Video: ಗ್ಲಾಸ್ಗೋದಿಂದ ಭಾರತಕ್ಕೆ ಹೊರಟ ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ವಿದಾಯ; ತಾವೂ ಡ್ರಮ್ ಬಾರಿಸಿ, ಮಕ್ಕಳೊಂದಿಗೆ ಖುಷಿಪಟ್ಟ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ವಾಪಸಾಗಲೆಂದು ಗ್ಲಾಸ್ಗೋದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಂತೆ ಲಯಬದ್ಧವಾದ ಡೋಲು ವಾದನ, ಉತ್ಸಾಹ ಭರಿತ ಘೋಷಣೆಗಳಿಂದ ಅವರನ್ನು ಅಲ್ಲಿ ಸ್ವಾಗತಿಸಲಾಯಿತು.
ಗ್ಲಾಸ್ಗೋ: ಕೋಪ್ 26 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸ್ಕಾಟ್ಲೆಂಡ್ನ ಗ್ಲಾಸ್ಗೋಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಅಲ್ಲಿಂದ ಹೊರಟಿದ್ದಾರೆ. ಅವರು ಅಲ್ಲಿಂದ ಹೊರಟ ಹೊತ್ತಲ್ಲಿ ಅಲ್ಲಿರುವ ಭಾರತೀಯ ಸಮುದಾಯದವರು ಡ್ರಮ್ ಬಾರಿಸಿ ಬೀಳ್ಕೊಡುಗೆ ಮಾಡಿದ್ದಾರೆ. ಅವರೊಂದಿಗೆ ಪ್ರಧಾನಿ ಮೋದಿ ಕೂಡ ಡ್ರಮ್ ಬಾರಿಸಿದ್ದಾರೆ. ಹಾಗೇ, ಭಾರತೀಯ ಸಮುದಾಯದವರೊಟ್ಟಿಗೆ ಸಂವಾದವನ್ನೂ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ವಾಪಸಾಗಲೆಂದು ಗ್ಲಾಸ್ಗೋದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಂತೆ ಲಯಬದ್ಧವಾದ ಡೋಲು ವಾದನ, ಉತ್ಸಾಹ ಭರಿತ ಘೋಷಣೆಗಳಿಂದ ಅವರನ್ನು ಅಲ್ಲಿ ಸ್ವಾಗತಿಸಲಾಯಿತು. ಅಲ್ಲಿ ಭರ್ಜರಿ ಜನರು ನೆರೆದಿದ್ದರು. ಭಾರತೀಯ ಸಂಪ್ರದಾಯದ ಉಡುಗೆ, ಪೇಟಗಳನ್ನು ಧರಿಸಿ ಬಂದಿದ್ದರು. ಪ್ರಧಾನಿ ಮೋದಿಯವರೊಟ್ಟಿಗೆ ಮಾತುಕತೆ ನಡೆಸಿದ ಅವರು, ಸಾಂಪ್ರದಾಯಿಕವಾಗಿಯೇ ನರೇಂದ್ರ ಮೋದಿಯವರಿಗೆ ವಿದಾಯ ಹೇಳಿದರು.
ಅಲ್ಲಿ ನೆರೆದಿದ್ದವರ ಕೈ ಕುಲುಕಿದ ಪ್ರಧಾನಿ ಮೋದಿ ಭಾರತೀಯರಿಗೆ ಶುಭಕೋರಿದರು. ತಾವೂ ಕೂಡ ಮೂರ್ನಾಲ್ಕು ಬಾರಿ ಡ್ರಮ್ ಬಾರಿಸಿ ಸಂತೋಷ ವ್ಯಕ್ತಪಡಿಸಿದರು. ಪುಟ್ಟ ಮಕ್ಕಳ ತಲೆಯ ಮೇಲೆ ಪ್ರೀತಿಯಿಂದ ತಟ್ಟಿದರು..ಅವರ ಕೈಯನ್ನೂ ಹಿಡಿದುಕೊಂಡರು.
#WATCH PM Modi plays the drums along with members of the Indian community gathered to bid him goodbye before his departure for India from Glasgow, Scotland
(Source: Doordarshan) pic.twitter.com/J1zyqnJzBW
— ANI (@ANI) November 2, 2021
ರೋಮ್ನ ಜಿ20 ಶೃಂಗಸಭೆ ಬಳಿಕ ಯುಕೆಗೆ ತೆರಳಿದ್ದ ಪ್ರಧಾನಿ ಮೋದಿ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಶೃಂಗಸಭೆ(ಯುಎನ್ ಕೋಪ್ 26)ಯಲ್ಲಿ ಪಾಲ್ಗೊಂಡರು. ಅಲ್ಲಿ ಅವರು ಭಾರತದ 5 ಬದ್ಧತೆಗಳನ್ನ ಘೋಷಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ 2070ರ ಹೊತ್ತಿಗೆ ಭಾರತವನ್ನು ಸಂಪೂರ್ಣವಾಗಿ ಇಂಗಾಲ ಮುಕ್ತ ದೇಶವನ್ನಾಗಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Puneeth Rajkumar: ಇಂದಿನಿಂದ ಅಪ್ಪು ದರ್ಶನಕ್ಕೆ ಅವಕಾಶ; ನವೆಂಬರ್ 16ಕ್ಕೆ ನಡೆಯಲಿದೆ ಪುನೀತ್ ನಮನ ಕಾರ್ಯಕ್ರಮ