AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷಗಳಲ್ಲಿ 10,000 ಇ-ಚಾರ್ಜಿಂಗ್ ಘಟಕ ಸ್ಥಾಪಿಸಲು ಇಂಡಿಯನ್ ಆಯಿಲ್ ನಿರ್ಧಾರ

ಭಾರತವು 2070ರ ವೇಳೆಗೆ ಶೂನ್ಯ ಇಂಗಾಲ ಗುರಿ ಮುಟ್ಟಬೇಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಐಒಸಿ ಈ ಮಹತ್ವದ ಘೋಷಣೆ ಮಾಡಿದೆ.

3 ವರ್ಷಗಳಲ್ಲಿ 10,000 ಇ-ಚಾರ್ಜಿಂಗ್ ಘಟಕ ಸ್ಥಾಪಿಸಲು ಇಂಡಿಯನ್ ಆಯಿಲ್ ನಿರ್ಧಾರ
ಇಂಡಿಯನ್ ಆಯಿಲ್ ಕಾರ್ಪೊರೇಷನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 03, 2021 | 7:12 PM

ದೆಹಲಿ: ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮುಂದಿನ ಮೂರು ವರ್ಷಗಳಲ್ಲಿ ಸುಮಾರು 10,000 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಭಾರತವು 2070ರ ವೇಳೆಗೆ ಶೂನ್ಯ ಇಂಗಾಲ ಗುರಿ ಮುಟ್ಟಬೇಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಐಒಸಿ ಈ ಮಹತ್ವದ ಘೋಷಣೆ ಮಾಡಿದೆ.

ಭಾರತದಲ್ಲಿ 2030ರ ಹೊತ್ತಿಗೆ ಇಂಧನ ಬಳಕೆಯಲ್ಲಿ ಶೇ 50ರಷ್ಟು ಹಸಿರು ಇಂಧನ ಬಳಕೆಯಾಗುತ್ತಿರುತ್ತದೆ. ಈ ಮೊದಲು ಈ ಗುರಿ ಶೇ 38 ಇತ್ತು. ಈ ಸಂಬಂಧದ ಹೇಳಿಕೆಯನ್ನು ಪ್ರಧಾನಿ ಸೋಮವಾರ ನೀಡಿದ್ದರು. ಇದರಿಂದ ಹಲವು ಲಕ್ಷ ಟನ್​ಗಳಷ್ಟು ಇಂಗಾಲ ವಾತಾವರಣ ಸೇರುವುದು ತಪ್ಪಿದಂತೆ ಆಗುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಭಾರತದ ಒಟ್ಟು ತೈಲ ಸಂಸ್ಕರಣೆಯಲ್ಲಿ ಮೂರನೇ ಒಂದರಷ್ಟು ಪಾಲು ಹೊಂದಿದೆ. ಭಾರತದಲ್ಲಿ ಪ್ರತಿದಿನ ಸರಾಸರಿ 50 ಲಕ್ಷ ಬ್ಯಾರೆಲ್ ತೈಲ ಸಂಸ್ಕರಣೆಯಾಗುತ್ತದೆ. 2050ರ ಹೊತ್ತಿಗೆ ವಿಶ್ವದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಬಳಕೆಯನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಹಲವು ದೇಶಗಳು ಹೇಳಿಕೆಗಳನ್ನು ಹೊರಡಿಸಿವೆ.

ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲು ನಮ್ಮ ಸಂಸ್ಕರಣಾ ಘಟಕಗಳು ಮುಂದಾಗಿವೆ. ಈ ಸಂಬಂಧ ಶೀಘ್ರ ಘೋಷಣೆ ಹೊರಬೀಳಲಿದೆ ಎಂದು ಐಒಸಿ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗ್ಯಾಸೊಲಿನ್ ಅಥವಾ ವೈಮಾನಿಕ ಇಂಧನ ಬಳಕೆ ಕಡಿತಗೊಳ್ಳಲು ಇನ್ನೂ ಸಾಕಷ್ಟು ಸಮಯಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಥುರ ಮತ್ತು ಪಾಣಿಪತ್ ಸಂಸ್ಕರಣಾ ಕೇಂದ್ರಗಳಲ್ಲಿ ಪರಿಸರ ಸ್ನೇಹಿ ಜಲಜನಕ ಬಳಸಲು ನಿರ್ಧರಿಸಲಾಗಿದೆ. ಸಂಸ್ಕರಣಾ ಘಟಕಗಳ ಸಾಮರ್ಥ್ಯ ವೃದ್ಧಿಗೂ ಪರಿಸರ ಸ್ನೇಹಿ ವಿಧಾನದಲ್ಲಿ ಉತ್ಪಾದನೆಯಾದ ವಿದ್ಯುತ್ ಬಳಸಲಾಗುವುದು ಎಂದು ಘೋಷಿಸಿದರು. ಎಲ್ಲ ಸಂಸ್ಕರಣಾ ಘಟಕಗಳು ಮತ್ತು ರಸಗೊಬ್ಬರ ಉತ್ಪಾದಕರು 2030ರ ವೇಳೆಗೆ ಪರಿಸರ ಸ್ನೇಹಿ ಜಲಜನಕವನ್ನೇ ಬಳಸಬೇಕು ಎಂದು ಭಾರತದ ನ್ಯಾಷನಲ್ ಹೈಡ್ರೊಜನ್ ಮಿಷನ್ ಸೂಚಿಸುತ್ತದೆ.

ಇಂಧನ ಬಳಕೆ ಕಡಿಮೆ ಮಾಡಬೇಕು ಎನ್ನುವ ಭಾರತ ಸರ್ಕಾರದ ಗುರಿಯು ಐಒಸಿಯ ವಿಸ್ತರಣಾ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತವು ವಿಶ್ವದ ಒಟ್ಟು ಇಂಧನ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಪಳೆಯುಳಿಕೆ ಮೂಲದ ಇಂಧನಗಳೂ ಸೇರಿದಂತೆ ಎಲ್ಲ ಬಗೆಯ ಇಂಧನ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Petrol Price Today: ಸತತ ಏಳು ದಿನಗಳಿಂದ ಏರಿಕೆ ಕಂಡಿದ್ದ ಪೆಟ್ರೋಲ್​ ಡೀಸೆಲ್​ ದರದಲ್ಲಿ ಇಂದು ಯಾವುದೇ ಏರಿಳಿತಗಳಿಲ್ಲ! ಇದನ್ನೂ ಓದಿ: Video: ಗ್ಲಾಸ್ಗೋದಿಂದ ಭಾರತಕ್ಕೆ ಹೊರಟ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ವಿದಾಯ; ತಾವೂ ಡ್ರಮ್​ ಬಾರಿಸಿ, ಮಕ್ಕಳೊಂದಿಗೆ ಖುಷಿಪಟ್ಟ ಮೋದಿ

Published On - 7:12 pm, Wed, 3 November 21

ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!