IPL 2025: ಮುಂಬೈ ಬೌಲರ್ಗಳ ನಟ್ಟು ಬೋಲ್ಟ್ ಟೈಟ್ ಮಾಡಿದ ರಜತ್; ವಿಡಿಯೋ ನೋಡಿ
Rajat Patidar: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 221 ರನ್ ಗಳಿಸಿತು. ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ತಂಡದ ಪರ ಸ್ಫೋಟಕ ಅರ್ಧಶತಕ ಬಾರಿಸಿದರು. ಪಾಟೀದಾರ್ ಅವರ ಸ್ಫೋಟಕ 64 ರನ್‌ಗಳು ಆರ್‌ಸಿಬಿಗೆ ಮಹತ್ವದ ತಿರುವು ನೀಡಿತು. ಬೌಲ್ಟ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಓವರ್‌ಗಳಲ್ಲಿ ಅವರ ಅದ್ಭುತ ಬ್ಯಾಟಿಂಗ್ ಗಮನ ಸೆಳೆಯಿತು.
ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಅರ್ಧಶತಕಗಳ ನೆರವಿನಿಂದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 221 ರನ್ ಕಲೆಹಾಕಿದೆ. ಅದರಲ್ಲೂ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ಗೆ ಬಂದ ನಾಯಕ ರಜತ್ ಪಾಟಿದರ್, ಮುಂಬೈ ಬೌಲರ್ಗಳ ಬೆವರಿಳಿಸಿ ಸ್ಫೋಟಕ ಅರ್ಧಶತಕ ಸಿಡಿಸಿದರು.
ರಜತ್ ತಮ್ಮ ಇನ್ನಿಂಗ್ಸ್ನಲ್ಲಿ ಎಸೆತಗಳನ್ನು ಎದುರಿಸಿ ಐದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 64 ರನ್ ಕಲೆಹಾಕಿದರು. ಹಾಗೆಯೇ ಜಿತೇಶ್ ಶರ್ಮಾ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಆಡಿದರು. ಈ ಪಂದ್ಯದಲ್ಲಿ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ವಿರುದ್ಧ ಬೌಂಡರಿಗಳ ಮಳೆಗರೆದ ಈ ಇಬ್ಬರು ತಂಡವನ್ನು 200 ರನ್ಗಳ ಗಡಿ ದಾಟಿಸಿದರು.
ಬೌಲ್ಟ್ ಎಸೆದ 16 ನೇ ಓವರ್ನಲ್ಲಿ ಜಿತೇಶ್ ಶರ್ಮಾ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರೆ, ರಜತ್ ಕೂಡ 1 ಸಿಕ್ಸರ್ ಬಾರಿಸಿದರು. ಈ ಓವರ್ನಿಂದ ಒಟ್ಟು 18 ರನ್ ಬಂದರೆ, ನಂತರದ ಓವರ್ನಲ್ಲಿ ರಜತ್ ಬೌಂಡರಿಗಳ ಮಳೆಗರೆದರು. 17ನೇ ಓವರ್ ಬೌಲ್ ಮಾಡಿದ ಹಾರ್ದಿಕ್ ಪಾಂಡ್ಯ ಈ ಓವರ್ನಲ್ಲಿ 23 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ರಜತ್ ಎರಡು ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರೆ ಕೊನೆಯ ಎಸೆತವನ್ನು ಜಿತೇಶ್ ಬೌಂಡರಿಗಟ್ಟಿದರು.

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
