ಜಬರ್ದಸ್ಥ್ ಕಲಾವಿದರಿಂದ ‘ಕೆಜಿಎಫ್’ ಸ್ಪೂಪ್, ನಕ್ಕು ಸುಸ್ತಾದ ಜಡ್ಜ್ಗಳು
KGF movie Spoof: ತೆಲುಗಿನ ಕಾಮಿಡಿ ರಿಯಾಲಿಟಿ ಶೋ ‘ಜಬರ್ದಸ್ತ್’ನಲ್ಲಿ ಕನ್ನಡದ ಬಲು ಜನಪ್ರಿಯ ಮತ್ತು ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್’ನ ಸ್ಪೂಫ್ ಮಾಡಲಾಗಿದೆ. ‘ಕೆಜಿಎಫ್’ ಸಿನಿಮಾದ ಹಲವು ಮೇನ್ ದೃಶ್ಯಗಳನ್ನು ಇರಿಸಿಕೊಂಡು ಅವನ್ನು ಹಾಸ್ಯದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ.

ತೆಲುಗು ಟಿವಿ ಲೋಕದಲ್ಲಿ ಕಾಮಿಡಿ ರಿಯಾಲಿಟಿ ಶೋಗಳು ಬಹಳ ಜನಪ್ರಿಯ. ಕಾಮಿಡಿ ರಿಯಾಲಿಟಿ ಶೋಗಳಿಂದ ಕೆಲವು ಅದ್ಭುತ ಪ್ರತಿಭೆಗಳು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿವೆ. ಜನಪ್ರಿಯ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಜಬರ್ದಸ್ಥ್ ಬಹಳ ಜನಪ್ರಿಯ. ಕಾಲ ಕಾಲಕ್ಕೆ ಕೆಲವು ಅತ್ಯುತ್ತಮ ಹಾಸ್ಯ ನಟರನ್ನು ಈ ರಿಯಾಲಿಟಿ ಶೋ ತೆಲುಗು ಚಿತ್ರರಂಗಕ್ಕೆ ನೀಡುತ್ತಲೇ ಬಂದಿದೆ. ಹೊಸ ರೀತಿಯ ಕಂಟೆಂಟ್ ಅನ್ನು ಈ ಕಾರ್ಯಕ್ರಮ ನೀಡುತ್ತಾ ಬಂದಿದೆ. ಇತ್ತೀಚೆಗೆ ಈಟಿವಿಯ ಜಬರ್ದಸ್ಥ್ ಕಾರ್ಯಕ್ರಮದಲ್ಲಿ ಕನ್ನಡದ ಬಲು ಜನಪ್ರಿಯ ಸಿನಿಮಾ ‘ಕೆಜಿಎಫ್’ನ ಸ್ಪೂಫ್ ಅಥವಾ ಹಾಸ್ಯಮಯ ನಕಲು ಮಾಡಲಾಗಿದೆ. ಈ ಕೆಜಿಎಫ್ ಸ್ಪೂಫ್ ಯೂಟ್ಯೂಬ್ನಲ್ಲಿ ವೈರಲ್ ಆಗುತ್ತಿದೆ.
ಬುಲೆಟ್ ಭಾಸ್ಕರ್ ತಂಡದವರು ‘ಕೆಜಿಎಫ್’ ಸ್ಪೂಫ್ ಮಾಡಿದ್ದು, ರಾಕಿಭಾಯ್, ರಾಕಿಭಾಯ್ನ ತಾಯಿ, ನಾಯಕಿ ಶ್ರೀನಿಧಿ ಶೆಟ್ಟಿ, ಅಧೀರ ಅವರ ಪಾತ್ರಗಳನ್ನು ಇರಿಸಿಕೊಂಡು ಸ್ಪೂಫ್ ಮಾಡಲಾಗಿದೆ. ರಾಕಿಭಾಯ್ ತಾಯಿ ಜಗತ್ತಿನ ಎಲ್ಲ ಚಿನ್ನವನ್ನು ಪುಟ್ಟ ಮಗನ ಬಳಿ ಕೇಳುವುದು, ಅದಕ್ಕೆ ರಾಕಿಭಾಯ್ ಅಷ್ಟೋಂದು ಚಿನ್ನ ಎಲ್ಲಿ ಇಟ್ಟುಕೊಳ್ಳುತ್ತೀಯ ಎಂದು ಕೇಳುವುದು, ಹೀಗೆ ‘ಕೆಜಿಎಫ್’ನ ಹಲವು ಡೈಲಾಗ್ಗಳನ್ನು ತಮಾಷೆಯ ರೀತಿಯಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ:ಬಾಲಿವುಡ್ಗೆ ಕಾಲಿಟ್ಟ ‘ಕೆಜಿಎಫ್’ ನಟಿಯ ಪುತ್ರಿ, ಜಾನ್ಹವಿ, ಸಾರಾಗೆ ನಡುಕ
ನಾಯಕಿ, ರಾಕಿಭಾಯ್ ಬಳಿ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದಾಗ ರಾಕಿಭಾಯ್, ಹೆಲಿಕಾಪ್ಟರ್ ತರಿಸುವ ದೃಶ್ಯ ‘ಕೆಜಿಎಫ್’ನಲ್ಲಿದೆ. ಆ ದೃಶ್ಯವನ್ನು ಜಬರ್ದಸ್ತ್ನಲ್ಲಿ ಕಾಮಿಡಿ ರೀತಿಯಲ್ಲಿ ತೋರಿಸಲಾಗಿದ್ದು, ನಾಯಕಿ ನನಗೆ ಸೆಖೆ ಆಗುತ್ತಿದೆ ಎಂದಾಗ ಸೈಕಲ್ ಟಯರ್ಗೆ ಗಾಳಿ ಹೊಡೆಯುವ ಪಂಪ್ ತರಿಸಿ ಅದರಿಂದ ನಟಿಗೆ ಗಾಳಿ ಹೊಡೆಯಲಾಗುತ್ತದೆ. ಇಂಥಹಾ ಹಲವು ಹಾಸ್ಯಮಯ ದೃಶ್ಯಗಳು ‘ಕೆಜಿಎಫ್’ ಸ್ಪೂಫ್ನಲ್ಲಿವೆ.
ಈ ಹಿಂದೆಯೂ ಸಹ ಹಲವು ಬಾರಿ ‘ಕೆಜಿಎಫ್’ ಸಿನಿಮಾದ ಸ್ಪೂಫ್ಗಳನ್ನು ಮಾಡಲಾಗಿದೆ. ವಿಶೇಷವಾಗಿ ತಾಯಿ, ಮಗನ ಬಳಿ ಚಿನ್ನ ಕೇಳುವ ದೃಶ್ಯವನ್ನು ತಮಾಷೆ ಮಾಡಲಾಗಿದೆ. ಕೆಲವು ಸಿನಿಮಾಗಳಲ್ಲಿಯೂ ಸಹ ರಾಕಿಭಾಯ್ ಪಾತ್ರವನ್ನು ತಮಾಷೆಗೆ ಬಳಸಿಕೊಳ್ಳಲಾಗಿದೆ. ತೆಲುಗು ಸಿನಿಮಾ ನಿರ್ದೇಶಕನೊಬ್ಬ ಸಂದರ್ಶನವೊಂದರಲ್ಲಿ ‘ಕೆಜಿಎಫ್’ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