ಅಪ್ಪನಿಂದ ಬಹಳ ಕಲಿತಿದ್ದೇನೆ ಎನ್ನುತ್ತಾರೆ ‘ಫೈರ್ ಫ್ಲೈ’ ಚಿತ್ರದ ನಿರ್ಮಾಪಕಿ ನಿವೇದಿತಾ ಶಿವರಾಜ್ಕುಮಾರ್
ನಿವೇದಿತಾ ಹೊಸಬರನ್ನು ಹಾಕಿಕೊಂಡು ‘ಫೈರ್ ಫ್ಲೈ’ ಚಿತ್ರವನ್ನು ನಿರ್ಮಿಸಿದ್ದು ಇದರಲ್ಲಿ ಮಾನವನ ಭಾವನೆಗಳನ್ನು ಬಹಳ ಅದ್ಭುತವಾಗಿ ಚಿತ್ರಿಸಲಾಗಿದೆ ಎಂದು ಅವರು ಹೇಳುತ್ತಾರೆ. ಸಿನಿಮಾ ಕುಟುಂಬವನ್ನು ಪ್ರತಿನಿಧಿಸುವುದರಿಂದ ಸಹಜವಾಗೇ ಒತ್ತಡವಿರುತ್ತದೆ ಆದರೆ ಅಪ್ಪನಿಂದ ತಾನು ಬಹಳಷ್ಟು ಕಲಿತಿರುವುದಾಗಿ ನಿವೇದಿತಾ ಹೇಳುತ್ತಾರೆ. ಶ್ರೀ ಮುತ್ತು ಸಿನಿ ಸರ್ವಿಸಸ್ ಸ್ಥಾಪಿಸಿ ಎರಡು ದಶಕಗಳ ಬಳಿಕ ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಬೆಂಗಳೂರು, ಏಪ್ರಿಲ್ 7: ನಿವೇದಿತಾ ಶಿವರಾಜ್ಕುಮಾರ್ (Nivedita Shiva Rajkumar) ಅವರಿಗೆ ಸಿನಿಮಾ ರಕ್ತದಲ್ಲೇ ಇದೆ, ದೊಡ್ಮನೆ ಕುಟುಂಬದ ಕುಡಿ ಅಂದರೆ ಸುಮ್ನೇನಾ? ಶ್ರೀ ಮುತ್ತು ಸಿನಿ ಸರ್ವಿಸಸ್ ಸಂಸ್ಥೆಯಿಂದ ವೆಬ್ ಸಿರೀಸ್ ನಿರ್ಮಿಸುತ್ತಿದ್ದ ನಿವೇದಿತಾ ‘ಫೈರ್ ಫ್ಲೈ’ ಸಿನಿಮಾ ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್ವುಡ್ಗೂ ಕಾಲಿಟ್ಟಿದ್ದಾರೆ. ಟಿವಿ9ನೊಂದಿಗೆ ನಡೆಸಿರುವ ಮುಕ್ತ ಮಾತುಕತೆಯಲ್ಲಿ ನಿವೇದಿತಾ ಒಬ್ಬ ನಿರ್ಮಾಪಕಿಯಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮೊನ್ನೆಯಷ್ಟೇ ಯುಎಸ್ ನಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ತಾಯ್ನಾಡಿಗೆ ಮರಳಿರುವ ಡಾ ಶಿವರಾಜ್ ಕುಮಾರ್ ಮಗಳ ಪಕ್ಕದಲ್ಲೇ ಕೂತು ಅವರು ಆತ್ಮವಿಶ್ವಾಸದಿಂದ ಆಡುವ ಮಾತುಗಳನ್ನು ಪ್ರೀತಿ ಮತ್ತು ಅಭಿಮಾನದಿಂದ ಕೇಳಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: ‘ಕ್ಷಮೆ ಅನ್ನೋದು ಸಣ್ಣ ಪದ’; ಗೀತಾಗೆ ಸಾರಿ ಕೇಳಿ ಕಣ್ಣೀರು ಹಾಕಿದ ಶಿವರಾಜ್ಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಪ್ರಧಾನಿ ಹೇಳಿದಂತೆ ಪಾಕ್ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
