ಸಿಎಂ ಆರೋಗ್ಯ ವಿಚಾರಿಸಲು ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದರಂತೆ: ಜಿ ಪರಮೇಶ್ವರ್, ಗೃಹ ಸಚಿವ
ಹನಿ ಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ದೂರು ಸಲ್ಲಿಸದ ಹೊರತು ಗೃಹ ಇಲಾಖೆ ಏನೂ ಮಾಡಲಾಗದು, ಸುಮೋಟು ಪ್ರಕರಣ ದಾಖಲಿಸಿಕೊಳ್ಳಲು ಎಫ್ಐಆರ್ ಆಗಿರಬೇಕು ಎಂದು ಪರಮೇಶ್ವರ್ ಹೇಳಿದರು. ಆಪ್ತರ ಸಲಹೆ ಕೇಳಿ ದೂರು ದಾಖಲಿಸುತ್ತೇನೆ ಎಂದು ರಾಜಣ್ಣ ಹೇಳಿರುವುದಕ್ಕೆ, ತನ್ನನ್ನೂ ಸೇರಿ ಅವರಿಗೆ ಬಹಳಷ್ಟು ಜನ ಆಪ್ತರಿದ್ದಾರೆ, ಯಾವ ಆಪ್ತರನ್ನು ಕೇಳುತ್ತಾರಂತೆ ಎಂದು ಸಚಿವ ನಗೆಯಾಡಿದರು.
ಬೆಂಗಳೂರು, 24ಮಾರ್ಚ್: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಯಾಕೆ ಭೇಟಿಯಾದರು ಅಂತ ಗೊತ್ತಿಲ್ಲ, ಸಿಎಂ ಮಂಡಿನೋವಿಂದ ಬಳಲಾರಂಭಿಸಿದ ಬಳಿಕ ಅವರನ್ನು ಭೇಟಿಯಾಗಿರಲಿಲ್ಲ, ಆರೋಗ್ಯ ವಿಚಾರಿಸಲು ಹೋಗಿದ್ದೆ ಎಂದು ಖರ್ಗೆ ಹೇಳಿದ್ದಾರೆ ಎಂದು ಹೇಳಿದರು. ಹನಿ ಟ್ರ್ಯಾಪ್ ಪ್ರಕರಣವನ್ನು ಡಿಸಿಎಂ ಡಿಕೆ ಶಿವಕುಮಾರ್ ಬೋಗಸ್ ಎಂದು ಹೇಳಿರುವುದಕ್ಕೆ ಗೃಹ ಸಚಿವ ಪ್ರತಿಕ್ರಿಯಿಸಲು ನಿರಾಕರಿಸಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣ ಹಿಟ್ ಅಂಡ್ ರನ್ ಆಗಬಾರದು, ಟಾರ್ಗೆಟ್ ಆಗಿರುವವರು ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್
Follow Us
Latest Videos
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

