Indian Economy: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ; 5 ಪ್ರಮುಖ ಅಂಶಗಳು ಇಲ್ಲಿವೆ

ಭಾರತದ ಆರ್ಥಿಕತೆಯು ಬಲವಾದ ಚೇತರಿಕೆಯ ಹಾದಿಯಲ್ಲಿದೆ ಎಂದು ತೋರಿಸುವ ಐದು ಸಂಕೇತಗಳ ವಿವರ ಹೀಗಿದೆ.

Indian Economy: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ; 5 ಪ್ರಮುಖ ಅಂಶಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: ಸುಷ್ಮಾ ಚಕ್ರೆ

Updated on: Nov 03, 2021 | 6:57 PM

ನವದೆಹಲಿ: ಭಾರತದ ಆರ್ಥಿಕತೆಯು ಕೊವಿಡ್ ಹಾಗೂ ಲಾಕ್ ಡೌನ್ ಸಂಕಷ್ಟದ ವೇಳೆಯಲ್ಲಿ ಭಾರೀ ಕುಸಿದಿತ್ತು. ಆದರೆ, ಈಗ ಭಾರತದ ಆರ್ಥಿಕತೆ ಚೇತರಿಸಿಕೊಂಡು, ಬೆಳವಣಿಗೆಯ ಹಾದಿಯಲ್ಲಿದೆ. ಇದನ್ನು ತೋರಿಸುವ ಪ್ರಮುಖ ಐದು ಸೂಚ್ಯಂಕಗಳ ವಿವರ ಇಲ್ಲಿದೆ. ಭಾರತೀಯ ಆರ್ಥಿಕತೆಯು ಬಲವಾದ ಚೇತರಿಕೆಯ ಹಾದಿಯಲ್ಲಿದೆ. ಉತ್ಪಾದನೆಗಾಗಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ಮತ್ತು ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಹೆಚ್ಚಳವು ಭಾರತೀಯ ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿರುವ ಎರಡು ಸಂಕೇತಗಳಾಗಿವೆ.

ಅಕ್ಟೋಬರ್‌ನಲ್ಲಿ ಉತ್ಪಾದನೆಗಾಗಿ PMI 55.9ರಷ್ಟಿದೆ, ಫೆಬ್ರವರಿ 2021ರಿಂದ ಪಿಎಂಐ ಅತ್ಯಧಿಕವಾಗಿದೆ. ಇನ್ನೂ 2021ರ ಆಕ್ಟೋಬರ್ ತಿಂಗಳಲ್ಲಿ GST ಸಂಗ್ರಹ 1.3 ಲಕ್ಷ ಕೋಟಿ ರೂ.ಗಳಾಗಿವೆ. 2017ರಲ್ಲಿ ಪರೋಕ್ಷ ತೆರಿಗೆಯನ್ನು ಜಾರಿಗೊಳಿಸಿದ ನಂತರ ಇದು ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ.  ಭಾರತದ ಆರ್ಥಿಕತೆಯು ಬಲವಾದ ಚೇತರಿಕೆಯ ಹಾದಿಯಲ್ಲಿದೆ ಎಂದು ತೋರಿಸುವ ಐದು ಸಂಕೇತಗಳ ವಿವರ ಹೀಗಿದೆ.

1. ಪಿಎಂಐ ಡೇಟಾ: ಅಕ್ಟೋಬರ್‌ನಲ್ಲಿ PMI ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿದ್ದ 53.7ರಿಂದ 55.9ಕ್ಕೆ ಏರಿತು. 50 ಮತ್ತು ಅದಕ್ಕಿಂತ ಹೆಚ್ಚಿನ ಸೂಚ್ಯಂಕ ಆರ್ಥಿಕ ಚಟುವಟಿಕೆಯಲ್ಲಿ ವಿಸ್ತರಣೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ. ಸೂಚ್ಯಂಕ 50 ಅಂಕಗಳಿಗಿಂತ ಕಡಿಮೆಯಾಗಿದ್ದಾಗ ಆರ್ಥಿಕತೆಯು ಕುಸಿಯುತ್ತಿದೆ ಎಂದರ್ಥ. PMI ಉತ್ಪಾದನೆಯು ಸತತ ಮೂರು ತಿಂಗಳವರೆಗೆ ಹೆಚ್ಚಾಯಿತು, ಅಕ್ಟೋಬರ್‌ನಲ್ಲಿ ಫೆಬ್ರವರಿಯಿಂದ 57.5ರಷ್ಟಿದ್ದಾಗಿನಿಂದ ಅತ್ಯಧಿಕ ಮೌಲ್ಯವಾಗಿದೆ.

