಮಂತರ ಮಧ್ಯೆ ಅಂತರ ಹೆಚ್ಚುತ್ತಿದೆ ಎಂದು ಹಲವಾರು ಜಾಗತಿಕ ವರದಿಗಳು ಬೊಟ್ಟು ಮಾಡಿ ತೋರುತ್ತಿರುವ ಸಂದರ್ಭದಲ್ಲಿ ಐಎಂಎಫ್ ಹೀಗೆ ತಿಳಿಸಿದೆ. ಆದರೆ ಕೊವಿಡ್-19ಗೆ ಸಂಬಂಧಿಸಿದ ಆರ್ಥಿಕ ಆಘಾತಗಳನ್ನು ವಿವಿಧ ಅಧ್ಯಯನಗಳು ಒಂದೊಂದು ರೀತಿಯಲ್ಲಿ ಹೇಳಿವೆ.
ಭಾರತದಲ್ಲಿ ವಿಪರೀತ ಬಡತನದಲ್ಲಿ ವಾಸ ಇರುವವರು ಎಂಬುದರ ವ್ಯಾಖ್ಯಾನವನ್ನು ವಿಶ್ವ ಬ್ಯಾಂಕ್ನಿಂದ ಮಾಡಲಾಗಿದೆ. ಅದರ ಪ್ರಕಾರ, ಯಾರು 1.9 ಯುಎಸ್ಡಿ ಅಥವಾ ಅದಕ್ಕಿಂತ ಕಡಿಮೆ ಪರ್ಸೇಸಿಂಗ್ ಪವರ್ ಪಾರಿಟಿ (PPP) ಇರುತ್ತಾರೋ ಅದನ್ನು ವಿಪರೀತ ಬಡತನ ಎನ್ನಲಾಗುತ್ತದೆ. 2019ರ ಕೊರೊನಾ ವರ್ಷದಲ್ಲಿ ಇದು ಶೇ 0.8ರಷ್ಟಿತ್ತು ಎಂದು ಐಎಂಎಫ್ ಪೇಪರ್ನಲ್ಲಿ ತಿಳಿಸಲಾಗಿದ್ದು, ಏಪ್ರಿಲ್ 5, 2022ರಂದು ಪ್ರಕಟಿಸಲಾಗಿದೆ. 2020ರ ಕೊರೊನಾ ವರ್ಷದಲ್ಲಿ ಆಹಾರ ಧಾನ್ಯಗಳ ನಾಗರಿಕ ಸರಬರಾಜು ಒಂದು ಸಾಧನದಂತೆ ಆಗಿದ್ದು, ವಿಪರೀತ ಬಡತನ ಪ್ರಮಾಣ ಹೆಚ್ಚಾಗದಂತೆ ಮತ್ತು “ಕಡಿಮೆ ಮಟ್ಟದಲ್ಲಿ ಇರುವಂತೆ” ನೋಡಿಕೊಳ್ಳಲು ಸಾಧ್ಯವಾಯಿತು ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.
ಪಿಪಿಪಿ ಎಂಬುದು ಮೆಟ್ರಿಕ್. ಅದು ವಿವಿಧ ಕರೆನ್ಸಿಗಳ ಖರೀದಿ ಶಕ್ತಿಗಳನ್ನು ಸಮಾನ ಆಗಿಸುತ್ತದೆ ಮತ್ತು ಹೋಲಿಕೆಯನ್ನು ಸುಲಭ ಆಗಿಸುತ್ತದೆ. “ನಮ್ಮ ಫಲಿತಾಂಶದಿಂದ ಗೊತ್ತಾಗುವುದೇನೆಂದರೆ, ಭಾರತದ ಆಹಾರ ಭದ್ರತಾ ಕಾರ್ಯಕ್ರಮದ ವಿಸ್ತರಣೆಯು ಕೊರೊನಾ ಬಿಕ್ಕಟ್ಟಿನಿಂದ ಉದ್ಭವಿಸಿದ ಆಘಾತದ ಪ್ರಮುಖ ಭಾಗವನ್ನು ಕಡಿಮೆ ಮಾಡಿದೆ,” ಎಂದು ಲೇಖಕರು ಹೇಳಿದ್ದಾರೆ. ಈ ರೀತಿ ಪದೇಪದೇ ಕಡಿಮೆ ಬಡತನ ದರವು ತಿಳಿಸುವ ಪ್ರಕಾರ, ಭಾರತದಲ್ಲಿ ವಿಪರೀತ ಬಡತನದ ನಿರ್ಮೂಲನೆ ಆಗಿದೆ ಎಂದು ಪರಿಸಮಾಪ್ತಿಯಲ್ಲಿ ತಿಳಿಸಲಾಗಿದೆ. ಈ ಅಧ್ಯಯನವು ಹೇಗೆ ಉಳಿದಿದ್ದಕ್ಕಿಂತ ಪ್ರತ್ಯೇಕ ಎಂದು ಲೇಖಕರು ತಿಳಿಸಿರುವುದನ್ನೇ ಹೇಳುವುದಾದರೆ, ಸಬ್ಸಿಡಿಯ ಹೊಂದಾಣಿಕೆ ಬಡತನದ ಮೇಲೆ ಬೀರಿದೆ. ಆಹಾರ ಧಾನ್ಯ ಬಿಡುಗಡೆಯು ಹಣ ವರ್ಗಾವಣೆ ರೀತಿಯಲ್ಲೇ ಬಡತನ ಪ್ರಮಾಣವನ್ನು ಕಡಿಮೆ ಮಾಡಿದೆ.
