AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ಸುಷ್ಮಾ ಚಕ್ರೆ
|

Updated on:Apr 21, 2025 | 8:32 PM

Share

ದೆಹಲಿಯ ತಮ್ಮ ಸರ್ಕಾರಿ ನಿವಾಸಕ್ಕೆ ಜೆಡಿ ವ್ಯಾನ್ಸ್ ಕುಟುಂಬವನ್ನು ಬರಮಾಡಿಕೊಂಡು ಪ್ರಧಾನಿ ಮೋದಿ ತಮ್ಮ ಬಂಗಲೆಯ ಲಾನ್​ನಲ್ಲಿರುವ ನವಿಲುಗಳನ್ನು ತೋರಿಸುತ್ತಾ ಜೆಡಿ ವ್ಯಾನ್ಸ್ ಅವರ ಮಕ್ಕಳ ಜೊತೆ ಎಂಜಾಯ್ ಮಾಡಿದ್ದಾರೆ. ಬಳಿಕ ಪ್ರಧಾನಿ ಮೋದಿ ಜೆಡಿ ವ್ಯಾನ್ಸ್ ಅವರ ಮೂವರು ಮಕ್ಕಳಿಗೂ ನವಿಲುಗರಿಗಳನ್ನು ನೀಡಿದ್ದಾರೆ. ಅದನ್ನು ಹಿಡಿದು ಆ ಮಕ್ಕಳು ಕುಣಿದಾಡಿರುವ ವಿಡಿಯೋ ವೈರಲ್ ಆಗಿದೆ.

ನವದೆಹಲಿ, ಏಪ್ರಿಲ್ 21: ಭಾರತಕ್ಕೆ 4 ದಿನಗಳ ಪ್ರವಾಸಕ್ಕಾಗಿ ಭೇಟಿ ನೀಡಿರುವ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇಂದು ಸಂಜೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ದೆಹಲಿಯ ತಮ್ಮ ಸರ್ಕಾರಿ ನಿವಾಸಕ್ಕೆ ಜೆಡಿ ವ್ಯಾನ್ಸ್ (JD Vance) ಕುಟುಂಬವನ್ನು ಬರಮಾಡಿಕೊಂಡು ಪ್ರಧಾನಿ ಮೋದಿ ತಮ್ಮ ಬಂಗಲೆಯ ಲಾನ್​ನಲ್ಲಿರುವ ನವಿಲುಗಳನ್ನು ತೋರಿಸುತ್ತಾ ಜೆಡಿ ವ್ಯಾನ್ಸ್ ಅವರ ಮಕ್ಕಳ ಜೊತೆ ಎಂಜಾಯ್ ಮಾಡಿದ್ದಾರೆ. ಮೋದಿಯವರ (PM Narendra Modi) ತೊಡೆ ಮೇಲೆ ಹತ್ತಿ ಕುಳಿತ ಜೆಡಿ ವ್ಯಾನ್ಸ್ ಅವರ ಮಕ್ಕಳು ತುಂಟಾಟವಾಡುತ್ತಾ ಮನೆಯ ತುಂಬ ಓಡಾಡಿ ಖುಷಿ ಪಟ್ಟಿದ್ದಾರೆ. ಬಳಿಕ ಪ್ರಧಾನಿ ಮೋದಿ ಜೆಡಿ ವ್ಯಾನ್ಸ್ ಅವರ ಮೂವರು ಮಕ್ಕಳಿಗೂ ನವಿಲುಗರಿಗಳನ್ನು ನೀಡಿದ್ದಾರೆ. ಅದನ್ನು ಹಿಡಿದು ಆ ಮಕ್ಕಳು ಕುಣಿದಾಡಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 21, 2025 08:32 PM

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More