PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025 PSZ vs KRK: ಕರಾಚಿಯಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡವು 20 ಓವರ್ಗಳಲ್ಲಿ 147 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ ತಂಡ 19.3 ಓವರ್ಗಳಲ್ಲಿ 148 ರನ್ಗಳಿಸಿ 2 ವಿಕೆಟ್ಗಳ ಗೆಲುವು ದಾಖಲಿಸಿದೆ.
ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ (PSL 2025) ಬಾಬರ್ ಆಝಂ (Babar Azam) ಕಳಪೆ ಫಾರ್ಮ್ ಮುಂದುವರೆದಿದೆ. ಈ ಕಳಪೆ ಫಾರ್ಮ್ನಿಂದ ಹೊರಬರಲು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಇದೀಗ ಟ್ರೋಲ್ಗೆ ಒಳಗಾಗಿದ್ದಾರೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಿಎಸ್ಎಲ್ನ 11ನೇ ಪಂದ್ಯದಲ್ಲಿ ಪೇಶಾವರ್ ಝಲ್ಮಿ ಹಾಗೂ ಕರಾಚಿ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕರಾಚಿ ಕಿಂಗ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ಪರ ಬಾಬರ್ ಆಝಂ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ 10 ಓವರ್ ತನಕ ಬ್ಯಾಟ್ ಬೀಸಿದ ಬಾಬರ್ ಬಾರಿಸಿದ್ದು ಕೇವಲ 7 ಫೋರ್ಗಳು ಮಾತ್ರ. ಈ ವೇಳೆ ಕಲೆಹಾಕಿದ್ದು 46 ರನ್ಗಳು.
ಈ 46 ರನ್ಗಳನ್ನು ಕಲೆಹಾಕಲು ಬಾಬರ್ ಆಝಂ ಬರೋಬ್ಬರಿ 41 ಎಸೆತಗಳನ್ನು ಎದುರಿಸಿದ್ದಾರೆ. ಹೀಗಾಗಿಯೇ ಇದೀಗ ಬಾಬರ್ ಇನಿಂಗ್ಸ್ ಅನ್ನು ಟಿ20 ಕ್ರಿಕೆಟ್ನ ಟೆಸ್ಟ್ ಬ್ಯಾಟಿಂಗ್ ಎಂದು ಟ್ರೋಲ್ ಮಾಡಲಾಗುತ್ತಿದೆ. ಇನ್ನು ಬಾಬರ್ ಆಝಂ ಅವರ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ ಪೇಶಾವರ್ ಝಲ್ಮು ತಂಡವು 20 ಓವರ್ಗಳಲ್ಲಿ 147 ರನ್ಗಳಿಸಲಷ್ಟೇ ಶಕ್ತರಾದರು. ಈ ಗುರಿಯನ್ನು ಬೆನ್ನತ್ತಿದ ಕರಾಚಿ ಕಿಂಗ್ಸ್ ತಂಡವು 19.3 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 2 ವಿಕೆಟ್ಗಳ ಜಯ ಸಾಧಿಸಿದೆ.