“ಆಹಾರ ಸಬ್ಸಿಡಿ ಪ್ರತಿ ವ್ಯಕ್ತಿಗೆ 5 ಕೇಜಿ. ಮನೆಯೊಂದರ ಲೆಕ್ಕದಲ್ಲಿ ಅದು ತಿಂಗಳಿಗೆ ಸುಮಾರು 25 ಕೇಜಿ. ಈಗ ನೀವು ಅದನ್ನು ಬೆಲೆಗೆ ಪರಿವರ್ತಿಸಿದರೆ ಅದು ಸುಮಾರು ರೂ. 750ಕ್ಕೆ ಬರುತ್ತದೆ. ಇದು ನಿಜವಾಗಿಯೂ ಬಡ ಕುಟುಂಬಗಳಿಗೆ ಅತ್ಯಲ್ಪ ಮೊತ್ತವಲ್ಲ,” ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರೊನಬ್ ಸೇನ್ ಹೇಳಿದ್ದಾರೆ. “ಆದರೆ ಅದರ ಅಸಮಾನತೆಯ ಭಾಗವನ್ನು ರೂ 750 ಬದಲಾಯಿಸುತ್ತದೆ ಅನ್ನುವುದನ್ನು ನಾನು ಊಹಿಸಲು ಸಾಧ್ಯವಿಲ್ಲ. ಹಸಿವಿನ ವಿಷಯದಲ್ಲಿ ಸಂಪೂರ್ಣ ಬಡತನ. ಹೌದು, ಆದರೆ ಅಸಮಾನತೆಯು ವಿಭಿನ್ನವಾದ ಸಂಗತಿ ಆಗಿದೆ. ಅಸಮಾನತೆಯ ಮೇಲೆ ಅಳತೆಗೋಲನ್ನು ಸರಿಸಲು ರೂ. 750 ಸಾಕಾಗುವುದಿಲ್ಲ,” ಎಂದು ಸೇನ್ ಸೇರಿಸಿದ್ದಾರೆ.
2020ರಲ್ಲಿ ಮೊದಲ ಕೊವಿಡ್ -19 ಲಾಕ್‌ಡೌನ್ ಸಮಯದಲ್ಲಿ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಆನ್ನ ಯೋಜನೆ (ಪಿಎಂಜಿಕೆಎವೈ) ಪ್ರಾರಂಭಿಸಿತು. ಇದು ಬಡವರಿಗೆ ಅವರ ಸಾಮಾನ್ಯ ಅರ್ಹತೆಯಾದ 25 ಕೇಜಿಗಿಂತ ಹೆಚ್ಚಿನ ಉಚಿತ ಆಹಾರ ಧಾನ್ಯವನ್ನು (ಪ್ರತಿ ತಲೆಗೆ 5 ಕೇಜಿ) ವಿತರಿಸುವ ಕಾರ್ಯಕ್ರಮವಾಗಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 800 ಮಿಲಿಯನ್ ಫಲಾನುಭವಿಗಳು ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡುತ್ತಾರೆ. ಸರ್ಕಾರವು PMGKAY ಅನ್ನು ಸೆಪ್ಟೆಂಬರ್ 2022 ರವರೆಗೆ ವಿಸ್ತರಿಸುವುದಾಗಿ ಹೇಳಿದೆ.
ಇದನ್ನೂ ಓದಿ: Indian Economy: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ; 5 ಪ್ರಮುಖ ಅಂಶಗಳು ಇಲ್ಲಿವೆ