ದೆಹಲಿಯಲ್ಲಿ ಕೊರೊನಾ ಮಧ್ಯೆ ಮಿತಿಮೀರಿದ ಡೆಂಗ್ಯೂ ಪ್ರಕರಣ; 4 ವರ್ಷಗಳಲ್ಲೇ ಅತಿ ಹೆಚ್ಚು ಕೇಸ್​ ದಾಖಲು

ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಇದಕ್ಕೆ ಸಂಬಂಧಪಟ್ಟ ಡಾಟಾವನ್ನು ದಕ್ಷಿಣ ದೆಹಲಿ ಮುನ್ಸಿಪಲ್​ ಕಾರ್ಪೋರೇಶನ್​ ಸೋಮವಾರ ಬಿಡುಗಡೆ ಮಾಡಿದೆ. ಅದರ ಅನ್ವಯ ಅಕ್ಟೋಬರ್​ 30ರವರೆಗೆ ದೆಹಲಿಯಲ್ಲಿ 1537 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. 

ದೆಹಲಿಯಲ್ಲಿ ಕೊರೊನಾ ಮಧ್ಯೆ ಮಿತಿಮೀರಿದ ಡೆಂಗ್ಯೂ ಪ್ರಕರಣ; 4 ವರ್ಷಗಳಲ್ಲೇ ಅತಿ ಹೆಚ್ಚು ಕೇಸ್​ ದಾಖಲು
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Nov 03, 2021 | 10:46 AM

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡೆಂಗ್ಯೂ ಜ್ವರ (Dengue Cases)ದ ಆತಂಕ ಹೆಚ್ಚಾಗಿದೆ. ಅಕ್ಟೋಬರ್​ ಒಂದೇ ತಿಂಗಳಲ್ಲಿ ಬರೋಬ್ಬರಿ 1200 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಈ ವರ್ಷ ಇಲ್ಲಿಯವರೆಗೆ 1530 ಮಂದಿ ಈ ಜ್ವರ ಪೀಡಿತರಾಗಿದ್ದಾರೆ. ಅದರಲ್ಲೂ ಕಳೆದ ನಾಲ್ಕು ವರ್ಷದಲ್ಲಿ ಒಂದು ತಿಂಗಳಲ್ಲಿ ಇಷ್ಟು ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಇದೇ ಮೊದಲಬಾರಿ ಎಂದು ಹೇಳಲಾಗಿದೆ. 

ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2017ರ ಅಕ್ಟೋಬರ್​ ತಿಂಗಳಲ್ಲಿ 2022 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದವು. ಅದಾದ ಮೇಲೆ ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ 1200 ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಸೋಮವಾರ ಡೆಂಗ್ಯೂದಿಂದ ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲಿಗೆ ಡೆಂಗ್ಯೂದಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, ಇದೂ ಕೂಡ 2017ರಿಂದ ಈಚೆಗೆ ಅತಿಹೆಚ್ಚಿನ ಸಂಖ್ಯೆಯ ಡೆಂಗ್ಯೂ ಸಾವಾಗಿದೆ. 2017ರಲ್ಲಿ ಒಟ್ಟು 10 ಮಂದಿ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದರು.

ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಇದಕ್ಕೆ ಸಂಬಂಧಪಟ್ಟ ಡಾಟಾವನ್ನು ದಕ್ಷಿಣ ದೆಹಲಿ ಮುನ್ಸಿಪಲ್​ ಕಾರ್ಪೋರೇಶನ್​ ಸೋಮವಾರ ಬಿಡುಗಡೆ ಮಾಡಿದೆ. ಅದರ ಅನ್ವಯ ಅಕ್ಟೋಬರ್​ 30ರವರೆಗೆ ದೆಹಲಿಯಲ್ಲಿ 1537 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.  ಹಿಂದಿನ ಡಾಟಾ ಅವಲೋಕಿಸುವುದಾದರೆ 2020ರಲ್ಲಿ ಜನವರಿ 1ರಿಂದ ಅಕ್ಟೋಬರ್​ 30ರವರೆಗೆ 612 ಡೆಂಗ್ಯೂ ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. 2019ರಲ್ಲಿ ಈ ಅವಧಿಯಲ್ಲಿ 1069 ಹಾಗೂ 2018ರ ಈ ಅವಧಿಯಲ್ಲಿ 1595 ಕೇಸ್​ಗಳು ದಾಖಲಾಗಿದ್ದವು. 2018ಕ್ಕೆ ಹೋಲಿಸಿದರೆ ಈ ಅವಧಿಯ ಒಟ್ಟಾರೆ ಪ್ರಕರಣ ಕಡಿಮೆಯಾದರೂ ಅಕ್ಟೋಬರ್​ ಒಂದೇ ತಿಂಗಳಲ್ಲಿ ಪತ್ತೆಯಾದ ಕೇಸ್​ಗಳ ಸಂಖ್ಯೆ ಹೆಚ್ಚಾಗಿದೆ.

