Niveditha Shivarajkumar: ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್ಕುಮಾರ್ ಮೊದಲ ಸಂದರ್ಶನ: ಲೈವ್ ನೋಡಿ
ನಿವೇದಿತಾ ಶಿವರಾಜ್ ಕುಮಾರ್ ಸಂದರ್ಶನ: ಡಾ. ರಾಜ್ಕುಮಾರ್ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಕೂಡ ನಿರ್ಮಾಪಕಿಯಾಗಿದ್ದಾರೆ. ‘ಫೈರ್ ಫ್ಲೈ’ ಸಿನಿಮಾವನ್ನು ಅವರು ನಿರ್ಮಿಸಿದ್ದಾರೆ. ಈ ಪ್ರಯುಕ್ತ ಅವರು ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದ ಲೈವ್ ವಿಡಿಯೋ ಇಲ್ಲಿದೆ..
ನಟ ಶಿವರಾಜ್ಕುಮಾರ್ (Shivarajkumar) ಅವರ ಪುತ್ರಿ ನಿವೇದಿತಾ ಈಗ ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಂದರ್ಶನ ನೀಡಿದ್ದಾರೆ. ಶಿವರಾಜ್ಕುಮಾರ್ ಜೊತೆ ನಿವೇದಿತಾ ಅವರು ಟಿವಿ9 ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ‘ಫೈರ್ ಫ್ಲೈ’ ಸಿನಿಮಾಗೆ ನಿವೇದಿತಾ ಶಿವರಾಜ್ಕುಮಾರ್ (Niveditha Shivarajkumar) ಬಂಡವಾಳ ಹೂಡಿದ್ದಾರೆ. ಈ ಮೂಲಕ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ‘ಫೈರ್ ಫ್ಲೈ’ (Firefly) ಸಿನಿಮಾದಲ್ಲಿ ವಂಶಿ, ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.