“ಸುಧಾರಿತ ಮಾರುಕಟ್ಟೆ ವಿಶ್ವಾಸದ ವರದಿಗಳ ನಡುವೆ, ಗ್ರಾಹಕರಲ್ಲಿ ಹೆಚ್ಚುತ್ತಿರುವ ಅಗತ್ಯತೆಗಳು ಮತ್ತು ಯಶಸ್ವಿ ಮಾರ್ಕೆಟಿಂಗ್, ಅಕ್ಟೋಬರ್‌ನಲ್ಲಿ ಹೊಸ ಆರ್ಡರ್‌ಗಳು ವಿಸ್ತರಿಸುತ್ತಲೇ ಇದ್ದವು. ಏರುಪೇರು ತೀವ್ರವಾಗಿದೆ ಮತ್ತು ಏಳು ತಿಂಗಳಲ್ಲೇ ಅತ್ಯಂತ ವೇಗವಾಗಿದೆ ಎಂದು PMI ಸಮೀಕ್ಷೆಗಳನ್ನು ನಡೆಸುವ ಸಂಸ್ಥೆ IHS-Markit ಹೇಳಿದೆ. ಕಾರ್ಖಾನೆಯ ಉತ್ಪಾದನೆಯು ಮಾರ್ಚ್‌ನಿಂದ ಪ್ರಬಲವಾಗಿದೆ.

2. ತೆರಿಗೆ ಸಂಗ್ರಹ: ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.3 ಲಕ್ಷ ಕೋಟಿ ರೂ.ಗಳಾಗಿದ್ದು, ಪರೋಕ್ಷ ತೆರಿಗೆಯನ್ನು ಜಾರಿಗೊಳಿಸಿದ ನಂತರ ಇದು ಎರಡನೇ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. 2021ರ ಏಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂಪಾಯಿಗಳಷ್ಟು ಅತಿ ಹೆಚ್ಚು ಜಿಎಸ್‌ಟಿ ಆದಾಯವನ್ನು ಸಂಗ್ರಹಿಸಲಾಗಿದೆ. ಅಕ್ಟೋಬರ್ ತಿಂಗಳ ಆದಾಯ ಸಂಗ್ರಹವು ಕಳೆದ ಆರ್ಥಿಕ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 36 ಪ್ರತಿಶತ ಹೆಚ್ಚಾಗಿದೆ.

“ಇದು ಆರ್ಥಿಕ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿದೆ” ಎಂದು ನವೆಂಬರ್ 1ರಂದು ಹಣಕಾಸು ಸಚಿವಾಲಯ ಹೇಳಿದೆ. ಅಕ್ಟೋಬರ್‌ನ ಜಿಎಸ್‌ಟಿ ಸಂಗ್ರಹಗಳು ಸೆಪ್ಟೆಂಬರ್‌ನಲ್ಲಿ ಒಟ್ಟಾರೆ ಹಣಕಾಸಿನ ಪರಿಸ್ಥಿತಿಯಲ್ಲಿ ಪಿಕ್-ಅಪ್ ಅನ್ನು ಪ್ರತಿಬಿಂಬಿಸುತ್ತವೆ. ಹಿಂದಿನ ತಿಂಗಳಲ್ಲಿ ಆದಾಯ ಸಂಗ್ರಹಣೆಗಳು ಮತ್ತು ಕೇಂದ್ರದ ಖರ್ಚು ಎರಡೂ ಹೆಚ್ಚಿವೆ.

3. ರಫ್ತು ಚೇತರಿಕೆ: ಚೇತರಿಕೆಯ ಮತ್ತೊಂದು ಬಲವಾದ ಸೂಚಕವೆಂದರೆ ಮರ್ಚಂಡೈಸ್ ರಫ್ತುಗಳಲ್ಲಿನ ಬೆಳವಣಿಗೆ. ಇದು ಅಕ್ಟೋಬರ್ 2021ರಲ್ಲಿ 35.47 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಶೇ.42.33ರಷ್ಟು ರಫ್ತು ಬೆಳವಣಿಗೆಯಾಗಿದೆ. ಅಕ್ಟೋಬರ್ 2020ರಲ್ಲಿ ರಫ್ತು 24.92 ಬಿಲಿಯನ್ ಡಾಲರ್​ನಷ್ಟಿತ್ತು.

