ನಾಳೆಯ ಎಐಸಿಸಿ ಕಾರ್ಯಕಾರಿಣಿ ಸಭೆಯಲ್ಲಿ ದೇಶದ ಬಗ್ಗೆ ಹಲವು ನಿರ್ಣಯ ತೆಗೆದುಕೊಳ್ಳಲಾಗುವುದು: ಖರ್ಗೆ
ಕಾಂಗ್ರೆಸ್ 2025 ಅನ್ನು ಪಕ್ಷ ಸಂಘಟನೆಯ ವರ್ಷ ಅಂತ ಘೋಷಣೆ ಮಾಡಿದ್ದರೂ ಹಲವು ಪಿಸಿಸಿಗಳಿಗೆ ನೇಮಕಾತಿ ಬಾಕಿಯುಳಿದಿದೆ ಅನ್ನೋದನ್ನು ಭಾಗಶಃ ಒಪ್ಪಿಕೊಂಡ ಮಲ್ಲಿಕಾರ್ಜುನ ಖರ್ಗೆಯವರು, ಹಾಗೇನೂ ಇಲ್ಲ, ಅಸ್ಸಾಂ, ಯುಪಿ, ಬಿಹಾರಗಳಲ್ಲಿ ನೇಮಕಾತಿ ಅಗಿದೆ, ಬೇರೆ ಕೆಲಕಡೆಗಳಲ್ಲಿ ಆಗಬೇಕಿದೆ, ನಾಳೆಯ ಸಭೆಯ ನಂತರ ತಾನು ಮಾತಾಡುವುದಾಗಿ ಹೇಳಿದರು.
ಬೆಂಗಳೂರು, ಏಪ್ರಿಲ್ 7: ನಗರದಲ್ಲಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಳೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಿದ್ದು, ದೇಶದ ಬಗ್ಗೆ ಹಲವಾರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಯಾವ ವಿಷಯಗಳ ಮೇಲೆ ಚರ್ಚೆ ಅಂತ ಈಗಲೇ ಹೇಳಲಾಗಲ್ಲ, ಸಭೆಯ ನಂತರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದ ಖರ್ಗೆಯವರು, ಹಿಂದೆ ನಡೆದ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ: ಸಿಎಂ ಆರೋಗ್ಯ ವಿಚಾರಿಸಲು ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರಂತೆ: ಜಿ ಪರಮೇಶ್ವರ್, ಗೃಹ ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಸ್ಪಿನ್ ಲೆಜೆಂಡ್ ಆರ್. ಅಶ್ವಿನ್ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
