VIDEO: ಔಟಾ… ನಾಟೌಟಾ… ಇದು ಕನ್ನಡಿಗನ ಕೂಲ್ ಕ್ಯಾಚ್
IPL 2025 KKR vs GT: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 39ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 198 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ಕೇವಲ 159 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 39ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ಪರ ಆಡುತ್ತಿರುವ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ (Prasidh Krishna) ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಈ ಪಂದ್ಯದ 17ನೇ ಓವರ್ನಲ್ಲಿ ಪ್ರಸಿದ್ಧ್ ಕೃಷ್ಣ ಅವರನ್ನು ಎದುರಿಸಿದ ಕೆಕೆಆರ್ ಬ್ಯಾಟರ್ ರಮಣ್ದೀಪ್ ಸಿಂಗ್ ಸ್ಟ್ರೈಟ್ ಹಿಟ್ ಬಾರಿಸಿದ್ದರು.
ಗಾಳಿಯಲ್ಲಿ ವೇಗವಾಗಿ ಬಂದ ಚೆಂಡನ್ನು ಪ್ರಸಿದ್ಧ್ ಕೃಷ್ಣ ಕೂಲ್ ಹಿಡಿದು, ಅಷ್ಟೇ ಕೂಲಾಗಿ ನಡೆದುಕೊಂಡು ಹೋದರು. ಕನ್ನಡಿಗನ ಈ ಕೂಲ್ ಸೆಲೆಬ್ರೇಷನ್ನಿಂದಾಗಿ ರಮಣ್ದೀಪ್ ಸಿಂಗ್ ಔಟಾ ಅಥವಾ ನಾಟೌಟಾ ಎಂಬ ಗೊಂದಲಕ್ಕೊಳಗಾದರು. ಇದೀಗ ಈ ಕೂಲ್ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ ಕೆಕೆಆರ್ ತಂಡವು 20 ಓವರ್ಗಳಲ್ಲಿ 159 ರನ್ಗಳಿಸಿ 39 ರನ್ಗಳಿಂದ ಸೋಲೊಪ್ಪಿಕೊಂಡಿದೆ.