4. ಷೇರು ಮಾರುಕಟ್ಟೆ ಚೇತರಿಕೆ: ಭಾರತೀಯ ಈಕ್ವಿಟಿ ಮಾರುಕಟ್ಟೆಯು ಕಳೆದ 19 ತಿಂಗಳುಗಳಲ್ಲಿ ಚೇತರಿಕೆಯಾಗಿದೆ. ಈ ವರ್ಷ ವಿಶ್ವದ ಅತ್ಯುತ್ತಮ ಪ್ರದರ್ಶನದ ಷೇರು ಮಾರುಕಟ್ಟೆಗಳಲ್ಲಿ ಭಾರತದ ಷೇರು ಮಾರುಕಟ್ಟೆಯು ಒಂದಾಗಿದೆ. ಬ್ಲೂಮ್‌ಬರ್ಗ್ ಸಂಗ್ರಹಿಸಿದ ಸೂಚ್ಯಂಕದ ಪ್ರಕಾರ, ಭಾರತದ ಮಾರುಕಟ್ಟೆ ಬಂಡವಾಳೀಕರಣವು ಈ ವರ್ಷ ಅಕ್ಟೋಬರ್‌ವರೆಗೆ 37 ಶೇಕಡಾ ಏರಿಕೆಯಾಗಿ 3.46 ಟ್ರಿಲಿಯನ್‌ ಡಾಲರ್​ಗೆ ತಲುಪಿದೆ. 1 ಟ್ರಿಲಿಯನ್ ಡಾಲರ್ ಅಂದರೆ 74 ಲಕ್ಷ ಕೋಟಿ ರೂಪಾಯಿ. ಷೇರು ಪೇಟೆಯ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್ ಮಾರ್ಚ್ 2020ರಲ್ಲಿ 130 ಪ್ರತಿಶತಕ್ಕಿಂತ ಹೆಚ್ಚು ಏರಿತು.

ಮಾರುಕಟ್ಟೆಯ ರ್ಯಾಲಿಯು ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ನೀಡುವ ಮೂಲಕ ಶ್ರೀಮಂತರು ಎಂಬ ಭಾವನೆಯನ್ನು ನೀಡಿದೆ.

5. ವಿದ್ಯುತ್ ಬಳಕೆ: ವಿದ್ಯುತ್ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ದೇಶದ ವಿದ್ಯುತ್ ಬಳಕೆಯು ಅಕ್ಟೋಬರ್‌ನಲ್ಲಿ 4.8 ಪ್ರತಿಶತದಷ್ಟು 114.37 ಬಿಲಿಯನ್ ಯುನಿಟ್‌ಗಳಿಗೆ (ಬಿಯು) ತಲುಪಿದೆ. ಅಕ್ಟೋಬರ್ 2020 ರಲ್ಲಿ, ವಿದ್ಯುತ್ ಬಳಕೆ 109.17 BU ಆಗಿತ್ತು. ಕೋವಿಡ್-19 ನಿರ್ಬಂಧಗಳ ಸಡಿಲಗೊಳಿಸಿದ ನಂತರ ಹೆಚ್ಚಿನ ವಿದ್ಯುತ್ ಬಳಕೆಯು ಆರ್ಥಿಕ ಚಟುವಟಿಕೆಗಳಲ್ಲಿ ಸುಧಾರಣೆಯ ಸಂಕೇತವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಈ ದತ್ತಾಂಶ ಸೂಚಕಗಳ ಹೊರತಾಗಿಯೂ, ವಿಮಾನ ನಿಲ್ದಾಣಗಳು, ಹೋಟೆಲ್‌ಗಳು, ಪ್ರವಾಸಿ ಸ್ಥಳಗಳಲ್ಲಿ ವ್ಯಾಪಾರದ ಏರಿಕೆ ಮತ್ತು ಹೆಚ್ಚುತ್ತಿರುವ ಗ್ರಾಹಕ ಚಟುವಟಿಕೆಗಳ ಮೂಲಕ ಆರ್ಥಿಕ ಚಟುವಟಿಕೆಯ ಬೆಳವಣಿಗೆಯನ್ನು ಕಾಣಬಹುದು.

ಇದನ್ನೂ ಓದಿ: ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್​ನ ಗೀತಾ ಗೋಪಿನಾಥ್

ಯುಪಿಐ ವಹಿವಾಟಿನಲ್ಲಿ ಗಮನಾರ್ಹ ಪ್ರಗತಿ: ಆರ್ಥಿಕತೆ ಮುನ್ನಡೆಯ ದ್ಯೋತಕ ಎಂದ ಸಚಿವ ಅಶ್ವಿನಿ ವೈಷ್ಣವ್

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