ಸೊಳ್ಳೆಗಳಿಂದ ಬರುವ ಡೆಂಗ್ಯೂ ರೋಗ ದೆಹಲಿಯಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ನಿನ್ನೆ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಪರಿಶೀಲನಾ ಸಭೆ ನಡೆಸಿದ್ದಾರೆ. ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮತ್ತು ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು, ಸಚಿವರೊಂದಿಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ತವರಿನಲ್ಲಿ ಬಿಜೆಪಿಗೆ ಸೋಲು: ರಾಜ್ಯ ಬಿಜೆಪಿ ಘಟಕಕ್ಕೆ ಅಭಿನಂದನೆ ಸಲ್ಲಿಸದ ಜೆ.ಪಿ.ನಡ್ಡಾ-ಅಮಿತ್ ಶಾ!

ಈ ಎಂಡೋಮೆಂಟ್ ಪಾಲಿಸಿಯಲ್ಲಿ ದಿನಕ್ಕೆ 95 ರೂಪಾಯಿ ಪಾವತಿಸಿ ಮೆಚ್ಯೂರಿಟಿ ವೇಳೆ 14 ಲಕ್ಷ ರೂ. ಪಡೆಯಿರಿ

Published On - 10:45 am, Wed, 3 November 21

ತಾಜಾ ಸುದ್ದಿ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ವಿದ್ಯುತ್ ದೀಪದ ಬೆಳಕಲ್ಲಿ ಕಣ್ಮನ ಸೆಳೆದ ತುಂಗಭದ್ರಾ ಜಲಾಶಯ, ವಿಡಿಯೋ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಪ್ರಶ್ನೆಗಳಿಗೆ ಉತ್ತರಿಸುವ ಬದಲು ಸಿಎಂ ಹೇಡಿಯಂತೆ ಓಡಿಹೋಗಿದ್ದಾರೆ: ಅಶೋಕ
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಮುಡಾ ಹಗರಣ: ನ್ಯಾಯ ಕೇಳಲು ರಾಜ್ಯಪಾಲರಲ್ಲಿಗೆ ಹೋದ ವಿರೋಧ ಪಕ್ಷಗಳ ಶಾಸಕರು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಶಿರೂರು ಗುಡ್ಡ ಕುಸಿತ: ನದಿಯಲ್ಲಿ ತೇಲಿಬಂತು ಟ್ರಕ್​ನಲ್ಲಿದ್ದ ಮರದ ತುಂಡು
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಬಿಜೆಪಿ ನಾಯಕರಿಂದ ಹೂವು ನೀಡಿ ಮನವೊಲಿಸುವ ಪ್ರಯತ್ನಕ್ಕೂ ಮಣಿಯದ ಸ್ಪೀಕರ್
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಅರ್ಜುನ್ ಮತ್ತಿಬ್ಬರ ಶೋಧ ಜಾರಿ, ಡ್ರೋನ್ ಮತ್ತು ಕೋಸ್ಟ್ ಗಾರ್ಡ್ ಚಾಪರ್ ಬಳಕೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
ಮೃತ ಮಾಲೀಕನಿಗಾಗಿ ಹುಡುಕಾಡುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ ಇಲ್ಲಿದೆ
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
13 ವರ್ಷದ ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಹೇಗಿದ್ದರು: ಜೈಲಧಿಕಾರಿ ನೆನಪು
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ವಾತಾವರಣ ಅನುಕೂಲಕರವಾಗಿದೆ, ಬಿಜೆಪಿ ಸದಸ್ಯರು ಪಾದಯಾತ್ರೆ ಮಾಡಲಿ: ಖರ್ಗೆ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜನರ ಹುಚ್ಚಾಟ