‘ಕ್ಷಮೆ ಅನ್ನೋದು ಸಣ್ಣ ಪದ’; ಗೀತಾಗೆ ಸಾರಿ ಕೇಳಿ ಕಣ್ಣೀರು ಹಾಕಿದ ಶಿವರಾಜ್ಕುಮಾರ್
ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಹೋರಾಟದಲ್ಲಿ ಪತ್ನಿ ಗೀತಾ ಅವರ ಬೆಂಬಲ ಅಪಾರವಾಗಿತ್ತು. ಕ್ಯಾನ್ಸರ್ ಇರುವ ವಿಚಾರ ಗೊತ್ತಾದಾಗಿನಿಂದ ಚಿಕಿತ್ಸೆಯವರೆಗೆ ಅವರು ನಿರಂತರವಾಗಿ ಜೊತೆಯಲ್ಲಿದ್ದರು. ದುಃಖ ಮತ್ತು ಖುಷಿಯ ಕ್ಷಣಗಳಲ್ಲಿ ಗೀತಾ ಅವರ ಬೆಂಬಲ ಅವರಿಗೆ ಹೆಚ್ಚಿನ ಶಕ್ತಿ ತುಂಬಿತು. ಶಿವರಾಜ್ ಕುಮಾರ್ ಅವರು ತಮ್ಮ ಪತ್ನಿಯ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ.

ಗೀತಾ ಶಿವರಾಜ್ಕುಮಾರ್ ಅವರು ಪ್ರತಿ ಹಂತದಲ್ಲೂ ಪತಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಶಿವಣ್ಣನಿಗೆ ಬೇಸರ ಆದಾಗ, ದುಃಖ ಆದಾಗ ಅವರ ಪಕ್ಕದಲ್ಲಿ ನಿಂತಿದ್ದರು. ಅದೇ ರೀತಿ ಖುಷಿಯ ಕ್ಷಣವನ್ನು ಕೂಡ ಒಟ್ಟಾಗಿ ಕಳೆದಿದ್ದಾರೆ. ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡುವಾಗ ಬೆಂಬಲಕ್ಕೆ ನಿಂತಿದ್ದು ಗೀತಾ. ಇದನ್ನು ಶಿವರಾಜ್ಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಪತ್ನಿಗೆ ಅವರು ಧನ್ಯವಾದ ಹೇಳಿದ್ದಾರೆ.
ಬಿ. ಗಣಪತಿ ಅವರ ಯ್ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಹಾಗೂ ಗೀತಕ್ಕ ಅವರು ಮಾತನಾಡಿದ್ದಾರೆ. ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ವಿಚಾರ ಗೊತ್ತಾಗಿದ್ದು ಹೇಗೆ, ಇದನ್ನು ಹೇಗೆ ಹ್ಯಾಂಡಲ್ ಮಾಡಲಾಯಿತು ಎಂಬುದನ್ನು ವಿವರಿಸಿದ್ದಾರೆ. ಈ ಪರಿಸ್ಥಿತಿಯನ್ನು ಅವರು ನಿರ್ವಹಿಸಿದ ರೀತಿ ಶಿವಣ್ಣನಿಗೆ ಇಷ್ಟ ಆಗಿದೆ.
ಆರಂಭದಲ್ಲಿ ಕ್ಯಾನ್ಸರ್ ಇರುವ ವಿಚಾರವನ್ನು ಶಿವರಾಜ್ಕುಮಾರ್ ಅವರಿಂದ ಮುಚ್ಚಿಡಲಾಗಿತ್ತು. ಅವರು ಇದನ್ನು ಹೇಗೆ ಸ್ವೀಕರಿಸುತ್ತಾರೇನೋ ಎನ್ನುವ ಭಯ ಗೀತಾ ಅವರನ್ನು ಕಾಡಿತ್ತು. ಹೀಗಾಗಿ ಆರಂಭದಲ್ಲಿ ಇದನ್ನು ಹೇಳಿರಲಿಲ್ಲ. ಕೊನೆಗೆ ಕಿಮೋ ಥೆರಪಿ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾದಾಗ ಶಿವರಾಜ್ಕುಮಾರ್ಗೆ ಕ್ಯಾನ್ಸರ್ ಇರುವ ವಿಚಾರವನ್ನು ಹೇಳಲೇ ಬೇಕಾಯಿತು. ಆ ಬಳಿಕ ಹಂತ ಹಂತವಾಗಿ ಚಿಕಿತ್ಸೆಗಳು ನಡೆದವು.
ಈ ಎಲ್ಲಾ ಸಂದರ್ಭಗಳಲ್ಲಿ ಶಿವರಾಜ್ಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದು ಗೀತಾ ಅವರು. ಇದನ್ನು ಶಿವರಾಜ್ಕುಮಾರ್ ನೆನಪಿಸಿಕೊಂಡಿದ್ದಾರೆ. ‘ಎಲ್ಲಾ ಸ್ಥಾನವನ್ನು ಪತ್ನಿ ತುಂಬೋಕೆ ಆಗಲ್ಲ. ಆದರೆ, ಗೀತಾ ಅದನ್ನು ತುಂಬಿದ್ದಾಳೆ. ನಾನು ಹಲವು ತಪ್ಪನ್ನು ಮಾಡಿದ್ದೇನೆ. ನಾನು ಫಿಟ್ ಹೌದೋ ಅಲ್ಲವೋ ಅನಿಸುತ್ತದೆ’ ಎನ್ನುತ್ತಲೇ ಶಿವಣ್ಣನಿಗೆ ಕಣ್ಣೀರು ಬಂತು.
‘ಕ್ಷಮೆ ಕೇಳೋದು ಸಹಜ. ಆದರೆ, ಯೋಚಿಸಿದಾಗ ಅರ್ಥ ಆಳಕ್ಕೆ ಹೋಗುತ್ತದೆ. ಈ ಬೆಂಬಲ ತುಂಬಾನೇ ಗಟ್ಟಿಯಾಗಿತ್ತು. ತಾಯಿ ಆಗಿ, ಗೆಳತಿಯಾಗಿ, ಪತ್ನಿಯಾಗಿ ಅವರು ಬೆಂಬಲಿಸಿದ್ದಾರೆ’ ಎಂದು ಶಿವರಾಜ್ಕುಮಾರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್ಕುಮಾರ್ಗೂ ಹೇಳಿರಲಿಲ್ಲ ಗೀತಾ; ಗೊತ್ತಾಗಿದ್ದು ಹೇಗೆ?
ಶಿವರಾಜ್ಕುಮಾರ್ ಈಗಾಗಲೇ ನಿಧಾನವಾಗಿ ಬಣ್ಣದ ಲೋಕದ ಕೆಲಸ ಆರಂಭಿಸಿದ್ದಾರೆ. ‘ಸರಿಗಮಪ’ ವೇದಿಕೆಗೆ ಅತಿಥಿಯಾಗಿ ಅವರು ಆಗಮಿಸಿದ್ದು, ಇಂದು (ಫೆಬ್ರವರಿ 1) ಹಾಗೂ ನಾಳೆ (ಫೆಬ್ರವರಿ 2) ಈ ಎಪಿಸೋಡ್ ಪ್ರಸಾರ ಕಾಣಲಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.