‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ಹೊಸ ಜೀವನ ಶುರು ಮಾಡಿದ್ದೇನೆ’: ಚಂದನ್ ಶೆಟ್ಟಿ
ಚಂದನ್ ಶೆಟ್ಟಿ, ಅಪೂರ್ವಾ, ಸಂಜನಾ ಆನಂದ್ ಮುಂತಾದವರು ‘ಸೂತ್ರಧಾರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಚಂದನ್ ಶೆಟ್ಟಿ ಅವರು ಕೆಲವು ವಿಷಯಗಳನ್ನು ಹಂಚಿಕೊಂಡರು. ಈ ಚಿತ್ರದ ಮೂಲಕ ತಾವು ಹೊಸ ಜೀವನ ಶುರು ಮಾಡುತ್ತಿರುವುದಾಗಿ ಚಂದನ್ ಶೆಟ್ಟಿ ತಿಳಿಸಿದ್ದಾರೆ.
ಮೇ 9ರಂದು ಬಿಡುಗಡೆ ಆಗಲಿರುವ ‘ಸೂತ್ರಧಾರಿ’ (Suthradaari) ಸಿನಿಮಾದಲ್ಲಿ ಚಂದನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಇವೆಂಟ್ನಲ್ಲಿ ಚಂದನ್ ಶೆಟ್ಟಿ ಅವರು ತಂದೆಯ ಬಗ್ಗೆ ಮಾತನಾಡಿದರು. ‘ನಾನು ಹೀರೋ ಆಗಬೇಕು ಎಂಬುದು ನಮ್ಮ ತಂದೆಯ ಕನಸು. ಅದು ಮೇ 9ರಂದು ನನಸಾಗುತ್ತಿದೆ. ನಮ್ಮ ಸಿನಿಮಾಗೆ ಬೆಂಬಲ ನೀಡಿ. ನಾನು ಈ ಸಿನಿಮಾ ಮೂಲಕ ಹೊಸ ಜೀವನ ಶುರು ಮಾಡಿದ್ದೇನೆ. ನಾನು ಈ ಸಿನಿಮಾ ಒಪ್ಪಿಕೊಳ್ಳಲು ನಿರ್ಮಾಪಕ ನವರಸನ್ ಅವರೇ ಕಾರಣ’ ಎಂದು ಚಂದನ್ ಶೆಟ್ಟಿ (Chandan Shetty) ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

